ಕೇಂದ್ರ ಶಿಕ್ಷಣ ಸಚಿವಾಲಯದ ಆಶ್ರಯದಡಿ ಕಾರ್ಯನಿರ್ವಹಿಸುತ್ತಿರುವ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಪದಶಾಸ್ತ್ರ ಆಯೋಗವು 10 ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ಪದಗಳನ್ನು ಸೃಷ್ಟಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.
ಮೂರು ನಾಲ್ಕು ತಿಂಗಳುಗಳೊಳಗೆ ಪ್ರತಿ ಭಾಷೆಗೆ 5 ಸಾವಿರ ಪದಗಳಂತೆ ಸಿಎಸ್ಟಿಟಿಯು ಮೂಲಭೂತ ಪದನಿಘಂಟುಗಳನ್ನು ಹೊರತರಲಿದೆ.
ಬೊಡೊ, ಸಂತಾಲಿ, ಡೋಗ್ರಿ, ಕಾಶ್ಮೀರಿ, ಕೊಂಕಣಿ, ನೇಪಾಳಿ, ಮಣಿಪುರಿ, ಸಿಂಧಿ, ಮೈಥಿಲಿ ಹಾಗೂ ಸಂಸ್ಕೃತ ಭಾಷೆಗಳು ಭಾರತದ ಎಂಟನೆ ಶೆಡ್ಯೂಲ್ ನ 22 ಅಧಿಕೃತ ಭಾಷೆಗಳ ಪಟ್ಟಿಯ ಭಾಗವಾಗಿರುವುದು. ಆದಾಗ್ಯೂ, ಈ ಭಾಷೆಗಳಲ್ಲಿ ಅಧ್ಯಯನ ಸಾಮಾಗ್ರಿಗಳ ಸೃಷ್ಟಿಯಲ್ಲಿ ಅಭಾವವುಂಟಾಗಿದೆ.
ವೈಜ್ಞಾನಿಕ ವಿದ್ಯಮಾನ ಹಾಗೂ ತಾಂತ್ರಿಕ ಪದಗಳನ್ನು ವಿವರಿಸುವ ಪದಗಳ ಭಾರೀ ಕೊರತೆಯನ್ನು ಈ ಭಾಷೆಗಳು ಎದುರಿಸುತ್ತಿವೆ.
ಪತ್ರಿಕೋದ್ಯಮ,ಸಾರ್ವಜನಿಕ ಆಡಳಿತ , ರಸಾಯನಶಾಸ್ತ್ರ, ಸಸ್ಯಶಾಸ್ತ್ರ,ಜೀವಿಶಾಸ್ತ್ರ, ಮನಶ್ಶಾಸ್ತ್ರ,ಭೌತಶಾಸತ್ರ, ಅರ್ಥಶಾಸ್ತ್ರ, ಆಯುರ್ವೇದ, ಗಣಿತ, ಕಂಪ್ಯೂಟರ್ ವಿಜ್ಞಾನ, ರಾಜಕೀಯ ವಿಜ್ಞಾನ, ಕೃಷಿ, ನಾಗರಿಕ ಹಾಗೂ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಸೇರಿದಂತೆ 15 ಪಠ್ಯವಿಷಯಗಳಲ್ಲಿ 10 ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಪದಕೋಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ.
ರಾಜ್ಯ ಶಿಕ್ಷಣ ಮಂಡಳಿ, ವಿಶ್ವವಿದ್ಯಾನಿಲಯಗಳು, ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ (ಸಿಯುಇಟಿ), ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಮೈನ್ ಹಾಗೂ ವಿವಿ ಅನುದಾನ ಆಯೋಗ (ಯುಜಿಸಿ), ರಾಷ್ಟೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಯನ್ನು ಆಯೋಜಿಸುವ ರಾಜ್ಯ ಶಿಕ್ಷಣ ಮಂಡಳಿಗಳು, ವಿಶ್ವವಿದ್ಯಾನಿಲಯಗಳು, ಎಂಜಿನಿಯರಿಂಗ್ ಶಿಕ್ಷಣಸಂಸ್ಥೆಗಳಿಗೆ ಈ ನಿಘಂಟುಗಳನ್ನು ವಿತರಿಸಲಾಗುತ್ತಿದೆ.
ರಾಷ್ಟ್ರೀಯ ಭಾಷಾ ಪಟ್ಟಿಯನ್ನು 1950ರಲ್ಲಿ ಸೃಷ್ಟಿಸಲಾಗಿದ್ದು, ಅದು 14 ಭಾಷೆಗಳನ್ನು ಒಳಗೊಂಡಿತ್ತು. ಆನಂತರ 1967ರಲ್ಲಿ ಸಿಂಧಿ ಭಾಷೆಯನ್ನು,1992ರಲ್ಲಿ ಕೊಂಕಣಿ,ಮಣಿಪುರಿ ಹಾಗೂ ನೇಪಾಳಿ , 2004ರಲ್ಲಿ ಬೊಡೊ,ಡೋಗ್ರಿ,ಮೈಥಿಲಿ ಹಾಗೂ ಸಂತಾಲಿ ಭಾಷೆಗಲನ್ನು ಸೃಷ್ಟಿಸಲಾಗಿತ್ತು.
ಶಾಲಾ ಹಾಗೂ ಕಾಲೇಜು ಮಟ್ಟದಲ್ಲಿ ಪ್ರಾದೇಶಿಕ ಭಾಷೆಗಳನ್ನು ಶಿಕ್ಷಣದ ಮಾಧ್ಯಮವಾಗಿ ಬಳಕೆಯನ್ನು 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ, ಪ್ರಾದೇಶಿಕ ಭಾಷೆಗಳಲ್ಲಿ ತಂತ್ರಜ್ಞಾನ ಪದಕೋಶ ಸೃಷ್ಟಿಸುವ ಕೇಂದ್ರ ಸರಕಾರದ ನಡೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.


