HEALTH TIPS

ಎಲ್ಲಾ ಸಕ್ಸಸ್‌ ವ್ಯಕ್ತಿಗಳ ಟಾಪ್ ಸೀಕ್ರೆಟ್ ಇದೇ ನೋಡಿ

 

ಜೀವನದಲ್ಲಿ ಸಕ್ಸಸ್‌ ಆಗಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಈ ಸಕ್ಸಸ್‌ ಎಂಬುವುದು ಕೆಲವೇ ಕೆಲವರಿಗಷ್ಟೇ ಒಲಿಯುತ್ತದೆ. ಅದಕ್ಕೆ ನಾವು ನಮ್ಮ ಹಣೆಬರಹವನ್ನು ಜವಾಬ್ದಾರಿ ಮಾಡಿ ಸುಮ್ಮನಾಗುತ್ತೇವೆ. ಒಬ್ಬ ವ್ಯಕ್ತಿ ಅವನ ಬದುಕಿನಲ್ಲಿ ಯಶಸ್ವಿಯಾದ ಅಂದರೆ ಅವನ ಅದೃಷ್ಟ ಚೆನ್ನಾಗಿತ್ತು ಹಾಗಾಗಿ ಅವನು ಆ ಎತ್ತರಕ್ಕೆ ಬೆಳೆದ, ನನ್ನ ಅದೃಷ್ಟವೇ ಸರಿಯಿಲ್ಲ ಎಂದು ತಮ್ಮ ಬದುಕಿನ ಎಲ್ಲಾ ಸಮಸ್ಯೆಗೆ ದುರಾದೃಷ್ಟವನ್ನು ಹೊಣೆ ಮಾಡುತ್ತೇವೆ. ಆದರೆ ಯಾರಿಗೇ ಆಗಲಿ ಯಶಸ್ಸು ಸುಮ್ಮನೆ ಬಂದಿರಲ್ಲ, ಯಶಸ್ವಿನ ಈ ಗುಟ್ಟುಗಳು ಗೊತ್ತಿರುವವನು ಜೀವನದಲ್ಲಿ ಸೋಲಲು ಸಾಧ್ಯವೇ ಇಲ್ಲ ನೋಡಿ:

1. ಸಕ್ಸಸ್‌ಗೆ ಬೇಕೆಂದರೆ ರಿಸ್ಕ್ ತೆಗೆದುಕೊಳ್ಳಬೇಕು ಯಾರೇ ತಮ್ಮ ಬದುಕಿನಲ್ಲಿ ಯಶಸ್ವಿಯಾಗಿರಲಿ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಸವಾಲುಗಳು, ಅವಮಾನಗಳನ್ನು ಎದುರಿಸಿರುತ್ತಾರೆ. ನನ್ನಿಂದ ಆಗಲ್ಲ ಅಂತ ಕೂರುವ ಬದಲಿಗೆ ಆಗುತ್ತೆ ಎಂದು ಮುನ್ನುಗ್ಗಿರುತ್ತಾರೆ. ಮುಂದೇನು ಎಂಬ ಅಳುಕಿನಲ್ಲಿ ಕೂರಲ್ಲ, ಬಂದಿದ್ದನ್ನು ಬಂದಂತೆ ಸ್ವೀಕರಿಸುವೆ ಎಂದು ಧೈರ್ಯದಿಂದ ಮುನ್ನುಗ್ಗಿರುತ್ತಾರೆ. ಹೀಗೆ ಅವರು ಬದುಕಿನಲ್ಲಿ ತಾವು ಅಂದಕೊಂಡಿದ್ದನ್ನು ಸಾಧಿಸಿ ಯಶಸ್ವಿ ವ್ಯಕ್ತಿಯಾಗಿ ಗುರುತಿಸಿಕೊಂಡಿರುತ್ತಾರೆ.

2. ಸಕ್ಸಸ್‌ ವ್ಯಕ್ತಿಗಳು ಬೇರೆಯವರ ಬದಲಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯುಳ್ಳವರು ಅವರಿಗೆ ತಮ್ಮ ಸಾಮರ್ಥ್ಯದ ಅರಿವು ತುಂಬಾನೇ ಚೆನ್ನಾಗಿ ಗೊತ್ತಿರುತ್ತದೆ. ಅವರಿಗೆ ತಾವೇನು ಮಾಡಬೇಕು ಎಂಬುವುದು ಗೊತ್ತಿರುತ್ತದೆ, ಇತರರನ್ನು ನಂಬುವ ಬದಲಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಬೆಳೆಯಲು ಪ್ರಯತ್ನಿಸುತ್ತಾರೆ. ಯಾರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರುವುದಿಲ್ಲವೂ ಅವರು ತಾವು ಬೆಳೆಯುತ್ತೇವೆ ಎಂದು ಯೋಚಿಸುವುದೇ ಮೂರ್ಖತನ. ಮೊದಲಿಗೆ ನಮ್ಮಲ್ಲಿ ನಾವು ನಂಬಿಕೆ ಇಡಬೇಕು, ಆವಾಗ ನಮಗಾಗಿ ಅನೇಕ ಅವಕಾಶಗಳು ಸೃಷ್ಟಿಯಾಗುತ್ತವೆ. ಮೊದಲು ಅವಕಾಶ ಸಿಗಲಿ ಎಂದು ಕಾಯುತ್ತಾ ಕೂತರೆ ಆ ಅವಕಾಶ ಬರುವುದೇ ಇಲ್ಲ.

3. ಬೇರೆಯವರು ಏನು ಯೋಚಿಸುತ್ತಾರೆ ಅಂತ ಕೇರ್ ಮಾಡಲ್ಲ ಜೀವನದಲ್ಲಿ ಸಕ್ಸಸ್ ಆಗಿರುವ ಯಾರನ್ನೇ ನೋಡಿ ಅವರು ಬೇರೆಯವರು ಏನು ಹೇಳುತ್ತಾರೆ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಎಂದರೆ ಕಾಲೆಳೆಯುವವರೂ ಇರುತ್ತಾರೆ. ಇಂಥವರ ಬಗ್ಗೆ ತಲೆಕೆಡಿಸಿ ಕೂತರೆ ನಮ್ಮ ಕಾರ್ಯಗಳು ನಡೆಯುವುದಿಲ್ಲ. ಅವರಿಗೆ ತಾನು ಪಾಲಿಸಬೇಕಾದ ಮೌಲ್ಯಗಳೇನು ಎಂಬುವುದು ಗೊತ್ತಿರುತ್ತದೆ.ಆದ್ದರಿಂದ ಎಂಥ ಸವಾಲುಗಳು ಬಂದರೆ ಕುಗ್ಗದೆ ತಮ್ಮ ಗುರಿಯತ್ತ ಗಮನಹರಿಸುತ್ತಾರೆ.

4. ಎಲ್ಲರೂ ಯೋಚಿಸುವುದಕ್ಕಿಂತ ಭಿನ್ನವಾಗಿ ಯೋಚಿಸುತ್ತಾರೆ ಎಲ್ಲರೂ ಯೋಚಿಸುವ ರೀತಿಯಲ್ಲಿ ಯೋಚಿಸುವುದಕ್ಕಿಂತ ಭಿನ್ನವಾಗಿ ಯೋಚಿಸುವ ವ್ಯಕ್ತಿ ಯಶಸ್ವಿಯಾಗುತ್ತಾನೆ. ಅದುವೇ ಅವನ ಯಶಸ್ವಿನ ಮಂತ್ರವಾಗಿರುತ್ತದೆ. ಅವರಿಗೆ ತಾವು ಮಾಡುವ ಕಾರ್ಯದಲ್ಲಿ ಭರವಸೆ ಇರುತ್ತದೆ, ಏನೇ ಮಾಡುವ ಮುನ್ನ ಬುದ್ಧಿವಂತಿಕೆಯಿಂದ ಯೋಚಿಸುತ್ತಾರೆ. 
 5. ಸೋಲಿಗೆ ಭಯ ಪಡಲ್ಲ ಒಂದು ಯಶಸ್ವಿ ಕತೆಯಿಂದ ಹಲವಾರು ಸೋಲಿನ ಕತೆ ಇರುತ್ತದೆ. ಸೋಲೇ ಗೆಲುವಿನ ಸೋಪಾನ ಅಂತಾರಲ್ಲ, ಇವರು ಕೂಡ ಸೋಲಿಗೆ ಭಯಪಡದೆ ಮರಲಿ -ಮರಳಿ ಪ್ರಯತ್ನಿಸಿ ಸಾಧನೆಯನ್ನು ಮಾಡಿರುತ್ತಾರೆ.ಇವರು ಸೋಲಿಗೆ ಮತ್ತೊಬ್ಬರನ್ನು ಹೊಣೆ ಮಾಡುವುದಿಲ್ಲ, ಸೋಲಿನಿಂದ ಕುಗ್ಗುವುದಿಲ್ಲ. ಸೋಲಿನಿಂದ ಪಾಠ ಕಲಿತು ತಮ್ಮ ತಪ್ಪನ್ನು ಸರಿಪಡಿಸಿ ಮತ್ತೆ ಮುಂದುವರೆಯುತ್ತಾರೆ.

6. ಸಮಾಜಕ್ಕೆ ನೆರವಾಗಿತ್ತಾರೆ ಯಾರು ನಿಜವಾದ ಸಾಧಕರಿದ್ದರೂ ಅವರು ಒಂದು ರೀತಿಯ ಆಲದ ಮರದ ರೀತಿ. ಅವರು ಇತರರಿಗೆ ನೆರಳು ನೀಡುತ್ತಾರೆ. ತಮ್ಮಿಂದ ಆದ ನೆರವು ಅಗ್ಯತವಿರುವವರಿಗೆ ನೀಡುತ್ತಾರೆ. ತಾವು ಬೆಳೆಯುವುದರ ಜೊತೆಗೆ ಇತರರನ್ನೂ ಬೆಳೆಸುತ್ತಾರೆ. ಬದುಕಿನಲ್ಲಿ ಏನು ಆಯ್ತು ಅದರ ಬಗ್ಗೆ ಚಿಂತೆ ಮಾಡದೆ ಮುಂದೇನು ಆಗಬೇಕು ಎಂಬುವುದರ ಬಗ್ಗೆ ಯೋಚಿಸುತ್ತಾರೆ. ತಾವೆಷ್ಟೇ ಬೆಳೆದರೂ ತಮ್ಮ ಪ್ರಯತ್ನ ಕಡಿಮೆ ಮಾಡುವುದಿಲ್ಲ. ಸದಾ ತಮ್ಮ ಕೆಲಸದ ಕಡೆ ತುಂಬಾನೇ ಗಮನಹರಿಸುತ್ತಾರೆ. ಈ ಎಲ್ಲಾ ಗುಣಗಳು ಯಾವ ವ್ಯಕ್ತಿಯಲ್ಲಿ ಇರುತ್ತದೋ ಅವನು/ಅವಳು ಸಾಧಕಿಯಾಗುವುದರಲ್ಲಿ ನೋ ಡೌಟ್...




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries