HEALTH TIPS

ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊಗೆ: ಪ್ರಯಾಣಿಕರು ಗಾಬರಿ

 

                ಅಮರಾವತಿ : ‌ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಗಾಬರಿ ಮೂಡಿಸಿದ ಪ್ರಸಂಗ ನೆಲ್ಲೂರಿನಲ್ಲಿ ಭಾನುವಾರ ನಡೆದಿದೆ.

                     ಜನರ ಈ ಗಾಬರಿಗೆ ಇತ್ತೀಚೆಗೆ ಕೇರಳದ ರೈಲು ಬೋಗಿಗೆ ಬೆಂಕಿಯಿಟ್ಟ ದುರ್ಘಟನೆಯೇ ಕಾರಣ ಎಂದು ನಂಬಲಾಗಿದೆ.

                    ಪ್ರಯಾಣದ ವೇಳೆ ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್‌ನ B-5ನೇ ಬೋಗಿಯಲ್ಲಿ ಹೊಗೆ ಎದ್ದಿರುವುದು ಕಂಡುಬಂತು. ಈ ಸಂದರ್ಭ ಆಗಬಹುದಾದ ದುರಂತ ತಪ್ಪಿಸುವ ಎಚ್ಚರಿಕೆಯಿಂದ ಚಾಲಕರು ರೈಲನ್ನು 20 ನಿಮಿಷಗಳ ಕಾಲ ಕಾವಾಲಿ ನಿಲ್ದಾಣದ ಸಮೀಪ ನಿಲ್ಲಿಸಿದರು.

                ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ರೈಲು ಬೋಗಿಯ ಬ್ರೇಕ್ ಜಾಮ್‌ನಿಂದ ಹೊಗೆ ಉಂಟಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

                   ದುರಸ್ತಿ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries