HEALTH TIPS

ತವರಿನಲ್ಲಿದ್ದ ಪತ್ನಿ ಜತೆ ಮೊಬೈಲ್​ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಪತಿ ಸಾವು

 

      ಕೊಚ್ಚಿ: ಪತ್ನಿಯೊಂದಿಗೆ ಮೊಬೈಲ್​ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು  ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಪೆರುಂಬವೂರ್​ನಲ್ಲಿ ನಡೆದಿದೆ.

                ಮನೀಶ್​ ಅಲಿಯಾಸ್​ ಮನು (35) ಮೃತ ದುರ್ದೈವಿ. ಈತ ಪೆರುಂಬವೂರ್​ನ ಇಮುರಿ ನಿವಾಸಿ.

ಈ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ನಡೆದಿದೆ.

                                ಪತಿಯಿಂದ ಬರದ ಪ್ರತಿಕ್ರಿಯೆ
                  ಮನೀಶ್​ ಪತ್ನಿ ಒಂದು ವಾರಗಳ ಕಾಲ ತವರಿಗೆ ಹೋಗಿದ್ದಳು. ಹೀಗಾಗಿ ಪ್ರತಿ ದಿನ ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದ. ಅದೇ ರೀತಿ ಶುಕ್ರವಾರ ರಾತ್ರಿಯೂ ಕರೆ ಮಾಡಿದ್ದ. ಇಬ್ಬರು ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆಯೇ ಪತಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಮನೀಶ್​ ಪತ್ನಿ ನೆರೆಮನೆಯವರಿಗೆ ಮಾಹಿತಿ ಮುಟ್ಟಿಸಿದಳು.

                             ಸುದ್ದಿ ಕೇಳಿ ಪತ್ನಿಗೆ ಆಘಾತ
                 ಗಂಡನಿಗೆ ಅನೇಕ ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನೆರೆಮನೆಯವರು ಮನೀಶ್​ಗಾಗಿ ಹುಡುಕಾಡಿದ್ದಾರೆ. ಈ ವೇಳೆ ಆತ ಬಾವಿಯಲ್ಲಿ ಪತ್ತೆಯಾಗಿದ್ದಾನೆ. ಮೇಲಕ್ಕೆ ಎತ್ತಿ ನೋಡಿದಾಗ ಆತ ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಈ ಸುದ್ದಿ ಕೇಳಿ ಪತ್ನಿಗೆ ಆಘಾತವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿತು.

                    ಮೃತ ಮನೀಶ್​ ಆಲುವಾ-ಕೋತಮಂಗಲಂ ಮಾರ್ಗದಲ್ಲಿ ಸೇವೆ ಸಲ್ಲಿಸುವ ಬಸ್ ಯಾತ್ರಾಸ್‌ನ ಚಾಲಕರಾಗಿದ್ದರು. ಆತ ಮಜುವನ್ನೂರು ಮೂಲದ ತಮ್ಮ ಪತ್ನಿ ಕವಿತಾಮೋಳ್​ರನ್ನು ಅಗಲಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries