HEALTH TIPS

'ಬಡ ಕೈದಿಗಳಿಗೆ ಆರ್ಥಿಕ ಸಹಾಯ' ಯೋಜನೆ ಜಾರಿಗೆ ನಿರ್ಧಾರ: ಕೇಂದ್ರ

 

            ನವದೆಹಲಿ: ಜಾಮೀನು ಮೊತ್ತ ಹಾಗೂ ದಂಡವನ್ನು ಪಾವತಿಸಲು ಸಾಧ್ಯವಾಗದ ಬಡ ಕೈದಿಗಳಿಗೆ ಆರ್ಥಿಕ ಸಹಾಯ ಒದಗಿಸುವ 'ಬಡ ಕೈದಿಗಳಿಗೆ ಆರ್ಥಿಕ ಸಹಾಯ' ಎನ್ನುವ ವಿಶೇಷ ಯೋಜನೆಯನ್ನು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

                           ಕಾರಾಗೃಹಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳಿದ್ದಾರೆ. ಈ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. 'ಕಡಿಮೆ ಶಿಕ್ಷಣ ಹಾಗೂ ಕಡಿಮೆ ಆದಾಯ ಇರುವ ಸಮಾಜದ ತಳಸಮುದಾಯದ ಬಡ ಕೈದಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗುವುದು' ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.

                   'ಈ ಯೋಜನೆಯ ಲಾಭ ಪಡೆಯಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು. 'ಇ-ಪ್ರಿಸನ್ಸ್‌' ಪೋರ್ಟಲ್‌ ಅನ್ನು ಬಳಕೆದಾರಸ್ನೇಹಿ ಮಾಡಲಾಗುವುದು. ಜೊತೆಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳನ್ನು ಬಲಗೊಳಿಸಲಾಗುವುದು' ಎಂದೂ ಸಚಿವಾಲಯ ಹೇಳಿದೆ.

                'ಬಡ ಕೈದಿಗಳಿಗೆ ಆರ್ಥಿಕ ಸಹಾಯ' ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಈ ವರ್ಷದ ಬಜೆಟ್‌ ಭಾಷಣದಲ್ಲಿ ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries