HEALTH TIPS

ಹಸಿ ಕ್ಯಾರೆಟ್‌ ಒಳ್ಳೆಯದಾ? ಬೇಯಿಸಿದ ಕ್ಯಾರೆಟ್‌ ಒಳ್ಳೆಯದಾ?

 ಕ್ಯಾರೆಟ್‌ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕ್ಯಾರೆಟ್‌ ಹಸಿ ತಿನ್ನುತ್ತೇವೆ, ಬೇಯಿಸಿ ತಿನ್ನುತ್ತೇವೆ, ಆದರೆ ಕ್ಯಾರೆಟ್‌ ಹೇಗೆ ತಿಂದರೆ ತುಂಬಾ ಒಳ್ಳೆಯದು ಎಂದು ನೋಡೋಣ ಬನ್ನಿ:

ಕ್ಯಾರೆಟ್‌ ಬಗ್ಗೆ ಹೇಳುವುದಾದರೆ ಇದು ಪೋಷಕಾಂಶಗಳ ಆಗರ

ಕ್ಯಾರೆಟ್‌ನಲ್ಲಿ ವಿಟಮಿನ್ ಎ, ಸಿ ಮತ್ತು ಕೆ, ಕ್ಯಾಲ್ಸಿಯಂ, ಕಬ್ಬಿಣದಂಶ, ಪೊಟಾಷ್ಯಿಯಂ ಹಾಗೂ ನಾರಿನಂಶವಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಇದು ಕಣ್ಣಿನ ದೃಷ್ಟಿಗೆ ತುಂಬಾನೇ ಒಳ್ಳೆಯದು. ಕೆಲವೊಂದು ತರಕಾರಿಗಳನ್ನು ಹಸಿಯಲ್ಲಿ ತಿಂದರೆ ಒಳ್ಳೆಯದು, ಬೇಯಿಸಿದಾಗ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುವುದು. ಕ್ಯಾರೆಟ್‌ ಕೂಡ ಬೇಯಿಸಿದಾಗ ಅದರಲ್ಲಿ ಪೋಷಕಾಂಶಗಳು ಕಡಿಮೆಯಾಗುವುದೇ ಎಂದು ನೋಡೋಣ ಬನ್ನಿ:
ಕ್ಯಾರೆಟ್‌ ಬೇಯಿಸಿದಾಗ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗುವುದೇ? ಕ್ಯಾರೆಟ್‌ ಅನ್ನು ಬೇಯಿಸುವಾಗ ನಾವು ತರಕಾರಿಯನ್ನು ಕತ್ತರಿಸಿ ಬೇಯಿಸುತ್ತೇವೆ, ಕ್ಯಾರೆಟ್‌ ಕೂಡ ಕತ್ತರಿಸಿ ಬೇಯಿಸುತ್ತೇವೆ. ಇದರಿಂದ ಇದರಲ್ಲಿರುವ ಪೋಷಕಾಂಶಗಳನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ. ಕ್ಯಾರೆಟ್‌ ಅನ್ನು ಬೇಯಿಸಿದಾಗ ಅಥವಾ ಸ್ಟೀಮ್ ಮಾಡಿದಾಗ ಕ್ಯಾರೊಟೊನೈಯ್ಡ್ ಎಂಬ ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ. ಕ್ಯಾರೆಟ್‌ ಅನ್ನು ಬೇಯಿಸಿದಾಗ ದೇಹವು ಬೀಟಾ ಕೆರೊಟಿನ್‌ ಅನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ, ಹಸಿ ಕ್ಯಾರೆಟ್‌ನಲ್ಲಿ ಬೀಟಾ ಕೆರೊಟಿನ್‌ಗಿಂತ ಬೇಯಿಸಿದ ಕ್ಯಾರೆಟ್‌ನಲ್ಲಿರುವ ಬೀಟಾ ಕೆರೊಟಿನ್ ಅನ್ನು ನಮ್ಮ ದೇಹವು ಚೆನ್ನಾಗಿ ಹೀರಿಕೊಳ್ಳುತ್ತದೆ.
ಕಣ್ಣಿನ ಆರೋಗ್ಯಕ್ಕೆ ತಿನ್ನುವುದಾದರೆ ಹಸಿಯೇ ತಿನ್ನಿ ನೀವು ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್‌ ತಿನ್ನುವುದಾದರೆ ನೀವು ಬೇಯಿಸಿದ ಕ್ಯಾರೆಟ್‌ ಬದಲಿಗೆ ಹಸಿ ಕ್ಯಾರೆಟ್‌ ತಿನ್ನುವುದು ಒಳ್ಳೆಯದು. ಏಕೆಂದರೆ ಕ್ಯಾರೆಟ್ ಅನ್ನು ಬೇಯಿಸಿದಾಗ ವಿಟಮಿನ್‌ ಎ, ಸಿ ಕಡಿಮೆಯಾಗುವುದು. ಆದ್ದರಿಂದ ನೀವು ಕಣ್ಣಿನ ಆರೋಗ್ಯಕ್ಕಾಗಿ ಕ್ಯಾರೆಟ್‌ ಸೇವಿಸುವುದಾದರೆ ಹಸಿಯೇ ತಿನ್ನಿ.
