HEALTH TIPS

ಹಾಲಿನ ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? ಜನರಿಗಾಗಿ ಮಾಹಿತಿ ನೀಡಿದ FSSAI

                 ಕಲಬೆರಕೆ ಎನ್ನುವುದು ಈಗಿನ ಕಾಲದಲ್ಲಿ ಸಾಮಾನ್ಯ ಸಮಸ್ಯೆ. ಇದರಿಂದಾಗಿ ಕೊಟ್ಟ ಹಣಕ್ಕೆ ತಕ್ಕ ವಸ್ತು ಸಿಗದೇ ಇರುವುದು ಮಾತ್ರಲ್ಲ, ಆರೋಗ್ಯವೂ ಹದಗೆಡುತ್ತದೆ. ಅದೇ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇಂತಹ ಕಲಬೆರಕೆಗಳನ್ನು ಪರಿಶೀಲಿಸಲು ಸಹಾಯ ಮಾಡುವ ಉಪಯುಕ್ತ ಮತ್ತು ಸರಳವಾದ ತಂತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತದೆ.

              ಅದೇ ಮಾದರಿಯಲ್ಲಿ ಇದೀಗ ಹಾಲು ಕಲಬೆರಕೆಯಾಗಿದೆಯೇ ಎಂಬುದನ್ನು ಪರೀಕ್ಷಿಸಲು ಹೊಸ ತಂತ್ರವನ್ನು ಹಂಚಿಕೊಂಡಿದೆ.


             'ಆಹಾರದ ಕಲಬೆರಕೆ ಗ್ರಾಹಕರನ್ನು ವಂಚಿಸುತ್ತದೆ ಮತ್ತು ಅವರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಆಹಾರ ಕಲಬೆರಕೆಗಳಿಗೆ ಲಭ್ಯವಿರುವ ಸಾಮಾನ್ಯ ವಿಧಾನಗಳನ್ನು ಪಟ್ಟಿ ಮಾಡುವುದು ಇದರ ಉದ್ದೇಶವಾಗಿದೆ ಎಂದು FSSAI ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

           ಒಂದು ಹನಿ ಹಾಲನ್ನು ಸಾದಾ ಗಾಜಿನಂತೆ ನಯಸ್ಸಾದ ಮೇಲ್ಮೈ ಮೇಲೆ ಹಾಕಿ.
ಶುದ್ಧ ಹಾಲು ಬಿಳಿ ಬಣ್ಣದ ಜಾಡು ಬಿಟ್ಟು ನಿಧಾನವಾಗಿ ಹರಿಯುತ್ತದೆ. ನೀರಿನೊಂದಿಗೆ ಕಲಬೆರಕೆ ಮಾಡಿದ ಹಾಲು, ಗುರುತು ಬಿಡದೆ ತಕ್ಷಣವೇ ಹರಿಯುತ್ತದೆ.

                  ಹಾಲಿನ ಮನೆ ಪರೀಕ್ಷೆಯು ಬಹಳ ಮುಖ್ಯವಾಗಿದೆ. ಏಕೆಂದರೆ ಮಾರಾಟಗಾರರು ಹೆಚ್ಚಿನ ಲಾಭಕ್ಕಾಗಿ ಅದನ್ನು ನೀರಿನಿಂದ ಕಲಬೆರಕೆ ಮಾಡುತ್ತಾರೆ. ಮನೆಯಲ್ಲಿಯೇ ಈ ಸುಲಭವಾದ ಪರೀಕ್ಷೆಯನ್ನು ಪ್ರಯತ್ನಿಸುವುದು ಯಾವಾಗಲೂ ಒಳ್ಳೆಯದು. ಈ ಮೂಲಕ ನೀವೂ ಮನೆಯಲ್ಲೇ ಹಾಲಿನ ಶುದ್ಧತೆಯನ್ನು ಪರೀಕ್ಷಿಸಬಹುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries