HEALTH TIPS

ಸಿಬಿಐ ತನಿಖೆ: ಐದು ವರ್ಷಗಳಲ್ಲಿ ಶಿಕ್ಷೆ ಪ್ರಮಾಣದಲ್ಲಿ ಹೆಚ್ಚಳ

 

       ನವದೆಹಲಿ (PTI): ಸಿಬಿಐ ತನಿಖೆ ನಡೆಸಿರುವ ಪ್ರಕರಣಗಳಲ್ಲಿ, ಶಿಕ್ಷೆಯ ಪ್ರಮಾಣ 2022ರಲ್ಲಿ ಶೇ 74.59ಕ್ಕೆ ಏರಿಕೆಯಾಗಿತ್ತು. ಈ ಪ್ರಮಾಣ 2018ರಲ್ಲಿ ಶೇ 68ರಷ್ಟು ಇತ್ತು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

                 ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರು ರಾಜ್ಯಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿದ್ದಾರೆ.

                     ಶಿಕ್ಷೆ ಪ್ರಮಾಣ 2019ರಲ್ಲಿ ಶೇ 69.19, 2020ರಲ್ಲಿ ಶೇ 69.83 ಹಾಗೂ 2021ರಲ್ಲಿ ಶೇ 67.56ರಷ್ಟಿತ್ತು ಎಂದು ಅವರು ಸದನಕ್ಕೆ ತಿಳಿಸಿದರು.

           ಸಿಬಿಐನ ಉಪನಿರ್ದೇಶನಾಲಯಗಳು ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈ ನಗರಗಳಲ್ಲಿ ಇವೆ. ಈ ಕಚೇರಿಗಳು ವಿಚಾರಣಾ ಕೋರ್ಟ್‌ ಅಥವಾ ಹೈಕೋರ್ಟ್‌
ಗಳಲ್ಲಿ ನಡೆಯುವ ಪ್ರಕರಣಗಳ ವಿಚಾರಣೆ, ಮೇಲ್ಮನವಿ ಅಥವಾ ಮರುಪರಿಶೀಲನಾ ಅರ್ಜಿಗಳಿಗೆ ಸಂಬಂಧಿಸಿ ಮೇಲ್ವಿಚಾರಣೆ ನಡೆಸುತ್ತವೆ ಎಂದೂ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries