HEALTH TIPS

ಕಾನೂನಿಂದ ಬೇರ್ಪಟ್ಟ ಇವರು ನೆಟ್​ಫ್ಲಿಕ್ಸ್​ನಿಂದ ಒಂದಾಗಿದ್ದಾರೆ! ಫೋಟೋ ಜತೆಗೆ ಸಚಿವರ ಶೀರ್ಷಿಕೆಯೂ ವೈರಲ್

                 ನಾಗಾಲ್ಯಾಂಡ್: ಕೈಗೆ ಬೇಡಿ ತೊಡಿಸಿಕೊಂಡ ಕೈದಿಯೊಬ್ಬ, ಪಕ್ಕದಲ್ಲಿ ಕುಳಿತಿದ್ದ ಪೊಲೀಸ್ ಕಾನ್​​ಸ್ಟೇಬಲ್​ ಒಬ್ಬರ ಮೊಬೈಲ್ ವೀಕ್ಷಣೆ ಮಾಡುತ್ತಿರುವ ಫೋಟೋವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಈ ಫೋಟೋವನ್ನು ನಾಗಾಲ್ಯಾಂಡ್​ನ ಬಿಜೆಪಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ತಮಾಷೆಯಾಗಿ ಕ್ಯಾಪ್ಶನ್ ಕೂಡ ನೀಡಿದ್ದಾರೆ.

                  'ಇಬ್ಬರನ್ನು ಕಾನೂನಿನ ಮೂಲಕ ವಿಂಗಡಿಸಲಾಗಿದೆ - ನೆಟ್​ಫ್ಲಿಕ್ಸ್ ಮೂಲಕ ಒಂದುಗೂಡಿಸಲಾಗಿದೆ'(Divided by law, united by Netflix…) ಎಂದು ಟ್ವಿಟರ್​​ನಲ್ಲಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಕಮೆಂಟ್​ಗಳು ಬಂದಿದ್ದವು. ಇದೀಗ ಸಚಿವ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅನೇಕರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

                 ಪೊಂಜಿತ್ ದೋವಾರಾ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಸಚಿವರ ಟ್ವೀಟ್​ಗೆ ಪ್ರತಿಕ್ರಿಯಿಸಿ, ಕಾನೂನಿನಿಂದ ಬೇರ್ಪಟ್ಟ ಇವರು, ಐಪಿಎಲ್​ನಿಂದ ಒಂದುಗೂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ. ಈ ಫೋಟೋವನ್ನು ಅನೇಕ ಟ್ರೋಲ್​ ಪೇಜ್​ಗಳು ಬಳಸಿಕೊಳ್ಳುತ್ತಿವೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries