HEALTH TIPS

ಎಂಡೋಸಲ್ಫಾನ್ ಸಂತ್ರಸ್ತರ ಸಂಕಷ್ಟ: ಅನ್ಯಾಯವಾಗಿ ಪಟ್ಟಿಯಿಂದ ಕೈಬಿಟ್ಟವರ ಸಭೆಯಲ್ಲಿ ಕಣ್ಣೀರ ರೋದನ

 


           ಕಾಸರಗೋಡು: ಎಂಡೋಸಲ್ಫಾನ್ ನಿರ್ಗತಿಕರ ಪಟ್ಟಿಗೆ ಸೇರಿಸಲ್ಪಟ್ಟು, ನಂತರ ಅನ್ಯಾಯವಾಗಿ ಹೊರ ಹಾಕಲ್ಪಟ್ಟ ಸಂತ್ರಸ್ತರ ಸಭೆಯಲ್ಲಿ ತಮ್ಮ ಮನದಾಳದ ನೋವು ತೆರೆದಿಟ್ಟರು. 2017 ರಲ್ಲಿ ವಿಶೇಷ ವೈದ್ಯಕೀಯ ಶಿಬಿರದ ಮೂಲಕ ಗುರುತಿಸಲ್ಪಟ್ಟ ಮತ್ತು ಪಟ್ಟಿ ಮಾಡಿದ 1031 ಜನರ ಗುಂಪು ಕಾಸರಗೋಡು ನಗರಸಭೆಯ ಸಮ್ಮೇಳನ ಸಭಾಂಗಣದಲ್ಲಿ ಒಟ್ಟುಸೇರಿ ಸಮಾಲೋಚನೆ ನಡೆಸಿತು. ಎಡೋಸಲ್ಫಾನ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದವರು ಸ್ಥಿತಿಯಲ್ಲಿರುವವರ ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ ತಾಯಂದಿರು, ಮಕ್ಕಳು ಆಗಮಿಸಿದ್ದರು. ಖ್ಯಾತ ಪರಿಸರ ಹೋರಾಟಗಾರ ಡಾ.ಡಿ.ಸುರೇಂದ್ರನಾಥ್ ಸಮಾವೇಶ ಉದ್ಘಾಟಿಸಿದರು.  ಕಾನೂನಾತ್ಮಕ ಹಕ್ಕು ಪಡೆಯಲು ಹೋರಾಟ ಬಿಟ್ಟರೆ ಬೇರೆ ದಾರಿ ಇಲ್ಲದಾಗಿದೆ. ಇಲ್ಲಿಯವರೆಗೆ ಸಾಧಿಸಿದ್ದೆಲ್ಲವೂ ಸಾವು-ಬದುಕಿನ ಹೋರಾಟದಿಂದ ಆಗಿದೆಯೇ ಹೊರತು ಸರ್ಕಾರದ ಔದಾರ್ಯದಿಂದ ಯಾವುದೂ ಲಭಿಸಿಲ್ಲ ಎಂದು ತಿಳಿಸಿದರು. ಯಾವುದೇ ತಪ್ಪೆಸಗದಿದ್ದರೂ, ಜೀವನಪರ್ಯಂತ ಸಂಕಷ್ಟದಲ್ಲಿರುವ ಜನಸಮಾಣ್ಯರ ಪರ ಸಮಾಜ ಧ್ವನಿ ಎತ್ತಬೇಕು ಎಂದು ತಿಳಿಸಿದರು.

             ಎ.ಕೆ. ಅಜಿತಾ ಅಧ್ಯಕ್ಷತೆ ವಹಿಸಿದ್ದರು. ಸುಬೈರ್ ಪಡ್ಪು, ಸುಲೇಖಾ ಮಾಹಿನ್, ಶೋಭನಾ ನೀಲೇಶ್ವರಂ, ಫರೀನಾ ಕೊಟ್ಟಪುರಂ, ಮೇರಿಸುರೇಂದ್ರನಾಥ್, ತಾಜುದ್ದೀನ್ ಪಡಿಞËರ್,ಪ್ರೇಮಚಂದ್ರನ್ ಚೆಂಬೋಲ, ಕರೀಂ ಚೌಕಿ, ಸಿಎಚ್ ಬಾಲಕೃಷ್ಣನ್, ಹಮೀದ್ ಚೇರಂಗೈ, ಖದೀಜಾ ಮೊಗ್ರಾಲ್, ರವೀಂದ್ರನ್ ನೀಲೇಶ್ವರಂ, ತಂಬಾನ್ ಪುದುಕೈ ಉಪಸ್ಥಿತರಿದ್ದರು. ಪಿ.ಶೈನಿ ಸ್ವಾಗತಿಸಿದರು. ಅಜಿತಾ ಪಿಲಿಕ್ಕೋಡ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries