HEALTH TIPS

ಭಾರತದಲ್ಲಿ ತಯಾರಿಕೆ ಹೆಚ್ಚಿಸುವಲ್ಲಿ ಚೀನಾದಿಂದ ಆಮದುಗಳು ನಿರ್ಣಾಯಕವಾಗಿವೆ: ಅಧ್ಯಯನ

               ವದೆಹಲಿ: ಆಮದುಗಳಿಗಾಗಿ ಚೀನಾದ ಮೇಲಿನ ತನ್ನ ಅವಲಂಬನೆಯನ್ನು ತಗ್ಗಿಸಲು ಭಾರತವು ನೋಡುತ್ತಿದ್ದರೆ, ಚೀನಿ ಸರಕುಗಳು ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಮಾತ್ರವಲ್ಲ, ಕೆಲವು ಸಂದರ್ಭಗಳಲ್ಲಿ ಅವು ಭಾರತೀಯ ಉತ್ಪಾದಕರ ಆದ್ಯತೆಯನ್ನೂ ಪಡೆದಿವೆ.

                    ಚೀನಾದಿಂದ ಆಮದುಗಳು ಭಾರತದಲ್ಲಿ ಉತ್ಪಾದನೆಯನ್ನು ಉತ್ತೇಜಿಸುತ್ತಿವೆ. ಹೀಗಾಗಿ ಚೀನಿ ಉತ್ಪನ್ನಗಳು ಅಜೈವಿಕ ರಾಸಾಯನಿಕಗಳು,ಔಷಧಿಗಳು, ಕಬ್ಬಿಣ ಮತ್ತು ಉಕ್ಕಿನಂತಹ ಪ್ರಮುಖ ಕ್ಷೇತ್ರಗಳಲ್ಲಿ ಭಾರತದ ರಫ್ತುಗಳನ್ನೂ ಉತ್ತೇಜಿಸುತ್ತವೆ ಎಂದು ಅಧ್ಯಯನವನ್ನು ನಡೆಸಿದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ (ಐಐಎಫ್ಟಿ) ಹೇಳಿದೆ.

                ಆಮದು ಮಾಡಿಕೊಳ್ಳಲಾದ 32 ಉತ್ಪನ್ನ ಉಪ ವರ್ಗಗಳ ಶೇ.30ರಲ್ಲಿ ಚೀನಾ ಅತ್ಯಂತ ಅಗ್ಗದ ಪೂರೈಕೆದಾರನಾಗಿತ್ತು. ಉಳಿದ ಶೇ.70ಕ್ಕಾಗಿ ಅಗ್ಗದ ಪರ್ಯಾಯಗಳು ಲಭ್ಯವಿದ್ದರೂ ಚೀನಿ ಉತ್ಪನ್ನಗಳಿಗೆ ಆದ್ಯತೆಯನ್ನು ನೀಡಲಾಗಿತ್ತು ಎಂದು ಅಧ್ಯಯನವು ಹೇಳಿದೆ.

                       ಚೀನಿ ಉತ್ಪನ್ನಗಳು ಅಗ್ಗವಾಗಿರುವುದರಿಂದ ಅವುಗಳ ಆಮದುಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ತಪ್ಪುಕಲ್ಪನೆಯಿದೆ. ಖರೀದಿದಾರರು ಪಾವತಿಸಲು ಒಪ್ಪಿಕೊಂಡ ಬೆಲೆಯನ್ನು ಆಧರಿಸಿ ಚೀನಿ ಪೂರೈಕೆದಾರರು ಒದಗಿಸುವ ಸರಕುಗಳ ಗುಣಮಟ್ಟವು ಬದಲಾಗುತ್ತಿರುತ್ತದೆ ಎಂದು ಹೇಳಿರುವ ವರದಿಯ ಲೇಖಕಿ ಹಾಗೂ ಐಐಎಫ್ಟಿ ಪ್ರೊಫೆಸರ್ ಸುನೀತಾ ರಾಜು ಅವರು,'ಅನೇಕ ದೇಶಿಯ ಖರೀದಿದಾರರು ಇತರಡೆಗಳ ಉತ್ಪನ್ನಗಳಿಗಿಂತ ಚೀನಿ ಉತ್ಪನ್ನಗಳ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ ಎನ್ನುವುದನ್ನು ನಾವು ಅಧ್ಯಯನದಲ್ಲಿ ಕಂಡುಕೊಂಡಿದ್ದೇವೆ 'ಎಂದಿದ್ದಾರೆ.

