HEALTH TIPS

2024ರ ಚುನಾವಣೆಯಲ್ಲಿ ತೃತೀಯ ರಂಗದ ಜೊತೆಗೆ ಮೈತ್ರಿ ಇಲ್ಲ: ಬಿಜೆಡಿ

                 ಭುವನೇಶ್ವರ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಒಡಿಶಾದ ಆಡಳಿತಾರೂಢ ಬಿಜು ಜನತಾದಳವು (ಬಿಜೆಡಿ) ಕಾಂಗ್ರೆಸ್‌, ಬಿಜೆಪಿ ಜೊತೆ ಅಷ್ಟೇ ಅಲ್ಲದೆ ತೃತೀಯ‌ ರಂಗದ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

                'ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬುದನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಅವರು ಸ್ಪಷ್ಟಪಡಿಸಿದ್ದಾರೆ' ಎಂದೂ ಹೇಳಿದ್ದಾರೆ.

               'ರಾಜ್ಯದ ಹಿತಾಸಕ್ತಿಯು ಪಕ್ಷಕ್ಕೆ ಮುಖ್ಯ. ಒಡಿಶಾದ ಅಭಿವೃದ್ಧಿಯು ನಮ್ಮ ಧ್ಯೇಯ' ಎಂದಿದ್ದಾರೆ.

                'ಪಟ್ನಾಯಕ್‌ ಅವರ ಆತ್ಮೀಯ ಮಿತ್ರರಾದ ನಿತೀಶ್‌ ಕುಮಾರ್‌ ಅವರ ಪ್ರಸ್ತಾವಿತ ತೃತೀಯ ರಂಗದಿಂದಲೂ ಪಕ್ಷವು ಅಂತರ ಕಾಯ್ದುಕೊಳ್ಳಲಿದೆ' ಎಂದು ಸ್ಪಷ್ಟಪಡಿಸಿದ್ದಾರೆ.

'ರಾಜ್ಯದ 4.5 ಕೋಟಿ ಜನರ ಬೆಂಬಲವಿರುವಾಗ ಚುನಾವಣೆಯಲ್ಲಿ ಗೆಲ್ಲಲು ಪಕ್ಷವು ಇತರರ ಬೆಂಬಲ ಯಾಚಿಸುವುದಿಲ್ಲ' ಎಂದೂ ವಿವರಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries