ಕೋಝಿಕ್ಕೋಡ್: ಕೋಝಿಕ್ಕೋಡ್ ಪಂತಿರಂಗದಲ್ಲಿ ನಕ್ಸಲ್ ಭಯೋತ್ಪಾದಕನೋರ್ವನನ್ನು ಬಂಧಿಸಲಾಗಿದೆ. ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ ಪ್ರಾದೇಶಿಕ ಕಮಾಂಡರ್ ಅಜಯ್ ಒರಾನ್ ನನ್ನು ಬಂಧಿಸಲಾಗಿದೆ.
ಜಾರ್ಖಂಡ್ ಪೋಲೀಸರು ನೀಡಿದ ಮಾಹಿತಿ ಆಧರಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಪಂತಿರಂಗವ್ ಕೈಂಬಳಂನಲ್ಲಿ ಅತಿಥಿ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ರಾತ್ರಿ ಶೋಧದ ವೇಳೆ ಮಾವೋವಾದಿ ನಾಯಕನನ್ನು ಬಂಧಿಸಲಾಯಿತು.
ಬಂದೂಕು ಹೊಂದಿದ್ದಕ್ಕಾಗಿ ಜಾರ್ಖಂಡ್ ಪೋಲೀಸರು ಅಜಯ್ ಒರೊನಾನನ್ನು ಬಂಧಿಸಿದ್ದಾರೆ. ಜಾಮೀನಿನ ಮೇಲೆ ಹೊರಗಿದ್ದ ಆರೋಪಿ ಕಳೆದ ಒಂದು ತಿಂಗಳಿನಿಂದ ಕೇರಳದಲ್ಲಿ ತಲೆಮರೆಸಿಕೊಂಡಿದ್ದ. ಜಾರ್ಖಂಡ್ ನಲ್ಲಿ ರಸ್ತೆ ನಿರ್ಮಾಣ ಯಂತ್ರಗಳಿಗೆ ಬೆಂಕಿ ಹಚ್ಚಿದ ಘಟನೆಯ ಮಾಸ್ಟರ್ ಮೈಂಡ್ ಎಂದು ನಂಬಲಾಗಿದೆ. ಕೇರಳದಲ್ಲಿ ಯೋಜನೆ ರೂಪಿಸಿದ್ದ ಎಂದು ಪೋಲೀಸರು ತೀರ್ಮಾನಿಸಿದ್ದಾರೆ.
ಕೋಝಿಕ್ಕೋಡ್ ನಗರ ಪೋಲೀಸ್ ಆಯುಕ್ತ ರಾಜಪಾಲ್ ಮೀನಾ ಮತ್ತು ಐಜಿ ನೀರಜ್ ಕುಮಾರ್ ಗುಪ್ತಾ ಅವರು ಠಾಣೆಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಆರೋಪಿಯನ್ನು ಜಾರ್ಖqಂïನಿಂದ ಆಗಮಿಸಿದ ಮೂವರು ಸದಸ್ಯರ ಪೋಲೀಸ್ ತಂಡ ವಾಪಸ್ ಕರೆದೊಯ್ದಿದೆ.
ಕೇರಳದಲ್ಲಿ ಒಂದು ತಿಂಗಳು ತಲೆಮರೆಸಿಕೊಂಡಿದ್ದ ಜಾರ್ಖಂಡ್‍ನ ನಕ್ಸಲ್ ಭಯೋತ್ಪಾದಕ ಬಂಧನ
0
ಏಪ್ರಿಲ್ 19, 2023