ಕ್ಯಾರೆಟ್‌ ಹೀಗೆ ಬಳಸಿದರೆ ಒಳ್ಳೆಯದು? ನಿಮಗೆ ಕ್ಯಾರೆಟ್‌ ನ ಸಂಪೂರ್ಣ ಪ್ರಯೋಜನ ದೊರೆಯಲು ಬೇಯಿಸಿದ ಹಾಗೂ ಹಸಿ ಕ್ಯಾರೆಟ್‌ ಮಿಕ್ಸ್ ಬಳಸಬಹುದು. ಸಾರು, ಪಲ್ಯದಲ್ಲಿ ಬಳಸಿದಾಗ ಬೇಯಿಸಿದ ಕ್ಯಾರೆಟ್‌ ದೇಹವನ್ನು ಸೇರುತ್ತದೆ, ಸಲಾಡ್‌ನಲ್ಲಿ ಹಸಿ ಕ್ಯಾರೆಟ್‌ ಸೇರಿಸಿ. ಇದರಿಂದ ಬೇಯಿಸಿದಾಗ ಸಿಗುವ ಪ್ರಯೋಜನ ಹಾಗೂ ಹಸಿ ತಿಂದಾಗ ಸಿಗುವ ಪ್ರಯೋಜನ ಸಿಗುವುದು.ಈ ಬಗೆಯ ಆರೋಗ್ಯ ಸಮಸ್ಯೆಯಿದ್ದರೆ 
 ಹಾರ್ಮೋನ್ ಸಮಸ್ಯೆಯಿದ್ದರೆ ಹಾರ್ಮೋನ್‌ಗಳ ಅಸಮತೋಲನವಿದ್ದರೆ ಹಸಿ ಕ್ಯಾರೆಟ್‌ ತಿನ್ನುವುದು ಒಳ್ಳೆಯದು. ಹಸಿ ಕ್ಯಾರೆಟ್‌ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟಿರಿಯಾ ಕಡಿಮೆ ಮಾಡಲು ಸಹಕಾರಿ. ಇದಇಂದ ಮೊಡವೆ, ಪಿಎಂಎಸ್, ಮೂಡ್‌ ಸ್ವಿಂಗ್ ಈ ಬಗೆಯ ಸಮಸ್ಯೆ ತಡೆಗಟ್ಟಲು ಕೂಡ ಸಹಕಾರಿ.  
ದೇಹವನ್ನು ಡಿಟಾಕ್ಸ್ ಮಾಡುತ್ತದೆ ಹಸಿ ಕ್ಯಾರೆಟ್‌ ಪ್ರತಿದಿನ ತಿನ್ನುತ್ತಿದ್ದರೆ ಕ್ಯಾರೆಟ್‌ ದೇಹವನ್ನು ಡಿಟಾಕ್ಸ್ ಮಾಡುವುದು ಅಂದರೆ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕಲು ಸಹಕಾರಿ. ಅತ್ಯಧಿಕ ಈಸ್ಟ್ರೋಜನ್‌ ಇದ್ದರೆ ಕಡಿಮೆ ಮಾಡುತ್ತದೆ 
ಈಸ್ಟ್ರೋಜನ್ ಪ್ರಮಾಣ ಹೆಚ್ಚಾಗಿದ್ದರೆ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು. ಹಸಿ ಕ್ಯಾರೆಟ್ ತಿನ್ನುವುದರಿಂದ ಅತ್ಯಧಿಕ ಈಸ್ಟ್ರೋಜನ್ ಕಡಿಮೆ ಮಾಡುತ್ತದೆ, ಇದರಿಂದ ಚಯಪಚಯ ಕ್ರಿಯೆ ಉತ್ತಮವಾಗುವುದು.
ತ್ವಚೆಯ ಹೊಳಪು ಹೆಚ್ಚುವುದು ಕ್ಯಾರೆಟ್‌ನಲ್ಲಿ ವಿಟಮಿಬ್‌ ಎ ಮತ್ತು ಬೀಟಾ ಕೆರೋಟಿನ್‌ ಇದೆ, ಇದರಿಂದ ತ್ವಚೆ ಹೊಳಪು ಹೆಚ್ಚಾಗುವುದು.
 ಕ್ಯಾರೆಟ್‌ ಅಡ್ಡಪರಿಣಾಮಗಳು 
* ಅಲರ್ಜಿ ಕೆಲವರಿಗೆ ಕ್ಯಾರೆಟ್‌ ತಿಂದಾಗ ಅಲರ್ಜಿ ಉಂಟಾಗುವುದು, ನಿಮಗೆ ಕ್ಯಾರೆಟ್‌ನಿಂದ ಅಲರ್ಜಿ ಉಂಟಾಗುತ್ತಿದ್ದರೆ ತಿನ್ನಬೇಡಿ. 
ಕ್ಯಾರೆಟ್‌ ತಿಂದಾಗ ಅಲರ್ಜಿ ಉಂಟಾಗುತ್ತದೆ ಎಂದು ತಿಳಿಯುವುದು ಹೇಗೆ? ಕ್ಯಾರೆಟ್ ತಿಂದಾಗ ತ್ವಚೆಯಲ್ಲಿ ಗುಳ್ಳೆಗಳು ಏಳುವುದು, ಬೇಧಿ ಉಂಟಾಗಬಹುದು, ತುರಿಕೆ, ಊತ ಈ ಬಗೆಯ ಸಮಸ್ಯೆ ಕಂಡು ಬರುವುದು.
 ಮಧುಮೇಹಿಗಳಿಗೆ ಒಳ್ಳೆಯದಲ್ಲ ಮಧುಮೇಹಿಗಳು ಕ್ಯಾರೆಟ್‌ ತಿಂದರೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ಆದ್ದರಿಂದ ಮಧುಮೇಹಿಗಳು ಕ್ಯಾರೆಟ್‌ ತಿನ್ನಬೇಡಿ, ತಿನ್ನವುದಾದರೆ ಹಬೆಯಲ್ಲಿ ಬೇಯಿಸಿದ ಕ್ಯಾರೆಟ್‌ ಅಲ್ಪ ಪ್ರಮಾಣದಲ್ಲಿ ಸೇವಿಸಿ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries