HEALTH TIPS

ಕೋಟೆಯ ಅವಶೇಷಗಳ ಮೇಲೆ ನಿರ್ಮಿಸಲಾದ 117 ವರ್ಷಗಳ ಹಳೆಯ ರೈಲ್ವೆ ಸೇತುವೆ ಇನ್ನು ಇತಿಹಾಸ!

                ಕಾಸರಗೋಡು: ಧೀರ್ಘ ಶಿಳ್ಳೆಯೊಂದಿಗೆ ಈ ಸೇತುವೆ ಮೂಲಕ ಕೊನೆಯ ರೈಲು ಮೊನ್ನೆಯಷ್ಟೇ ಹಾದುಹೋಯಿತು. ಇದರೊಂದಿಗೆ ಬ್ರಿಟಿಷರು ನಿರ್ಮಿಸಿದ 117 ವರ್ಷಗಳ ಹಳೆಯ ಕಾರ್ಯಂಗೋಡ್ ರೈಲು ಸೇತುವೆ ಇತಿಹಾಸದ ಭಾಗವಾಯಿತು. ಕೊಚುವೇಲಿ ಲೋಕಮಾನ್ಯತಿಲಕ್ ಎಕ್ಸ್‍ಪ್ರೆಸ್ ರೈಲು ಕೊನೆಯದಾಗಿ ಹಾದುಹೋಗಿತ್ತು. ರೈಲು ಹಾದುಹೋದ ನಂತರ, ರೈಲ್ವೆ ಮತ್ತು ಸೇತುವೆಯ ನಡುವಿನ ಸಂಪರ್ಕ ಕಡಿತಗೊಂಡಿತು.

                 1906 ರಲ್ಲಿ, ಬ್ರಿಟಿಷರು 15 ಕಲ್ಲಿನ ಕಂಬಗಳ ಮೇಲೆ ಕಾರ್ಯಂಗೋಡ್ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದ್ದರು. ಸೇತುವೆಯ ಕೆಂಪು ಕಂಬಗಳು ಶತಮಾನಗಳ ಹಿಂದೆ ಕೋಟೆಗಳು ರಚನೆಗೊಂಡ ನೀಲೇಶ್ವರದ ಹೆಮ್ಮೆಯ ಇತಿಹಾಸಕ್ಕೆ ಸಾಕ್ಷಿಯಾಗಿದೆ. ನೀಲೇಶ್ವರದ ಕೋಟೆಗಳ ಕಲ್ಲುಗಳನ್ನು ಅಂದು ಬ್ರಿಟಿಷರು ಈ ರೈಲು ಸೇತುವೆ ಕಂಬ ನಿರ್ಮಾಣಕ್ಕೆ ಬಳಸಿದ್ದರು. ಸ್ಲೀಪರ್‍ಗಳನ್ನು ಪರಪ್ಪದಲ್ಲಿರುವ ಬ್ರಿಟಿಷ ಸರ್ಕಾರದ ಒಡೆತನದ ಮರದ ಗಿರಣಿಯಿಂದ ತಯಾರಿಸಲಾಯಿತೆಂಬುದು ಇತಿಹಾಸ ಹೇಳುತ್ತದೆ. 

          ಆಗ ಸ್ಥಳೀಯ ನಿವಾಸಿಗಳಿಗೆ ರೈಲ್ವೇ ಹಳಿಯ ಎರಡೂ ಕಡೆ ನಡೆದುಕೊಂಡು ಹೋಗಲು ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು. ರೈಲು ಹಾದು ಹೋಗುವಾಗ ಪಕ್ಕಕ್ಕೆ ನಿಲ್ಲುವ ಸೌಲಭ್ಯವೂ ಇತ್ತು. ಇದೀಗ ಹೊಸ ಸೇತುವೆ ನಿರ್ಮಾಣ ಪೂರ್ಣಗೊಂಡ ಕಾರಣ  ಶತಮಾನದಷ್ಟು ಹಳೆಯದಾದ ಸೇತುವೆಯನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ. 

          ಕೈಬಿಟ್ಟ ಹಳೆಯ ಸೇತುವೆಯ ಬಳಿ ಎರಡು ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ. ಮೂರನೇ ಲೇನ್ ಕಾರ್ಯಾರಂಭ ಮಾಡಿದಾಗ ಮೊದಲ ಸೇತುವೆಯನ್ನು ಕೈಬಿಡಲಾಯಿತು. ದಕ್ಷಿಣ ಕೇರಳದಲ್ಲಿ ರೈಲುಮಾರ್ಗ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಮಂಗಳೂರಿಗೆ ರೈಲು ಮಾರ್ಗ ಪೂರ್ಣಗೊಂಡಿತ್ತು. ಶಯಂಗೋಡ್ ಸೇತುವೆಯನ್ನು ನಿರ್ಮಿಸಲು ಪಾಲೈ ಕೋಟೆಯ ಕಲ್ಲುಗಳನ್ನು ಬಳಸಲಾಗಿದೆ ಎಂದು ಹಿರಿಯರು ಹೇಳುತ್ತಾರೆ.

          ವೀರಮಲೆ ಕೋಟೆ, ಚಾತ ಮಠದ ಕೋಟೆ, ದಾರಿಗುನ್ನು ಕೋಟೆಯ ಕಲ್ಲುಗಳನ್ನೂ ಹಳಿ, ಸೇತುವೆ ತಯಾರಿಸಲು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ರೈಲ್ವೆ ಸೇತುವೆಗಳಿಗೆ ಕಲ್ಲುಗಳನ್ನು ಬಳಸಿದ್ದರಿಂದ ಈ ಕೋಟೆಗಳು ಹಾನಿಗೊಳಗಾಗಿರಬಹುದು ಎಂದು ಸೂಚಿಸಲಾಗಿದೆ. ಪ್ರಾಚೀನ ಇತಿಹಾಸದ ದ್ಯೋತಕವಾದ, ಕೋಟೆಯ ಕಲ್ಲುಗಳನ್ನು ಬಳಸಿ, ಕೆತ್ತನೆಗಳನ್ನೊಳಗೊಂಡ ಕಲ್ಲಿನಿಂದ ನಿರ್ಮಿಸಿರುವ ಸೇತುವೆಯನ್ನು ಇತಿಹಾಸದ ಹಾದಿ ಬದಲಿಸದೆ ಉಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries