HEALTH TIPS

ವಿಪಕ್ಷಗಳ ಒಗ್ಗಟ್ಟಿಗೆ ಕಾಂಗ್ರೆಸ್‌ ನಿಜವಾದ ಆಧಾರ: ಶಶಿ ತರೂರ್

 

               ನವದೆಹಲಿ: ದೇಶದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಮೂಡುತ್ತಿರುವುದು ಸ್ವಾಗತಾರ್ಹ. ಕಾಂಗ್ರೆಸ್‌ ಪಕ್ಷವೇ ನಿಜವಾದ ಆಧಾರದಂತೆ ಕಾರ್ಯನಿರ್ವಹಿಸಲಿದ್ದು, ಉಳಿದ ಪಕ್ಷಗಳು ಅದರೊಂದಿಗೆ ಸೇರಿಕೊಳ್ಳುತ್ತವೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಭಾನುವಾರ ಹೇಳಿದ್ದಾರೆ.

                  'ಒಂದು ವೇಳೆ ನಾನು ಪಕ್ಷದ ನಾಯಕತ್ವ ವಹಿಸಿದ್ದರೆ, ಮೈತ್ರಿಕೂಟದ ಸಂಚಾಲಕ ಜವಾಬ್ದಾರಿ ನಿರ್ವಹಿಸುವಂತೆ ಸಣ್ಣಪಕ್ಷವೊಂದಕ್ಕೆ ಅವಕಾಶ ನೀಡುತ್ತಿದ್ದೆ' ಎಂದೂ ತರೂರ್‌ ಹೇಳಿದ್ದಾರೆ.

                      ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

                 'ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ ಗಾಂಧಿ ಅವರಿಗೆ ಜೈಲು ಶಿಕ್ಷೆಯಾಗಿರುವುದು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಹೊಸ ದಿಕ್ಕು ತೋರಿದೆ. ಅನೇಕ ಪಕ್ಷಗಳು ಈಗ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿವೆ' ಎಂದು ಹೇಳಿದ್ದಾರೆ.

              'ಬಿಜೆಪಿ ವಿರುದ್ಧ ಒಗ್ಗಟ್ಟಾಗಲು ವಿರೋಧ ಪಕ್ಷಗಳಿಗೆ ಈಗ ಹೊಸ ಕಾರಣವೊಂದು ಸಿಕ್ಕಂತಾಗಿದೆ. ಹೀಗಾಗಿ, ಮುಂದಿನ ವರ್ಷ ನಡೆಯುವ ಚುನಾವಣೆ ಬಿಜೆಪಿ ಪಾಲಿಗೆ ಕಠಿಣವಾಗಲಿದೆ' ಎಂದೂ ಪ್ರತಿಪಾದಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries