ಕಾಸರಗೋಡು: ತಲಶ್ಶೇರಿಯ ಕೆಸಿಎ ಕ್ರೀಡಾಂಗಣದಲ್ಲಿ ಅ.14ರಿಂದ ನಡೆಯಲಿರುವ ಹತ್ತೊಂಬತ್ತು ವರ್ಷದೊಳಗಿನ ಬಾಲಕಿಯರ ಉತ್ತರ ಪ್ರಾಂತ ಅಂತರ್ ಜಿಲ್ಲಾ ಕ್ರಿಕೆಟ್ ಸ್ಪರ್ಧೆಗಾಗಿ ಕಾಸರಗೋಡು ಜಿಲ್ಲಾ ತಂಡವನ್ನು ರಿತಿಕಾ ಎಂ.ಎಸ್ ಮುನ್ನಡೆಸಲಿದ್ದಾರೆ.
ನಬಾ ಫಾತಿಮಾ ಉಪ ನಾಯಕಿಯಾಗಿರಲಿದ್ದಾರೆ. ತಂಡದ ಇತರ ಸದಸ್ಯರಾಗಿ : ಅಂಜನಾ ಎಂ, ತೇಜಸ್ವಿನಿ, ವೈಷ್ಣವಿ ಎ, ರಕ್ಷಿತಾ ಆರ್, ಸೋನಿಕಾ, ಅನ್ವಿತಾ ಆರ್ವಿ, ವೈಗಾ ವಿಜಯನ್, ಭಾವನಾ ಆರ್, ಮೀರಾ ನಾಯರ್ ಪಿ.ವಿ, ಹೃತಿಕಾ, ಅಖಿಲಾ ಮಾನ್ಯ, ಅಮೃತಾ ಕೆ, ಅಮೃತಾ ಎಂ. ಆಯ್ಕೆಗೊಂಡಿದ್ದಾರೆ. ಕೆ.ಟಿ ನಿಯಾಸ್ ತಂಡದ ಪ್ರಬಂಧಕ ಹಾಗೂ ದಿವ್ಯಾ ಗಣೇಶ್ ತರಬೇತುದಾರರಾಗಿರುವರು.
ಅಂಡರ್-19 ಬಾಲಕಿಯರ ಕ್ರಿಕೆಟ್; ರಿತಿಕಾ ಎಂ.ಎಸ್ ಕಾಸರಗೋಡು ಜಿಲ್ಲಾ ತಂಡಕ್ಕೆ ನಾಯಕಿ
0
ಏಪ್ರಿಲ್ 11, 2023
Tags




.jpeg)
