HEALTH TIPS

ಮರಳಿ ಪಡೆದಿರದ ಠೇವಣಿಗಳನ್ನು ಪತ್ತೆ ಹಚ್ಚಲು ಪೋರ್ಟಲ್ ಸ್ಥಾಪಿಸಲಿರುವ ಆರ್‌ಬಿಐ

 

                ಮುಂಬೈ: ಹಲವಾರು ಬ್ಯಾಂಕುಗಳಲ್ಲಿರುವ ಠೇವಣಿದಾರರು ಅಥವಾ ಅವರ ಫಲಾನುಭವಿಗಳು ಮರಳಿ ಪಡೆದಿರದ ಠೇವಣಿಗಳ ಮಾಹಿತಿ ಪಡೆಯಲು ಕೇಂದ್ರೀಕೃತ ಪೋರ್ಟಲ್ ಸ್ಥಾಪಿಸಲಾಗುವುದು ಎಂದು ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿದೆ.

          ಫೆಬ್ರವರಿ 2023ಕ್ಕೆ ಅಂತ್ಯಗೊಂಡಂತೆ ಕಳೆದ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲದಿಂದ ನಿರ್ವಹಿಸದಿರುವ ಠೇವಣಿಗಳಲ್ಲಿನ ರೂ. 35,000 ಕೋಟಿ ಮೊತ್ತವನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಭಾರತೀಯ ರಿಸರ್ವ್ ಬ್ಯಾಂಕಿಗೆ ವರ್ಗಾಯಿಸಿವೆ.

                  2023-24ನೇ ಹಣಕಾಸು ವರ್ಷದ ದ್ವೈಮಾಸಿಕ ಅವಧಿಗೆ ಹಣಕಾಸು ನೀತಿಯನ್ನು ಪ್ರಕಟಿಸಿ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್, ಠೇವಣಿದಾರರು ಅಥವಾ ಫಲಾನುಭವಿಗಳ ಠೇವಣಿಗಳ ಕುರಿತ ಮಾಹಿತಿ ಪಡೆಯಲು, ಹಲವಾರು ಬ್ಯಾಂಕ್‌ಗಳಲ್ಲಿರುವ ಮರಳಿ ಪಡೆದಿರದ ಠೇವಣಿಗಳನ್ನು ಪತ್ತೆ ಹಚ್ಚಲು ವೆಬ್ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಲು ಆರ್‌ಬಿಐ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

                 ಮರಳಿ ಪಡೆದಿರದ ಠೇವಣಿ ಹೊಂದಿರುವ ಬ್ಯಾಂಕ್‌ಗಳ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ ಅಗ್ರಸ್ಥಾನದಲ್ಲಿದ್ದು, ರೂ. 8,086 ಕೋಟಿ ಠೇವಣಿ ಹೊಂದಿದ್ದರೆ, ಎರಡನೆ ಸ್ಥಾನದಲ್ಲಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ರೂ. 5,340 ಕೋಟಿ ಠೇವಣಿ ಹೊಂದಿದೆ. ರೂ. 4,558 ಕೋಟಿ ಠೇವಣಿ ಹೊಂದಿರುವ ಕೆನರಾ ಬ್ಯಾಂಕ್ ಹಾಗೂ ರೂ. 3,904 ಕೋಟಿ ಠೇವಣಿ ಹೊಂದಿರುವ ಬ್ಯಾಂಕ್ ಆಫ್ ಬರೋಡಾ ಕ್ರಮವಾಗಿ ಮೂರು ಮತ್ತು ನಾಲ್ಕನೆ ಸ್ಥಾನದಲ್ಲಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries