ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು(ಎನ್‌ಸಿಇಆರ್‌ಟಿ) 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯದಿಂದ ಪ್ರತ್ಯೇಕ ಖಾಲಿಸ್ತಾನ ದೇಶದ ಬೇಡಿಕೆ ಕುರಿತ ವಿಷಯವನ್ನು ತೆಗೆದು ಹಾಕಿದೆ.
0
samarasasudhi
ಮೇ 30, 2023
ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು(ಎನ್‌ಸಿಇಆರ್‌ಟಿ) 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯದಿಂದ ಪ್ರತ್ಯೇಕ ಖಾಲಿಸ್ತಾನ ದೇಶದ ಬೇಡಿಕೆ ಕುರಿತ ವಿಷಯವನ್ನು ತೆಗೆದು ಹಾಕಿದೆ.
ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ(ಎಸ್‌ಜಿಪಿಸಿ) ಆಕ್ಷೇಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಿಖ್ಖರ ಐತಿಹಾಸಿಕ ಮಾಹಿತಿಗಳ ಕುರಿತಂತೆ ಎನ್‌ಸಿಇಆರ್‌ಟಿಯು ರಾಜ್ಯಶಾಸ್ತ್ರ ಪಠ್ಯದಲ್ಲಿ ತಪ್ಪಾಗಿ ವಿವರಿಸಿದೆ ಎಂದು ಎಸ್‌ಜಿಪಿಸಿ ಆಕ್ಷೇಪ ವ್ಯಕ್ತಪಡಿಸಿತ್ತು.
'ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ'ಎಂಬ ಪಠ್ಯದಲ್ಲಿ ಆನಂದಪುರ ಸಾಹಿಬ್ ನಿರ್ಣಯದ ಕುರಿತಂತೆ ಉಲ್ಲೇಖವನ್ನು ಸಿಖ್ ಸಮಿತಿಯು ವಿರೋಧಿಸಿತ್ತು.
'ಆನಂದಪುರದ ನಿರ್ಣಯವು ಒಕ್ಕೂಟ ವ್ಯವಸ್ಥೆಯನ್ನು ಅನ್ನು ಬಲಪಡಿಸುವ ಮನವಿಯಾಗಿತ್ತು ಆದರೆ ಇದನ್ನು ಪ್ರತ್ಯೇಕ ಸಿಖ್ ರಾಷ್ಟ್ರದ ಮನವಿ ಎಂದೂ ಅರ್ಥೈಸಬಹುದು, ಭಾರತದಿಂದ ಪ್ರತ್ಯೇಕತೆ ಮತ್ತು ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರ ರಚಿಸುವ ಬಗ್ಗೆ ಹಲವು ಪ್ರತ್ಯೇಕತಾವಾದಿಗಳು ವಾದ ಮಂಡಿಸುತ್ತಿದ್ದಾರೆ'ಎಂಬ ಸಾಲನ್ನು ಪಠ್ಯದಿಂದ ತೆಗೆಯಲಾಗಿದೆ.