                 ಚೀನಿ ಆಮದುಗಳನ್ನು ಅವಲಂಬಿಸಿರುವ ಕ್ಷೇತ್ರಗಳಲ್ಲಿ ಔಷಧಿಯು ಒಂದಾಗಿದೆ. ಈ ಆಮದುಗಳಿಲ್ಲದೆ ಈ ಕ್ಷೇತ್ರವು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲದ ಸ್ಥಿತಿಯಿದೆ.

                    ಔಷಧಿ ಉದ್ಯಮದ ಶೇ.60ಕ್ಕೂ ಅಧಿಕ ಕಚ್ಚಾ ವಸ್ತುಗಳು ಚೀನಾದಿಂದ ಆಮದಾಗುತ್ತವೆ. ಪರಿಣಾಮವಾಗಿ ಪೂರೈಕೆಯಲ್ಲಿ ವಿಳಂಬವಾದರೆ ಇಲ್ಲಿ ಉತ್ಪಾದನೆಯು ಸ್ಥಗಿತಗೊಳ್ಳುತ್ತದೆ ಎಂದು ಇಂಡೋಚೈನಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ನರೇಶ ಗುಪ್ತಾ ಹೇಳಿದರು.

                   'ಭಾರತದ ದೂರಸಂಪರ್ಕ ಉದ್ಯಮವೂ ಚೀನಿ ಆಮದುಗಳನ್ನು ಅತಿಯಾಗಿ ಅವಲಂಬಿಸಿದೆ. ಪರಿಣಾಮವಾಗಿ ಫೋನ್ನಂತಹ ದೂರಸಂಪರ್ಕ ಉಪಕರಣಗಳನ್ನು ನಾವು ಇಲ್ಲಿ ತಯಾರಿಸುತ್ತೇವೆ ನಿಜ,ಆದರೆ ಅವುಗಳ ಹೆಚ್ಚಿನ ಬಿಡಿಭಾಗಗಳು ಚೀನಾದಿಂದ ಆಮದಾಗುತ್ತವೆ. ಒಂದು ಅರ್ಥದಲ್ಲಿ,ನಾವು ಭಾರತದಲ್ಲಿ ಫೋನ್ಗಳನ್ನು ಜೋಡಣೆಗೊಳಿಸುತ್ತೇವೆ,ಅವುಗಳನ್ನು ತಯಾರಿಸುವುದಿಲ್ಲ 'ಎಂದು ಉದ್ಯಮದ ಹಿರಿಯರೋರ್ವರು ಹೇಳಿದರು.

              ಆತ್ಮನಿರ್ಭರ ಭಾರತಕ್ಕಾಗಿ ಪ್ರಸ್ತುತ ನೀತಿಯು ದೇಶಿಯ ಉತ್ಪಾದನೆಯನ್ನು ಉನ್ನತ ತಂತ್ರಜ್ಞಾನ ಉತ್ಪನ್ನಗಳಿಗೆ ಮೇಲ್ದರ್ಜೆಗೇರಿಸದ ಹೊರತು ಪರಿಣಾಮಕಾರಿಯಾಗುವುದಿಲ್ಲ. ಆಗ ಹೆಚ್ಚಿನ ಆಮದುಗಳು ಅಧಿಕ ರಫ್ತುಗಳಿಗೆ ಕಾರಣವಾಗುವುದರಿಂದ ಕಳವಳಕಾರಿಯಾಗುವುದಿಲ್ಲ ಎಂದು ಹೇಳಿರುವ ಅಧ್ಯಯನ ವರದಿಯು,ಉನ್ನತ ಗುಣಮಟ್ಟದ ಉತ್ಪಾದನೆಯ ಮೇಲೆ ಗಮನವನ್ನು ಕೇಂದ್ರೀಕರಿಸಿ ಆತ್ಮನಿರ್ಭರ ಭಾರತ ಅಭಿಯಾನದ ಮರು ವೌಲ್ಯಮಾಪನಕ್ಕೆ ಶಿಫಾರಸು ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries