ಧರ್ಮಶಾಲಾ: ಇತ್ತಿಚಿನ ದಿನಗಳಲ್ಲಿ ತಮ್ಮ ವಿವಾದದ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿರುವ ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ(87) ಅವರಿಗೆ ಏಷ್ಯಾದ ಅತ್ಯುನ್ನತ ಗೌರವ ಲಭಿಸಿದೆ.
0
samarasasudhi
ಏಪ್ರಿಲ್ 27, 2023
ಧರ್ಮಶಾಲಾ: ಇತ್ತಿಚಿನ ದಿನಗಳಲ್ಲಿ ತಮ್ಮ ವಿವಾದದ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿರುವ ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ(87) ಅವರಿಗೆ ಏಷ್ಯಾದ ಅತ್ಯುನ್ನತ ಗೌರವ ಲಭಿಸಿದೆ.
ಏಷ್ಯಾದ ಅತ್ಯುನ್ನತ ಗೌರವ ಎಂದೇ ಪ್ರಸಿದ್ಧಿ ಪಡೆದಿರುವ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಗಿದೆ.
ಟಿಬೆಟಿಯನ್ನರ ಧರ್ಮ ಗುರು ದಲೈ ಲಾಮಾ ಅವರಿಗೆ ಸಂದಿರುವ ಮೊದಲ ಅಂತರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು ಬೌದ್ಧ ಧರ್ಮ ರಕ್ಷಣೆ ಹಾಗೂ ನಾಯಕತ್ವವನ್ನು ಗುರುತಿಸಿ ಸತ್ಕರಿಸಲಾಗಿದೆ.
ಮ್ಯಾಗ್ಸೆಸೆ ಪ್ರತಿಷ್ಠಾನದ ಸದಸ್ಯರು ಧರ್ಮಶಾಲಾ ಅಲ್ಲಿರುವ ದಲೈಲಾಮಾ ಅವರ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
1957ರಲ್ಲಿ ಫಿಲಿಫೈನ್ಸ್ನ ಮಾಜಿ ಅಧ್ಯಕ್ಷ ರೇಮನ್ ಮ್ಯಾಗ್ಸೆಸೆ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. 2019ರಲ್ಲಿ ಕಡೆಯದಾಗಿ ಪತ್ರಕರ್ತ ರವೀಶ್ ಕುಮಾರ್ ಅವರಿಗೆ ನೀಡಲಾಗಿತ್ತು.