HEALTH TIPS

ನಾರಂಪಾಡಿಯಲ್ಲಿ ಯಕ್ಷಗಾನ ಬಯಲಾಟ; ಸನ್ಮಾನ: ಕಲೆಯೊಂದಿಗೆ ಕಲಾವಿದರೂ ಬೆಳೆಯಬೇಕು


         ಮುಳ್ಳೇರಿಯ: ಯಕ್ಷಮಿತ್ರ ನಾರಂಪಾಡಿ ಇವರ ಸಂಯೋಜನೆಯಲ್ಲಿ ಶ್ರೀ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ನೀಲಾವರ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಇವರಿಂದ ಶುಕ್ರವಾರ ನಾರಂಪಾಡಿಯಲ್ಲಿ ಈ ವರ್ಷದ ಜನಮೆಚ್ಚುಗೆ ಗಳಿಸಿದ ಶಿವಮೆಚ್ಚಿದ ಹೈಗುಳಿ ಪ್ರಸಂಗದ 75ನೇ ಪ್ರದರ್ಶನ ನಡೆಯಿತು. ಯಕ್ಷಗಾನ ಪ್ರದರ್ಶನಕ್ಕೆ ಮೊದಲು ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆಯ ಅಧ್ಯಾಪಕ ಹರಿನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ಬಾಲ್ಯಕಾಲದ ತಮ್ಮ ಅನುಭÀವಗಳನ್ನು ತೆರೆದಿಟ್ಟರು. ಕಲೆಯೊಂದಿಗೆ ಕಲಾವಿದರೂ ಬೆಳೆಯಬೇಕು, ಒಂದು ಕಾಲದಲ್ಲಿ ಯಕ್ಷಗಾನಕ್ಕೆ ಪುರುಷರೇ ಸೀಮಿತರಾಗಿದ್ದರು. ಆದರೆ ಇಂದು ಅನೇಕ ಮಹಿಳೆಯರೂ ಯಕ್ಷರಂಗದತ್ತ ಬರುತ್ತಿರುವುದು ಸಂತಸದ ವಿಚಾರ ಎಂದರು.
         ಮುಖ್ಯ ಅತಿಥಿಗಳಾಗಿ ಡಾ. ವೇಣುಗೋಪಾಲ ಕಳೆಯತ್ತೋಡಿ ತಮ್ಮ ಅನುಭವದ ಮಾತುಗಳನ್ನು ವ್ಯಕ್ತಪಡಿಸಿದರು. ಕುಂಬ್ಡಾಜೆ ಪಂಚಾಯಿತಿ ಸಮಿತಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ರೈ ಗಾಡಿಗುಡ್ಡೆ, ಯಕ್ಷಗಾನ ಅಭಿಮಾನಿ, ಕಲಾಪೋಷಕ ಎಚ್.ಆರ್. ಕುಮಾರ್ ಬೆಂಗಳೂರು, ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಶುಭ ಹಾರೈಸಿದರು. ಇದೇ ಸಂದಭರ್Àದಲ್ಲಿ ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶಂಕರನಾರಾಯಣ ಕೆದಿಲಾಯ ಪುಂಡೂರು ಅವರನ್ನು ಸನ್ಮಾನಿಸಲಾಯಿತು. ಕಿರಣ್ ಚಂದ್ರ ರೈ ನಾರಂಪಾಡಿ ಗುತ್ತು ಸ್ವಾಗತಿಸಿ, ಮನೋಹರ ಶೆಟ್ಟಿ ನಾರಂಪಾಡಿ ಗುತ್ತು ನಿರೂಪಿಸಿದರು.             ಯಕ್ಷಮಿತ್ರ ಬಳಗದ ಅಧ್ಯಕ್ಷ ರವೀಂದ್ರನಾಥ ಭಂಡಾರಿ ನಾರಂಪಾಡಿಗುತ್ತು, ಕಾರ್ಯದರ್ಶಿ ಜಯನಾರಾಯಣ ಶೆಟ್ಟಿ ಮವ್ವಾರು ಹಾಗೂ ಸದಸ್ಯರು ಜೊತೆಗಿದ್ದರು. ಊರ ಪರವೂರ ಯಕ್ಷಕಲಾಭಿಮಾನಿಗಳು ಬೆಳಗಿನ ತನಕ ನಡೆದ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿದ್ದರು.
               75ನೇ ಪ್ರದರ್ಶನ ಕಂಡ ಶಿವಮೆಚ್ಚಿದ ಹೈಗುಳಿ:
        ಉಡುಪಿ ನೀಲಾವರ ಮೇಳದ 75ನೇ ಪ್ರದರ್ಶನದಲ್ಲಿ ಶಿವದೂತ ಗುಳಿಗನ ಅಬ್ಬರದ ಪ್ರವೇಶ, ಹಾಸ್ಯ, ಸ್ತ್ರೀಪಾತ್ರಗಳು, ಹಿಮ್ಮೇಳ ಜನಮೆಚ್ಚುಗೆಯನ್ನು ಗಳಿಸಿತು. ಕಾಲಮಿತಿಯ ಯಕ್ಷಗಾನಕ್ಕೆ ಬದಲಾಗಿ ಬೆಳಗ್ಗಿನ ತನಕ ಯಕ್ಷಗಾನ ಬಯಲಾಟವು ಪ್ರದರ್ಶನಗೊಂಡಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries