ಕೊಚ್ಚಿ: ಡಾಲರ್ ಮತ್ತು ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ಕ್ರಮವು ಪ್ರಕರಣವನ್ನು ಪೂರ್ಣಗೊಳಿಸುವಂತಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ಒಪ್ಪಿಕೊಂಡಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ನ್ಯಾಯಾಲಯ ನಡೆಸಿತು.
ಮುಖ್ಯಮಂತ್ರಿ ವಿರುದ್ಧದ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆರೋಪಿಸಿ ಎಚ್‍ಆರ್‍ಡಿಎಸ್ ಕಾರ್ಯದರ್ಶಿ ಅಜಿ ಕೃಷ್ಣ ಅವರು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿವರವಾದ ತನಿಖೆಗೆ ಒತ್ತಾಯಿಸಿ ನ್ಯಾಯಾಲಯವನ್ನು ಸಂಪರ್ಕಿಸಿದರು. ಆದರೆ ತನಿಖೆ ಸರಿಯಾಗಿ ನಡೆದಿಲ್ಲ ಎನ್ನುವುದನ್ನು ಬಿಟ್ಟರೆ ಬೇರೇನೂ ಸಾಕ್ಷಿ ಇಲ್ಲ. ಹೀಗಾಗಿ ಅರ್ಜಿ ಸಾಧುವಾದುದಲ್ಲ. ತನಿಖೆಗೆ ನ್ಯಾಯಾಲಯದ ಮೇಲುಸ್ತುವಾರಿ ಅಗತ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕೇಂದ್ರೀಯ ಏಜೆನ್ಸಿಗಳಾದ ಕಸ್ಟಮ್ಸ್ ಮತ್ತು ಇಡಿ ತನಿಖೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ. ಎಷ್ಟೇ ಉನ್ನತ ವ್ಯಕ್ತಿಯಾದರೂ ಕಾನೂನು ಅವರಿಗಿಂತÀ ಮೇಲಿದೆ ಎಂದು ಹೈಕೋರ್ಟ್ ಹೇಳಿದೆ.
ಡಾಲರ್ ಮತ್ತು ಚಿನ್ನ ಕಳ್ಳಸಾಗಣೆ ಪ್ರಕರಣ: ವಿವರ ತನಿಖೆಯ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್
0
ಏಪ್ರಿಲ್ 12, 2023





