ತಿರುವನಂತಪುರಂ: 25ರಂದು ವಂದೇ ಭಾರತ್ ಉದ್ಘಾಟನೆ ಬಳಿಕ ಪ್ರಧಾನಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಇದಕ್ಕಾಗಿ ವಿದ್ಯಾರ್ಥಿಗಳ ಹೆಸರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ. 12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ವಂದೇ ಭಾರತ್‍ನಲ್ಲಿ ಪ್ರಧಾನಿಯವರೊಂದಿಗೆ ಪ್ರಯಾಣಿಸಲು ಮತ್ತು ಅವರೊಂದಿಗೆ ಸಂವಾದ ನಡೆಸಲು ಅವಕಾಶವನ್ನು ಪಡೆಯುತ್ತಾರೆ. ಶಾಲಾ ಕಲಿಕೆÉಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ರೈಲ್ವೆ ಮುಂದಾಗಿದೆ. ಈ ಬಗ್ಗೆ ರೈಲ್ವೆಯು ಶಾಲೆಗಳಿಗೆ ಪತ್ರ ಕಳುಹಿಸಿದೆ.
ಏಪ್ರಿಲ್ 25 ರಂದು ಪ್ರಧಾನ ಮಂತ್ರಿ ವಂದೇ ಭಾರತ್ ಗೆ ಪತಾಕೆ ತೋರಿಸಿ ಚಾಲನೆ ನೀಡುವರು. ಉದ್ಘಾಟನಾ ದಿನದಂದು ಅವರು ತಿರುವನಂತಪುರದಿಂದ ಕೊಲ್ಲಂಗೆ ಪ್ರಯಾಣಿಸಲಿದ್ದಾರೆ. ಪ್ರಧಾನಿಯವರು ಪ್ರಯಾಣದ ವೇಳೆ ಪ್ರಯಾಣಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಏತನ್ಮಧ್ಯೆ, ವಂದೇಭಾರತ್ ರೈಲಿನ ನಿನ್ನೆ ನಡೆದ ಎರಡನೇ ಹಂತದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ತಿರುವನಂತಪುರದಿಂದ ಹೊರಟ ಪ್ರಯಾಣ ಕಾಸರಗೋಡು ತಲುಪಿತು. ಬೆಳಗ್ಗೆ 5.20ಕ್ಕೆ ಹೊರಟು 1.10ಕ್ಕೆ ಕಾಸರಗೋಡು ತಲುಪಿತು. ಪ್ರಯಾಣದ ಸಮಯ 7 ಗಂಟೆ 50 ನಿಮಿಷಗಳಾಗಿತ್ತು.
ವಂದೇ ಭಾರತ್ ಉದ್ಘಾಟಿಸಿದ ಬಳಿಕ ಮಕ್ಕಳೊಂದಿಗೆ ರೈಲಿನಲ್ಲಿ ಸಂವಾದ ನಡೆಸಲಿರುವ ಪ್ರಧಾನಿ: ಶಾಲೆಗಳಿಗೆ ರೈಲ್ವೆ ಪತ್ರ
0
ಏಪ್ರಿಲ್ 20, 2023





