HEALTH TIPS

ಆಕ್ಸ್‌ಫಾಮ್ ಇಂಡಿಯಾ ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಶಿಫಾರಸು

 

                    ವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) 2010ರ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಆಕ್ಸ್‌ಫಾಮ್ ಇಂಡಿಯಾ ಸಂಸ್ಥೆಯ ವ್ಯವಹಾರಗಳ ಕುರಿತಂತೆ ಸಿಬಿಐ ತನಿಖೆಗೆ ಕೇಂದ್ರದ ಗೃಹ ಸಚಿವಾಲಯ ಶಿಫಾರಸು ಮಾಡಿದೆ.

                      ಎಫ್‌ಸಿಆರ್‌ಎ ಕಾಯ್ದೆ ಅಡಿ ನೋಂದಾವಣೆ ಮಾಡಿಕೊಂಡ ಬಳಿಕವೂ ಆಕ್ಸ್‌ಫಾಮ್‌ ಸಂಸ್ಥೆಯು ಬೇರೆ ಸಂಸ್ಥೆಗಳಿಗೆ ನಿಯಮ ಮೀರಿ ವಿದೇಶಿ ದೇಣಿಗೆಯನ್ನು ವರ್ಗಾವಣೆ ಮಾಡುವುದನ್ನು ಮುಂದುವರಿಸಿರುವ ಮಾಹಿತಿಯನ್ನು ಗೃಹ ಸಚಿವಾಲಯ ಕಲೆ ಹಾಕಿದೆ.

                    ಲಾಭ ತಂದುಕೊಡುವಂತಹ ಮಾರ್ಗಗಳನ್ನು ಬಳಸಿ, ಕೆಲ ಸಂಸ್ಥೆಗಳಿಗೆ 'ಆಕ್ಸ್‌ಫಾಮ್ ಇಂಡಿಯಾ' ಹಣ ವರ್ಗಾವಣೆ ಮಾಡುತ್ತಿತ್ತು. ಇಂಥ ವಹಿವಾಟಿನ ಮೂಲಕ ಎಫ್‌ಸಿಆರ್‌ಎ ನಿಯಮಗಳಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದು ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆಯಿಂದ ತಿಳಿದು ಬಂದಿತ್ತು ಎಂದೂ ಅಧಿಕಾರಿಗಳು ಹೇಳಿದ್ದಾರೆ.

              ಆಕ್ಸ್‌ಫಾಮ್ ಇಂಡಿಯಾ ವಿದೇಶಿ ಸಂಸ್ಥೆಗಳ ಸಾಧನವಾಗಿರುವ ಸಾಧ್ಯತೆ ಇದೆ ಎಂಬುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಹಲವು ವರ್ಷಗಳಿಂದ ಸಂಸ್ಥೆಗೆ ಉದಾರವಾಗಿ ದೇಣಿಗೆ ಹರಿದುಬಂದಿದೆ ಎಂದು ಸಚಿವಾಲಯ ಹೇಳಿದೆ.

                ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲು ನೋಂದಾಯಿಸಿಕೊಂಡಿರುವ ಆಕ್ಸ್‌ಫ್ಯಾಮ್ ಇಂಡಿಯಾ, ತನ್ನ ಸಹವರ್ತಿಗಳು ಮತ್ತು ಉದ್ಯೋಗಿಗಳ ಮೂಲಕ ನೀತಿ ಸಂಶೋಧನಾ ಕೇಂದ್ರಕ್ಕೆ (ಸಿಪಿಆರ್) ಕಮಿಷನ್ ರೂಪದಲ್ಲಿ ಹಣವನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries