HEALTH TIPS

ಚಿತ್ತಾರಕ್ಕೆ ಚಿತ್ತಾಕರ್ಷಣೆಯ ತೆರೆ


                    ಕುಂಬಳೆ: ರಂಗ ಚೇತನ ಚೇತನ ಕಾಸರಗೋಡು ಹಾಗೂ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಸಹಾಬಾಗಿತ್ವದಲ್ಲಿ ಪೆರ್ಮುದೆ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಚಿತ್ತಾರ ರಂಗದ ರಂಗೋಲಿ’ ಮೂರು ದಿನಗಳ ಸಹವಾಸ ಶಿಬಿರದ ಸಮಾರೋಪ  ನಡೆಯಿತು.
         ಚಿತ್ತಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಂಗಡಿಮೊಗರು ಸೇವಾ ಸಹಕಾರಿ ಬ್ಯಾಂಕ್ ನ ಕಾರ್ಯದರ್ಶಿ ವಿಠಲ ರೈ ಮಾತನಾಡಿ, ಗ್ರಾಮೀಣ ಪ್ರದೇಶದ ಕನ್ನಡ ಮಕ್ಕಳಿಗೆ ಇಂತಹ ಶಿಬಿರದ ಮೂಲಕ ಹೆಚ್ಚು ಅವಕಾಶಗಳು ಲಭಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವೇದಿಕೆಯಾಗಲಿ. ಈ ನಿಟ್ಟಿನಲ್ಲಿ ರಂಗ ಚೇತನ ಕಾಸರಗೋಡು ಇದರ ವತಿಯಿಂದ ವರ್ಷಂಪ್ರತಿ  ಜರಗುತ್ತಿರುವ ಮಕ್ಕಳ ಸಹವಾಸ ಶಿಬಿರವು ಮಾದರಿಯಾಗಿದ್ದು ಈ ಸಂಸ್ಥೆಯ ಮೂಲಕ ಇನ್ನಷ್ಟು ಇಂತಹ ಶಿಬಿರವನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.



          ರಂಗ ಚೇತನ ಕಾಸರಗೋಡು ಇದರ ಉಪಾಧ್ಯಕ್ಷ ವಿಜಯ್ ಕುಮಾರ್ ಪಾವಳ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿವಿಧ ಅಧ್ಯಾಪಕ ಸಂಘಟನೆ ಕೆ.ಎಸ್.ಟಿ.ಎ ಜಿಲ್ಲಾ ಅಧ್ಯಕ್ಷ ಶ್ಯಾಮ್ ಭಟ್, ಎನ್.ಟಿ.ಯು ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ದಯಾನಂದ ಕುಬಣೂರು,  ಕೆ.ಪಿ.ಎಸ್.ಟಿ.ಎ ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ , ಶಿಬಿರ ಸಂಯೋಜಕ ಸದಾಶಿವ ಬಾಲಮಿತ್ರ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ  ಅಧ್ಯಾಪನ ಸೇವೆಯಿಂದ ನಿವೃತ್ತಿಯಾಗುತ್ತಿರುವ  ರಂಗಚೇತನದ ಗೌರವಾಧ್ಯಕ್ಷ ಯತೀಶ್ ಕುಮಾರ್ ರೈ ಮುಳ್ಳೇರಿಯ ಅವರನ್ನು ರಂಗ ಚೇತನ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯ ವನ್ನು ಶಿವರಾಮ್ ಮಾಸ್ತರ್ ಕಾಟುಕುಕ್ಕೆ ನಿರ್ವಹಿಸಿದರು. ಶಿಬಿರದ ಕೊನೆಯ ದಿನ ಬೆಳಿಗ್ಗೆ ಚಿನ್ಮಯ ವಿದ್ಯಾಲಯ ಬದಿಯಡ್ಕ ಇಲ್ಲಿನ ದೈಯಿಕ ಶಿಕ್ಷಕಿ  ಸೌಮ್ಯ ಟೀಚರ್  ನವರಿಂದ ಎರೋಬಿಕ್ಸ್ ಸಂಗೀತದೊಂದಿಗೆ  ವ್ಯಾಯಾಮ ಜರಗಿತು. ಬಳಿಕ ಕಿರಣ್ ಕಲಾಂಜಲಿ, ಪ್ರಕಾಶ್ ಕುಂಬಳೆ ಹಾಗೂ ಜಯಪ್ರಕಾಶ್ ಶೆಟ್ಟಿ ಬೇಳ ರವರ ನೇತೃತ್ವದಲ್ಲಿ ಮುಖವಾಡ ತಯಾರಿ, ವಿವಿಧ ಬೊಂಬೆಗಳ ತಯಾರಿ, ಚಿತ್ರ ರಚನಾ ಕೌಶಲ್ಯವನ್ನು ಹೆಚ್ಚಿಸುವ ಪ್ರಾತ್ಯಕ್ಷಿಕೆ, ರಂಗ ಗೀತೆಗಳ ಗಾಯನ ಮೊದಲಾದವುಗಳು ಜರಗಿತು. 

           ಬಳಿಕ ಅನುರಾಜ್ ಕುಬಣೂರು ಅವರಿಂದ ಮ್ಯಾಜಿಕ್  ಪ್ರದರ್ಶನ ಜರಗಿತು.  ಶಿಬಿರಾರ್ಥಿಗಳಿಂದ ಸದಾಶಿವ ಮಾಸ್ತರ್ ರವರ ನಿರ್ದೇಶನದಲ್ಲಿ, ಮೆಲ್ವಿನ್ ರವರ ಛಾಯಾಗ್ರಹಣದಲ್ಲಿ ಜಲಸಂರಕ್ಷಣೆಯ ಅಶಯವಿರುವ ಕಿರುಚಿತ್ರ  ಪ್ರದರ್ಶನ ನಡೆಯಿತು. ಶಿಬಿರಾರ್ಥಿಗಳಿಗೆ ಹಾಗೂ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ ಧರ್ಮತಡ್ಕ ಶಾಲೆಯ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಅಭಿನಂದನಾ ಪತ್ರದ ವಾಚನವನ್ನು ಪ್ರಸಾದ್ ಮುಗು ಮತ್ತು ಹರಿನಾಥ್ ಕುಬಣೂರು ನೆರವೇರಿಸಿದರು. ರಂಗ ಚೇತನ ಜೊತೆಕಾರ್ಯದರ್ಶಿ ವಸಂತ ಮಾಸ್ತರ್ ಮೂಡಂಬೈಲ್ ಸ್ವಾಗತಿಸಿ, ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ವಂದಿಸಿದರು.ಸದಸ್ಯರಾದ ಶಿವ ಚೆರುಗೊಳಿ ನಿರೂಪಿಸಿದರು. ಗೋಪಾಲ ಮಾಸ್ತರ್ ಕಾಟುಕುಕ್ಕೆ, ರಾಜ್ ಕುಮಾರ್  ಕಾಟುಕುಕ್ಕೆ, ಶಿವಪ್ರಸಾದ್ ರಾವ್ ಪೈವಳಿಕೆ, ಉದಯ್ ಶೆಟ್ಟಿ, ಚಂದ್ರಿಕಾ ಟೀಚರ್, ದೇವಾನಂದ ಕಾಡೂರು, ವಿಖ್ಯಾತ್, ತೌಸೀಫ್ ಮೊದಲಾದವರು ಶಿಬಿರದ ನೇತೃತ್ವ ವಹಿಸಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries