ಕುಂಬಳೆ: ನವಕೇರಳ ಕ್ರಿಯಾಯೋಜನೆಯ ಆದ್ರ್ರ ಮಿಷನ್‍ನ ಎರಡನೇ ಹಂತದ ಅಂಗವಾಗಿ ಕುಂಬಳೆ ಪಂಚಾಯತಿ ಆರಿಕ್ಕಾಡಿ ಕುಟುಂಬ ಆರೋಗ್ಯ ಕೇಂದ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್ ಲೈನ್ ಮೂಲಕ ಉದ್ಘಾಟಿಸಿದರು. ಸಚಿವೆ ವೀಣಾ ಜಾರ್ಜ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಸಿದ್ದೀಕ್, ಕುಂಬಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಸಿರ್ ಮೊಗ್ರಾಲ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಸಬೂರ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಸೀಮಾ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ.ರಹಮಾನ್, ಕುಂಬಳೆ ಪಂಚಾಯತಿ ಸದಸ್ಯರಾದ ಕೌಲತ್ ಬೀವಿ, ವಿದ್ಯಾ ಎನ್.ಪೈ, ಅಜಯ್ ಮತ್ತಿತರರಿದ್ದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಸ್ವಾಗತಿಸಿ, ವೈದ್ಯಾಧಿಕಾರಿ ಸ್ಮಿತಾ ವಂದಿಸಿದರು.




.jpeg)
.jpeg)
