HEALTH TIPS

ಸ್ವರ್ಗ ಶಾಲೆಯಲ್ಲಿ "ಮನೋಲ್ಲಾಸ" ದ್ವಿದಿನ ಸಹವಾಸ ಶಿಬಿರ


            ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ "ಮನೋಲ್ಲಾಸ" ದ್ವಿದಿನ ಸಹವಾಸ ಶಿಬಿರ ಆಯೋಜಿಸಲಾಯಿತು.
        ದಿ ಮ್ಯಾಟ್ರಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಎಂಜಿನಿಯರ್  ಕೇಶವ ಕೃಷ್ಣರಾಜ ಸೂರಂಬೈಲು ದೀಪ ಪ್ರಜ್ವಲಿಸಿ ಶಿಬಿರ ಉದ್ಘಾಟಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಪಿ.ಕೆ.ಅಧ್ಯಕ್ಷತೆ ವಹಿಸಿದ್ದರು.
        ಶಾಲಾ ವ್ಯವಸ್ಥಾಪಕ ಹೃಷಿಕೇಶ ವಿ.ಎಸ್., ವಾರ್ಡ್ ಸದಸ್ಯ ರಾಮಚಂದ್ರ ಮೊಳಕ್ಕಾಲು, ಮಾತೃ ಸಂಘದ ಅಧ್ಯಕ್ಷೆ ದಿವ್ಯ ಶಿರಂತಡ್ಕ ಶುಭ ಹಾರೈಸಿದರು.ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿದರು.ಹಿರಿಯ ಶಿಕ್ಷಕ ವೆಂಕಟ ವಿದ್ಯಾ ಸಾಗರ್ ವಂದಿಸಿದರು.ಶಿಕ್ಷಕ ಸಚ್ಚಿದಾನಂದ ಎಸ್. ಕಾರ್ಯಕ್ರಮದ ನೇತೃತ್ವ ವಹಿಸಿ ನಿರೂಪಿಸಿದರು.           ಬಳಿಕ ವಿವಿಧ ವಿಭಾಗಗಳಲ್ಲಾಗಿ ನುರಿತ ಸಂಪನ್ಮೂಲ ವ್ಯಕ್ತಿಗಳ ಮುಖಾಂತರ ವಿವಿಧ ಚಟುವಟಿಕೆಗಳು ನಡೆದವು.ಆರಂಭದ ವಿಭಾಗದಲ್ಲಿ(ಸೆಶನ್) ಭಾರತೀಯ ಸಂಸ್ಕಾರಗಳಲ್ಲಿ ಮಕ್ಕಳು ಪ್ರತಿನಿತ್ಯ ಪಾಲಿಸಬೇಕಾದ ಸಂಸ್ಕಾರಗಳನ್ನು ತಮ್ಮ ದಿನಚರಿಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಶಿಕ್ಷಕ, ಧಾರ್ಮಿಕ ವಿದ್ವಾಂಸ ವಿಘ್ನೇಶ್ ಶರ್ಮ ಮಕ್ಕಳಿಗೆ ಸೂಚ್ಯವಾಗಿ ತಿಳಿಸಿದರು.ಶಾಲಾ ಹಳೆ ವಿದ್ಯಾರ್ಥಿನಿ ಮಾಳವಿಕಾ ಸಜಂಗದ್ದೆ  ಪಕ್ಷಿ ವೀಕ್ಷಣೆಗೆ ಸಂಬಂಧಿಸಿದ ಸ್ಲೈಡ್ ಗಳನ್ನು ಪ್ರದರ್ಶಿಸಿ ಪೂರಕ ಮಾಹಿತಿ ನೀಡಿದರು.ಶಿಬಿರದ ಎರಡನೇ ದಿನ ಮುಂಜಾನೆ ಸೂರ್ರ್ಯೋದಯ ವೀಕ್ಷಣೆಯ ಸಂದರ್ಭದಲ್ಲಿ ಕಂಡುಬಂದ ಪಕ್ಷಿಗಳನ್ನು ಕಣ್ಣಾರೆ ಕಂಡು ಅವುಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.
           ಪಾಣಾಜೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಭಟ್ ಮೂರನೇ ವಿಭಾಗದಲ್ಲಿ (ಸೆಶನ್) ಮಕ್ಕಳಿಗೆ ಕವಿತಾ ರಚನೆಯ ಕುರಿತು ಮಾಹಿತಿ ನೀಡಿ ಮಕ್ಕಳಿಗೆ ಸ್ವ ರಚನೆಗೆ ಅವಕಾಶ ನೀಡಿದರು.ಬಳಿಕ ಧರ್ಮತಡ್ಕ ಸಮೀಪ ಪೆÇಸಡಿ ಗುಂಪೆಗೆ ಬಯಲು ಪ್ರವಾಸ ಕೈಗೊಳ್ಳಲಾಯಿತು.ಮುಖ್ಯ ಶಿಕ್ಷಕ, ರಂಗಭೂಮಿ ಕಲಾವಿದ ಸದಾಶಿವ ಬಾಲಮಿತ್ರ ನೇತೃತ್ವ ವಹಿಸಿದ್ದರು.ಗುಂಪೆಯ ಐತಿಹ್ಯ ಮಾಹಿತಿಯ ಜತೆಗೆ ಮಕ್ಕಳನ್ನು ಆಡಿಸಿ ಕುಣಿಸಿ ಮನರಂಜಿಸಿ ಸಂತಸ ಪಡಿಸಿದರು.          ರಾತ್ರಿ ಭಜನೆ ಹಾಗೂ ಶಿಕ್ಷಕ ವೆಂಕಟ ವಿದ್ಯಾಸಾಗರ ಹಾಗೂ ಶ್ರೀಹರಿ ಶಂಕರ ಶರ್ಮ ಇವರ ನೇತೃತ್ವದಲ್ಲಿ ನಕ್ಷತ್ರ ವೀಕ್ಷಣೆ ಚಟುವಟಿಕೆ ಜರಗಿತು.ಬಳಿಕ ನಡೆಸಲಾದ ಶಿಬಿರಾಗ್ನಿ ಕಾರ್ರ್ಯಕ್ರಮದಲ್ಲಿ ಮಕ್ಕಳು ಹಾಡಿ ಕುಣಿದು ನರ್ತಿಸಿದರು.ಬಳಿಕದ ಸೆಶನ್ ನಲ್ಲಿ ಶಿಕ್ಷಕ, ಸಾಹಿತಿ ಪ್ರವೀಣ್ ಕನಿಯಾಲ ಜಾನಪದ ನೃತ್ಯ, ಹಾಡು, ಅಭಿನಯದ ಮೂಲಕ ಮಕ್ಕಳನ್ನು ಮನ ರಂಜಿಸಿದರು. ಶಿಕ್ಷಕ, ರಂಗಭೂಮಿ ಕಲಾವಿದ ಉದಯ ಸಾರಂಗ ಪೆರ್ಲ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವ ಅಭಿನಯ ಆಟ ನೃತ್ಯ ಮಾತುಗಾರಿಕೆ ಇತ್ಯಾದಿ ಕೌಶಲಗಳನ್ನು ವಿಕಾಸಗೊಳಿಸುವ ನಾನಾ ಚಟುವಟಿಕೆಗಳ ಮೂಲಕ ಮಕ್ಕಳ ಮನಸೂರೆಗೊಳಿಸಿದರು.
        ಕಲಾ ಶಿಕ್ಷಕ, ರಂಗಭೂಮಿ ಕಲಾವಿದ ಪ್ರಕಾಶ್ ಕುಂಬಳೆ ಚಿತ್ರಕಲೆಯ ತರಗತಿ ನಡೆಸಿಕೊಟ್ಟರು.ಮಕ್ಕಳೊಂದಿಗೆ ಹಾಸ್ಯ ಮಾತುಕತೆಯಿಂದ ಅಭಿನಯದ ಮೂಲಕ ಚಿತ್ರಕಲೆ ಚಟುವಟಿಕೆಗೆ ಚಾಲನೆ ನೀಡಿದರು.ಪೆನ್ಸಿಲ್ ಡ್ರಾಯಿಂಗ್, ಜಲಚಿತ್ರ, ಕೊಲೇಜ್ ಮೊದಲಾದ ವಿವಿಧ ರೀತಿಯ ಚಿತ್ರಕಲೆಯನ್ನು ಪರಿಚಯಿಸಿದರು.ಮಕ್ಕಳು  ಕುತೂಹಲದಿಂದ ಭಾಗವಹಿಸಿದರು.ಸಮಾರೋಪ ಸಮಾರಂಭದಲ್ಲಿ ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಂಡರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries