ಕಾಸರಗೋಡು: ಕಾಞಂಗಾಡ್ ಆರ್ಟ್ ಪೋರಂನ ಸೂಪರ್ ಸಿಂಗರ್ 2023 ಫೈನಲ್‍ನಲ್ಲಿ ಶಿಜಿಲ್ ಪಯ್ಯನ್ನೂರ್ ವಿಜಯಿಗಳಾಗಿದ್ದಾರೆ. ಭವ್ಯ ಕೃಷ್ಣ ದ್ವಿತೀಯ ಸ್ಥಾನ ಹಾಗೂ ನಿರುಪಮ್ ಸಾಯಿ ಮತ್ತು ಶಾಲಿಮಾ ಪ್ರಕಾಶ್ ಬಾಕಳಂ ತೃತೀಯ ಸ್ಥಾನ ಹಂಚಿಕೊಂಡರು.
ಕಾಞಂಗಾಡ್‍ನ ಅಲಾಮಿಪಳ್ಳಿಯಲ್ಲಿ ನಡೆಯುತ್ತಿರುವ ‘ನನ್ನ ಕೇರಳ’ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ನಾಲ್ಕನೇ ದಿನವಾದ ಶನಿವಾರ ಸೂಪರ್ ಸಿಂಗರ್ ಫೈನಲ್ಸ್ ವೀಕ್ಷಿಸಲು ಅಪಾರ ಜನಸ್ತೋಮ ನೆರೆದಿತ್ತು. ಸಂಜೆ 7 ಗಂಟೆಗೆ ಆರಂಭವಾದ ಸ್ಪರ್ಧೆಯಲ್ಲಿ ಹನ್ನೆರಡು ಸ್ಪರ್ಧಿಗಳು ಎರಡು ಸುತ್ತುಗಳಲ್ಲಿ ಸ್ಪರ್ಧಿಸಿದ್ದರು. ಸೆಮಿ ಕ್ಲಾಸಿಕಲ್ ಮತ್ತು ಮೆಲೋಡಿ ಸುತ್ತಿನಲ್ಲಿ ಹಾಡಿದ ಹಾಡುಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದವು. ಕಿಕ್ಕಿರಿದ ಪ್ರೇಕ್ಷಕರು ಭಾಗವಹಿಸಿದ್ದರು. ಖ್ಯಾತ ಗಾಯಕ ಚೆಂಗನ್ನೂರು ಶ್ರೀಕುಮಾರ್, ಎ.ಎಂ.ಅಶೋಕ್ ಕುಮಾರ್, ವಿ.ಟಿ.ಸುಧಾಕರನ್ ಮತ್ತು ಅತುಲ್ಯ ಜಯಕುಮಾರ್ ತೀರ್ಪುಗಾರರಾಗಿದ್ದರು. ನಿರೂಪಕರಾಗಿ ಕಾಞಂಗಾಡ್ ಆರ್ಟ್ ಪೋರಂ ಅಧ್ಯಕ್ಷ ವಿ.ಸುರೇಶ್ ಮೋಹನ್, ದೃಶ್ಯ ಶಶಿಕುಮಾರ್ ಆಗಮಿಸಿದ್ದರು.
ಆರ್ಟ್ ಪೋರಂ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುವ ಸೂಪರ್ ಸಿಂಗರ್ ನಲ್ಲಿ ವಿವಿಧ ಜಿಲ್ಲೆಗಳಿಂದ ಹಲವಾರು ಮಂದಿ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ. 2023 ರ ಸ್ಪರ್ಧೆಯು ಏಪ್ರಿಲ್‍ನಲ್ಲಿ ಪ್ರಾರಂಭವಾಯಿತು. ಮೊದಲ ಸುತ್ತಿನಲ್ಲಿ 58 ಮಂದಿ ಸ್ಪರ್ಧಿಗಳಾಗಿ ಆಗಮಿಸಿದ್ದು, 12 ಮಂದಿ ಫೈನಲ್‍ಗೆ ಆಯ್ಕೆಯಾಗಿದ್ದರು. ಎಂ.ಸಿ.ಮುರಳೀಧರನ್, ಕೆ.ಚಂದ್ರನ್, ರಾಜೀವ್ ಲಾಜರ್, ದಿನೇಶ ಮೂಲಕಂಡ, ರವಿ ಪಾರಗೋನ್, ಅಂಬುಜಾಕ್ಷನ್ ಅಲಾಮಿಪಳ್ಳಿ ಮತ್ತು ಎಂ.ಎಸ್.ಲಾಜಿನ್ ವಿಜೇತರಿಗೆ ನಗದು ಬಹುಮಾನ ವಿತರಿಸಿದರು.





