HEALTH TIPS

ಕ್ಷಮಾದಾನ ಅರ್ಜಿ: ತ್ವರಿತ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

 

              ನವದೆಹಲಿ (PTI): ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ಆದಷ್ಟೂ ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಕ್ರಮವಹಿಸಬೇಕು ಎಂದು ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಗಳು ಮತ್ತು ಸಂಬಂಧಿತ ಆಡಳಿತಗಳಿಗೆ ನಿರ್ದೇಶಿಸಿದೆ.

                  ಕ್ಷಮಾದಾನ ಅರ್ಜಿ ಇತ್ಯರ್ಥವಾಗುವುದು ವಿಳಂಬವಾಗುತ್ತಿರುವುದರ ಲಾಭವನ್ನು ಅಪರಾಧಿಗಳು ಪಡೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಮಾನದ ನಂತರವೂ ಕ್ಷಮಾದಾನ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ಇದರಿಂದ ಮರಣದಂಡನೆ ಶಿಕ್ಷೆ ಉದ್ದೇಶವೇ ಈಡೇರುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

                     ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠವು ಈ ಕುರಿತು ನಿರ್ದೇಶನ ನೀಡಿತು. 'ಸಂಬಂಧಿತ ಸರ್ಕಾರಗಳು ತ್ವರಿತ ತೀರ್ಮಾನ ತೆಗೆದುಕೊಳ್ಳಬೇಕು. ಇದರಿಂದ ಅಪರಾಧಿಗಳಿಗೆ ತನ್ನ ಹಣೆಬರಹ ತಿಳಿಯಲಿದೆ ಹಾಗೂ ಸಂತ್ರಸ್ತರಿಗೆ ನ್ಯಾಯವೂ ಸಿಗಲಿದೆ' ಎಂದು ಪೀಠ ಹೇಳಿತು.‌

                   ಮಹಿಳೆ ಮತ್ತು ಆಕೆಯ ಸಹೋದರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಪರಿಷ್ಕರಿಸಿದ್ದ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಪೀಠವು ಈ ಕುರಿತ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

                     ಕ್ಷಮಾದಾನ ಅರ್ಜಿ ಕುರಿತು ತೀರ್ಮಾನಿಸಲು ರಾಜ್ಯ ಸರ್ಕಾರ/ರಾಜ್ಯಪಾಲರ ಕಚೇರಿಯಲ್ಲಿ ತೀರಾ ವಿಳಂಬವಾಗಿದೆ ಎಂಬುದರ ಆಧಾರದಲ್ಲಿ ಹೈಕೋರ್ಟ್, ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಸಜೆಯಾಗಿ ಪರಿವರ್ತಿಸಿತ್ತು. ಈ ಪ್ರಕರಣದಲ್ಲಿ ಕ್ಷಮಾದಾನ ಅರ್ಜಿಯು 7 ರಿಂದ 10 ವರ್ಷದವರೆಗೆ ಬಾಕಿ ಉಳಿದಿತ್ತು.

                 13 ಮಂದಿ ಮಕ್ಕಳನ್ನು ಅಪಹರಿಸಿ, ಈ ಪೈಕಿ ಒಂಬತ್ತು ಮಕ್ಕಳನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ 2001ರಲ್ಲಿ ಕೊಲ್ಹಾಪುರದ ಸ್ಥಳೀಯ ನ್ಯಾಯಾಲಯವು ಅಪರಾಧಿಗಳಿಗೆ ಮರಣದಂಡನೆ ಸಜೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ 2004ರಲ್ಲಿ, ತದನಂತರ ಸುಪ್ರೀಂ ಕೋರ್ಟ್ 2006ರಲ್ಲಿ ಎತ್ತಿಹಿಡಿದಿತ್ತು.

                  ಬಳಿಕ ಕ್ಷಮಾದಾನ ಅರ್ಜಿಯನ್ನು ರಾಜ್ಯಪಾಲರು 2013ರಲ್ಲಿ ಹಾಗೂ ರಾಷ್ಟ್ರಪತಿಗಳು 2014ರಲ್ಲಿ ತಿರಸ್ಕರಿಸಿದ್ದರು.

                  ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಐಶ್ವರ್ಯ ಭಾಟಿ ಅವರು, ಅಪರಾಧಿಗಳು ಎಸಗಿರುವ ಅಪರಾಧದ ಗಂಭೀರತೆಯ ಹಿನ್ನೆಲೆಯಲ್ಲಿ ಹೈಕೋರ್ಟ್ ಮರಣದಂಡನೆಯನ್ನು, ಯಾವುದೇ ರಿಯಾಯಿತಿ ನೀಡದೇ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿರಬಹುದು ಎಂದು ಹೇಳಿದರು.

              ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಆದೇಶವನ್ನು ಪರಿಷ್ಕರಿಸಿದ್ದು ಆರೋಪಿಗಳು ಜೀವಾವಧಿ ಸಜೆಯನ್ನು ಅನುಭವಿಸುವಂತೆ ಆದೇಶಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries