ಎರ್ನಾಕುಳಂ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಳೆದು ಹೋಗಿದ್ದ ರಮೀಸ್ ನ ಪೋನ್ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರೊಂದಿಗಿನ ಸಂಭಾಷಣೆ ಮತ್ತು ಸಂದೇಶಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮಾಹಿತಿಯಿಂದ, ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಇಬ್ಬರೂ ನಡೆಸಿದ ಚರ್ಚೆಗಳ ಬಗ್ಗೆ ಇ.ಡಿ. ಪುರಾವೆಗಳನ್ನು ಪಡೆದುಕೊಂಡಿದೆ.
ಪ್ರಕರಣದ ಮಾಸ್ಟರ್ ಮೈಂಡ್ ಕೆ.ಟಿ.ರಮೀಸ್ ನನ್ನು ನಿನ್ನೆ ಬಂಧಿಸಲಾಗಿತ್ತು. ಈ ಹಿಂದೆ ಆತನನ್ನು ಮೂರು ಬಾರಿ ವಿಚಾರಣೆ ನಡೆಸಲಾಗಿತ್ತು. ನಾಲ್ಕನೇ ಬಾರಿಗೆ ವಿಚಾರಣೆಗೆ ಕರೆದ ನಂತರ, ಇಡಿ ಬಂಧಿಸಿತು.
ಪ್ರಕರಣದ ಐದನೇ ಆರೋಪಿ ರಮೀಜ್ ದುಬೈನಿಂದ ಚಿನ್ನವನ್ನು ರವಾನಿಸಿದ್ದ. ವಿದೇಶದಲ್ಲಿದ್ದುಕೊಂಡು ಚಿನ್ನ ಕಳ್ಳಸಾಗಣೆ ನಿಯಂತ್ರಿಸುತ್ತಿದ್ದವ ರಮೀಜ್ ಎಂಬುದು ತನಿಖಾ ಸಂಸ್ಥೆಗಳ ನಿರ್ಣಯವಾಗಿದೆ. ಇದಕ್ಕೂ ಮುನ್ನ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಕಸ್ಟಮ್ಸ್ ರಮೀಜ್ ನನ್ನು ಬಂಧಿಸಿತ್ತು.
ಚಿನ್ನ ಕಳ್ಳಸಾಗಣೆ ಪ್ರಕರಣ; ರಮೀಸ್ ನ ಪೋನ್ ದಾಖಲೆಗಳು ಪತ್ತೆ; ಎಂ. ಶಿವಶಂಕರ್ ಅವರೊಂದಿಗಿನ ಸಂಭಾಷಣೆಗಳು ಲಭ್ಯ
0
ಏಪ್ರಿಲ್ 08, 2023
Tags


