HEALTH TIPS

ದೂರುಪರಿಹಾರ ಅದಾಲತ್: ಉಚಿತವಾಗಿ ದೂರು ಸಲ್ಲಿಸಲು ಅವಕಾಶ;15ರ ವರೆಗೆ ಕಾಲಾವಕಾಶ


             ಕಾಸರಗೋಡು: ರಾಜ್ಯ ಸರ್ಕಾರದ ಎರಡನೇ ವರ್ಷಾಚರಣೆ ಹಿನ್ನೆಲೆಯಲ್ಲಿ ತಾಲೂಕು ದುರುಪರಿಹಾರ ಅದಾಲತ್ ಮೂಲಕ ಕುಂದುಕೊರತೆಗಳನ್ನು ಸಲ್ಲಿಸುವ ಕಾಲಾವಧಿಯನ್ನು ಏ. 15ರವರೆಗೆ ವಿಸ್ತರಿಸಲಾಗಿದೆ. ದೂರುಗಳನ್ನು ಸಂಪೂರ್ಣವಾಗಿ ಉಚಿತವಾಗಿ ಸಲ್ಲಿಸಬಹುದಾಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಚಿವರ ನೇತೃತ್ವದಲ್ಲಿ ಅದಾಲತ್‍ಗಳು ನಡೆಯಲಿವೆ. ತಾಲೂಕು ಅದಾಲತ್ ಸೆಲ್‍ಗಳ ಮೂಲಕ ಮತ್ತು                       ತಿತಿತಿ.ಞಚಿಡಿuಣhಚಿಟ.ಞeಡಿಚಿಟಚಿ.gov.iಟಿ ಪೆÇೀರ್ಟಲ್ ಮೂಲಕ ನೇರವಾಗಿ ದೂರುಗಳನ್ನು ಸಲ್ಲಿಸಲು ಸೌಲಭ್ಯವನ್ನು ಒದಗಿಸಲಾಗಿದೆ. ಇದು ಸಂಪೂರ್ಣವಾಗಿ ಉಚಿತವಾಗಿದೆ. ಅಕ್ಷಯ ಕೇಂದ್ರಗಳ ಮೂಲಕ ದೂರು ಸಲ್ಲಿಸುವಾಗ ಸೇವಾ ಶುಲ್ಕವಾಗಿ 20 ರೂ. ಸ್ವೀಕರಿಸಲಾಗುವುದು. ರ್ವಜನಿಕರಿಂದ ದೂರುಗಳನ್ನು ನೇರವಾಗಿ ಸ್ವೀಕರಿಸಲು ತಾಲೂಕು ಮಟ್ಟದಲ್ಲಿ ತಾಲೂಕು ಅದಾಲತ್ ಸೆಲ್, ಸ್ವೀಕರಿಸಿದ ದೂರುಗಳ ತನಿಖೆಗೆ ಇಲಾಖಾ ಮಟ್ಟದಲ್ಲಿ ಜಿಲ್ಲಾ ಅದಾಲತ್ ಸೆಲ್ ಮತ್ತು ದೂರುಗಳ ಮೇಲೆ ನಿಗಾವಹಿಸಲು ಮತ್ತು ಸಮನ್ವಯಗೊಳಿಸಲು ಜಿಲ್ಲಾ ಮಟ್ಟದ ಅದಾಲತ್ ಮಾನಿಟರಿಂಗ್ ಸೆಲ್ ಕಾರ್ಯಾಚರಿಸಲಿದೆ.
                   ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು (ಗಡಿ ಗುರುತಿಸುವಿಕೆ, ಅಕ್ರಮ ನಿರ್ಮಾಣ, ಭೂಮಿ ಅತಿಕ್ರಮಣ), ಪ್ರಮಾಣಪತ್ರಗಳು ಯಾ ಪರವಾನಗಿಗಳ ವಿತರಣೆಯಲ್ಲಿ ವಿಳಂಬ ನಿರಾಕರಣೆ, ಜೌಗು ಪ್ರದೇಶ ಸಂರಕ್ಷಣೆ, ಜಾನುವಾರುಗಳಿಗೆ ಪರಿಹಾರ ಯಾ ಸಹಾಯ, ಬೆಳೆ ಹಾನಿಗೆ ನೆರವು, ಕೃಷಿ ಬೆಳೆಗಳ ಸಂಗ್ರಹಣೆ ಮತ್ತು ವಿತರಣೆ, ಬೆಳೆ ವಿಮೆ, ಆಹಾರ ಭದ್ರತೆಗೆ ಸಂಬಂಧಿಸಿದ ಹಾಗೂ ಇತರ ವಿಷಯಗಳ ಬಗ್ಗೆ ದೂರುಗಳಿಗೆ ಅದಾಲತ್‍ನಲ್ಲಿ ಪರಿಹಾರ ಲಭ್ಯವಾಗಲಿದೆ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries