ಕೋಝಿಕ್ಕೋಡ್: ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಭಯೋತ್ಪಾದಕ ದಾಳಿ ಪ್ರಕರಣವನ್ನು ಎನ್‍ಐಎ ಕೈಗೆತ್ತಿಕೊಂಡಿದೆ. ಎನ್‍ಐಎ ಕೊಚ್ಚಿ ಘಟಕವು ತನಿಖೆಯ ಉಸ್ತುವಾರಿ ವಹಿಸಿದೆ.
ಈ ಸಂಬಂಧ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಶೀಘ್ರದಲ್ಲೇ ಎನ್‍ಐಎ ಕೇಂದ್ರ ಕಚೇರಿಯಲ್ಲಿ ಎಫ್‍ಐಆರ್ ದಾಖಲಾಗಲಿದೆ. ಈ ಹಿಂದೆ ಆರೋಪಿ ಶಾರುಖ್ ಸೈಫೀ ವಿರುದ್ಧ ಯುಎಪಿಎ ಆರೋಪ ಹೊರಿಸಲಾಗಿತ್ತು. ಯುಎಪಿಎಯ ಸೆಕ್ಷನ್ 15 ರ ಅಡಿಯಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಿರುವ ಆಧಾರದ ಮೇಲೆ ಆರೋಪಿಯ ವಿರುದ್ಧ ಮರಣದಂಡನೆ ಶಿಕ್ಷೆಗೆ ಅರ್ಹವಾದ ಸೆಕ್ಷನ್ 16 ರ ಆರೋಪವನ್ನು ಹೊರಿಸಲಾಗಿದೆ.
ಹಿಂಸಾಚಾರದಲ್ಲಿ ಭಯೋತ್ಪಾದಕರ ನಂಟು ಇರುವ ಸೂಚನೆಗಳನ್ನು ಉಲ್ಲೇಖಿಸಿ ಎನ್ ಐಎ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಾಥಮಿಕ ವರದಿಯನ್ನೂ ಸಲ್ಲಿಸಿತ್ತು. ಘಟನೆಯಲ್ಲಿ ಭಯೋತ್ಪಾದಕರ ನಂಟು ಇದೆ ಎಂದು ಕೊಚ್ಚಿ ಎನ್ ಐಎ ಶಾಖೆ ಎನ್ ಐಎ ಕೇಂದ್ರ ಕಚೇರಿಗೆ ವರದಿ ನೀಡಿತ್ತು. ಶಂಕಿತ ಆರೋಪಿ ಹತ್ತು ದಿನಗಳ ಕಾಲ ಪೆÇಲೀಸ್ ಕಸ್ಟಡಿಯಲ್ಲಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಶಾಹೀನ್ ಬಾಗ್ ಮೂಲದ ಶಂಕಿತ ಆರೋಪಿ ರೈಲಿಗೆ ಬೆಂಕಿ ಹಚ್ಚಲು ಕೋಝಿಕ್ಕೋಡ್‍ನ ಎಲತ್ತೂರ್‍ಗೆ ತಲುಪಲು ಯಾವ ಬಾಹ್ಯ ಸಹಾಯವನ್ನು ಪಡೆದಿದ್ದಾನೆ ಎಂಬುದನ್ನು ತನಿಖಾ ತಂಡಕ್ಕೆ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಇದೇ ವೇಳೆ ದೆಹಲಿ ತಲುಪಿದ್ದ ಕೇರಳದ ತನಿಖಾ ತಂಡ ವಾಪಸ್ಸಾಗಿದೆ. ಎಸ್ಪಿ ಸೋಜನ್ ಹೊರತು ಪಡಿಸಿ ಅಧಿಕಾರಿಗಳು ಹಿಂತಿರುಗಿದರು. ಶಾರುಖ್ ಗೆ ಸಂಬಂಧಿಸಿದಂತೆ ದೆಹಲಿಯಿಂದ ವ್ಯಕ್ತಿಯೊಬ್ಬನನ್ನು ಕೋಝಿಕ್ಕೋಡ್ ಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿಯೂ ಹೊರಬೀಳುತ್ತಿದೆ. ದೆಹಲಿ, ಮಹಾರಾಷ್ಟ್ರ, ಕೇರಳ ಸೇರಿದಂತೆ ನಾಲ್ಕಕ್ಕೂ ಹೆಚ್ಚು ರಾಜ್ಯಗಳಿಗೆ ಪ್ರಕರಣ ಹರಡುವ ಪರಿಸ್ಥಿತಿ ಇದೆ. ಈ ಹಿಂದೆ ಎನ್‍ಐಎ ಪ್ರಕರಣದ ವರದಿ ಕೇಳಿತ್ತು. ಈ ವರದಿಯನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ಎನ್‍ಐಎ ಡಿಜಿಗೆ ರವಾನಿಸಲಾಗಿದೆ.
ದಾಳಿಯ ಸಂಚಿನಲ್ಲಿ ಒಬ್ಬರಲ್ಲ, ಇತರರೂ ಭಾಗಿಯಾಗಿದ್ದಾರೆ ಎಂದು ಪೆÇಲೀಸರು ತೀರ್ಮಾನಿಸಿದ್ದಾರೆ.
ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಎನ್‍ಐಎಗೆ ತನಿಖೆ: ಕೇಂದ್ರ ಗೃಹ ಸಚಿವಾಲಯ ಕೊಚ್ಚಿ ಘಟಕಕ್ಕೆ ತನಿಖೆಗೆ ಆದೇಶ
0
ಏಪ್ರಿಲ್ 18, 2023





