HEALTH TIPS

ಬಾಲಾಪರಾಧಿಗಳ ವಯಸ್ಸು: ಸಾಮರ್ಥ್ಯ ಗುರುತಿಸಲು ಅಸ್ತಿಭವನ ಪರೀಕ್ಷೆಗೆ ಸಲಹೆ

 

              ನವದೆಹಲಿ: ಗಂಭೀರ ಕೃತ್ಯಗಳಲ್ಲಿ ಅಪ್ರಾಪ್ತ ವಯಸ್ಸಿನ ಆರೋಪಿಗಳ ಪಾತ್ರ ಸಾಬೀತಿಗೆ ವಯಸ್ಕ ಆರೋಪಿಗಳಂತೇ ತನಿಖೆ ನಡೆಸಬೇಕೇ, ಇಂಥ ತನಿಖೆಗೆ ಅವರು ಶಕ್ತರೇ ಎಂದು ಗುರುತಿಸಲು ಅವರ ಅಸ್ಥಿಭವನದ (ಬೋನ್‌ ಒಸ್ಸಿಫಿಕೇಷನ್) ಪರೀಕ್ಷೆ ನಡೆಸಲು ಕೇಂದ್ರ ಸೂಚಿಸಿದೆ.

                     ಈ ಕುರಿತು ಹೊಸದಾಗಿ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಅಪ್ರಾಪ್ತ ವಯಸ್ಸಿನ ಆರೋಪಿಗಳ ವಯಸ್ಸಿನ ದೃಢೀಕರಣಕ್ಕೆ ಖಚಿತ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ ದೃಢತೆ ಗುರುತಿಸಲು ಅಸ್ತಿಭವನ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದೆ.

                   ಬಾಲಾಪರಾಧಿಗಳ ನ್ಯಾಯ ಕಾಯ್ದೆ 2015ರ ವಿಧಿ 15ರ ಅನ್ವಯ ಪೂರ್ವ ಪರೀಕ್ಷೆಗಾಗಿ ಈ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಲಾಗಿದೆ. ಕೊಲೆ ಪ್ರಕರಣದ 17 ವರ್ಷದ ಆರೋಪಿ ಇದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕಳೆದ ವರ್ಷದ ಜುಲೈ ತಿಂಗಳಲ್ಲಿ ಈ ಬಗ್ಗೆ ಸೂಚಿಸಿತ್ತು.

                   ಪರಿಣತರು, ಸಾರ್ವಜನಿಕರ ಭಾಗಿದಾರರ ಜೊತೆಗೆ ಸುದೀರ್ಘ ಚರ್ಚೆ, ಅವರಿಂದ ಪಡೆದ ಪ್ರತಿಕ್ರಿಯೆಗಳನ್ನು ಆಧರಿಸಿ ಈ ಮಾರ್ಗದರ್ಶಿ ಸೂತ್ರ ರೂಪಿಸಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಗುರುವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.

                     ಬಾಲಾಪರಾಧಿಗಳ ನ್ಯಾಯ ಕಾಯ್ದೆಯ ವಿಧಿ 94 (2) ಅನ್ವಯ ಮಕ್ಕಳ ವಯಸ್ಸನ್ನು ಅವರ ಶಾಲೆ ಪ್ರಮಾಣಪತ್ರ ಅಥವಾ ತತ್ಸಮಾನ ಪ್ರಮಾಣಪತ್ರ ಆಧರಿಸಿ ನಿರ್ಧರಿಸಬೇಕು. ಇಲ್ಲಿ ಪೂರಕ ದಾಖಲೆ ಲಭ್ಯವಾಗದೇ ಇದ್ದರೆ, ನಗರ ಸ್ಥಳೀಯ ಸಂಸ್ಥೆಗಳು ನೀಡುವ ಜನ್ಮಪ್ರಮಾಣಪತ್ರ ಆಧರಿಸಬೇಕು. ಇಲ್ಲವೇ ಅಸ್ತಿಭವನ ಪರೀಕ್ಷೆ ಅಥವಾ ಮಂಡಳಿ ಆದೇಶದಂತೆ ಲಭ್ಯವಿರುವ ಯಾವುದೇ ನೂತನ ವೈದ್ಯಕೀಯ ಚಿಕಿತ್ಸಾ ಕ್ರಮದ ಮೂಲಕ ವಯಸ್ಸು ಗುರುತಿಸಬಹುದು. ಇಂಥ ಪರೀಕ್ಷೆಯನ್ನು 15 ದಿನದ ಅವಧಿಯಲ್ಲಿ ನಡೆಸಬೇಕಾಗಿದೆ.

                   ಮಕ್ಕಳ ಚಲನವಲನ ಸಾಮರ್ಥ್ಯ ಮತ್ತು ಅವರ ಒಟ್ಟು ಸಾಮರ್ಥ್ಯ ಅಂದರೆ ನಡೆಯುವುದು, ಓಡುವುದು, ಭಾರ ಎತ್ತುವುದು, ಎಸೆಯುವುದರ ಪರೀಕ್ಷೆಯನ್ನು ಕೃತ್ಯ ಎಸಗುವ ಆತನ ಸಾಮರ್ಥ್ಯ ಅಂದಾಜಿಸುವಾಗ ನಡೆಸಬೇಕು. ಮಂಡಳಿ ಎದುರು ಮೊದಲ ಬಾರಿಗೆ ಮಕ್ಕಳು ಹಾಜರಾದ ಮೂರು ತಿಂಗಳಲ್ಲಿ ಪೂರ್ವ ಪರೀಕ್ಷೆಯನ್ನು ನಡೆಸಬೇಕು ಎಂದು ಮಾರ್ಗದರ್ಶಿ ಸೂತ್ರವು ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries