HEALTH TIPS

ಕ್ಲೀನ್ ಕೇರಳ ಕಂಪನಿಯಿಂದ ಕ್ಯಾಲೆಂಡರ್ ಆಧಾರಿತ ತ್ಯಾಜ್ಯ ಸಂಗ್ರಹಣೆಗೆ ಚಾಲನೆ


           ಕಾಸರಗೋಡು: ಜಿಲ್ಲೆಯಲ್ಲಿ ಅಜೈವಿಕ ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಕಾರ್ಯಕ್ಷಮತೆಗೊಳಿಸುವ ನಿಟ್ಟಿನಲ್ಲಿ ಕ್ಲೀನ್ ಕೇರಳ ಕಂಪನಿಯು ಕ್ಯಾಲೆಂಡರ್ ಆಧಾರಿತ ತ್ಯಾಜ್ಯ ಸಂಗ್ರಹಣೆಯನ್ನು ಪ್ರಾರಂಭಿಸಿದೆ. ಹಸಿರು ಕ್ರಿಯಾ ಸೇನೆಯ ಸದಸ್ಯರು ಈ ವರ್ಷದ ಜನವರಿಯಿಂದ ಕ್ಯಾಲೆಂಡರ್ ಪ್ರಕಾರ ತ್ಯಾಜ್ಯವನ್ನು ವಿಂಗಡಿಸಲು ಮತ್ತು ಸಂಗ್ರಹಿಸಲು ಮನೆ ಮತ್ತು ಅಂಗಡಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಮಡಿದ್ದಾರೆ.
             ಜನವರಿ ತಿಂಗಳಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ, ಫೆಬ್ರುವರಿಯಲ್ಲಿ ಜವಳಿ ತ್ಯಾಜ್ಯ, ಮಾರ್ಚ್‍ನಲ್ಲಿ ಪಿಕ್ಚರ್ ಗ್ಲಾಸ್, ಲ್ಯಾಂಪ್, ಗ್ಲಾಸ್ ಸೇರಿದಂತೆ ಅಪಾಯಕಾರಿ ಎಲೆಕ್ಟ್ರಾನಿಕ್ ತ್ಯಾಜ್ಯ, ಕನ್ನಡಿ, ಏಪ್ರಿಲ್ ತಿಂಗಳಲ್ಲಿ  ಶೂ, ಬ್ಯಾಗ್, ಥರ್ಮಾಕೋಲ್, ಚರ್ಮ, ಕಾರ್ಪೆಟ್, ಶರ್ಟ್ ತ್ಯಾಜ್ಯ, ಬಳಕೆಯಾಗದ ಹಾಸಿಗೆ, ದಿಂಬು, ಪ್ಲಾಸ್ಟಿಕ್ ಕಾರ್ಪೆಟ್ ಮೇ ತಿಂಗಳಲ್ಲಿ ಬಾಟಲಿ ಮತ್ತು ಸಣ್ಣ ತ್ಯಾಜ್ಯ, ಜೂನ್‍ನಲ್ಲಿ ಉಪಯೋಗಶೂನ್ಯವಾದ ವಹನಗಳ ಟಯರ್, ಜುಲೈನಲ್ಲಿ  ಇ-ತ್ಯಾಜ್ಯ, ಆಗಸ್ಟ್‍ನಲ್ಲಿ ಪಾಲಿಥೀನ್ ಪ್ರಿಂಟಿಂಗ್ ಶೀಟ್, ಸ್ಕ್ರ್ಯಾಪ್ ವಸ್ತುಗಳು, ಸೆಪ್ಟೆಂಬರ್‍ನಲ್ಲಿ ಔಷಧ ಪಟ್ಟಿಗಳು, ಆಕ್ಟೋಬರ್‍ನಲ್ಲಿ ಶೂ, ಬ್ಯಾಗ್, ಥರ್ಮಾಕೋಲ್, ಚರ್ಮ, ಕಾರ್ಪೆಟ್, ಸಜ್ಜು ತ್ಯಾಜ್ಯ, ನವೆಂಬರ್ ಮತ್ತು ಡಿಸೆಣಬರ್‍ನಲ್ಲಿ ಬಳಸಿದ ಹಾಸಿಗೆ, ಕುಶನ್, ಪ್ಲಾಸ್ಟಿಕ್ ಚಾಪೆ, ಬಾಟಲಿ ಮತ್ತು ಸಣ್ಣ ತ್ಯಾಜ್ಯ ವಸ್ತುಗಳನ್ನು ವಿಂಗಡಿಸಿ ಸಂಗ್ರಹಿಸಲಾಗುವುದು.
              ಕ್ಯಾಲೆಂಡರ್ ಆಧಾರಿತ ಅಜೈವಿಕ ತ್ಯಾಜ್ಯ ವಿಲೇವಾರಿ ಪರಿಚಯಿಸುವುದರೊಂದಿಗೆ, ತ್ಯಾಜ್ಯ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ಕಸ ಸಂಗ್ರಹಕ್ಕೆ ಹಸಿರು ಕ್ರಿಯಾ ಸೇನೆಯ ಬಳಕೆದಾರರ ಶುಲ್ಕ 50 ರೂ. ನಿಗದಿಪಡಿಸಲಾಗಿದೆ.ಕ್ಯಾಲೆಂಡರ್ ಪ್ರಕಾರ ಅಜೈವಿಕ ತ್ಯಾಜ್ಯ ಸಂಗ್ರಹಣೆ ಜತೆಗೆ ಮಾಸಿಕ ಪೇಪರ್, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕೆ ಯಾವುದೇ ತೊಂದರೆಯಾಗದಂತೆ ಜಿಲ್ಲೆಯಲ್ಲಿ ತ್ಯಾಜ್ಯ ಸಂಗ್ರಹಣೆ ಮುಂದುವರಿಯಲಿದೆ. ಹೊಸ ವಿಧಾನ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿರುವುದಾಗಿ  ಕ್ಲೀನ್ ಕೇರಳ ಕಂಪನಿಯ ಜಿಲ್ಲಾ ವ್ಯವಸ್ಥಾಪಕ ಮಿಥುನ್‍ಗೋಪಿ ತಿಳಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries