HEALTH TIPS

ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದು: ರೈಲ್ವೆಗೆ ₹ 2,242 ಕೋಟಿ ಅಧಿಕ ಆದಾಯ

              ವದೆಹಲಿ: ಪ್ರಯಾಣ ದರದಲ್ಲಿ ಹಿರಿಯ ನಾಗರಿಕರಿಗೆ ನೀಡಿದ್ದ ರಿಯಾಯಿತಿಯನ್ನು ಕೋವಿಡ್‌ ಕಾರಣದಿಂದಾಗಿ ರದ್ದುಪಡಿಸಿದ ಪರಿಣಾಮ ರೈಲ್ವೆ ಇಲಾಖೆಯು 2022-23ನೇ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ ₹ 2,242 ಕೋಟಿ ಆದಾಯಗಳಿಸಿದೆ.

               ಕೋವಿಡ್‌ನಿಂದಾಗಿ ರಿಯಾಯಿತಿ ರದ್ದುಪಡಿಸಿದ ಬಳಿಕ ಮಾರ್ಚ್‌ 20, 2020 ಮತ್ತು ಮಾರ್ಚ್ 31, 2022 ನಡುವಿನ ಅವಧಿಯಲ್ಲಿ ಹೆಚ್ಚುವರಿಯಾಗಿ ₹ 1,500 ಕೋಟಿ ಆದಾಯವನ್ನು ಇಲಾಖೆ ಗಳಿಸಿದೆ.

                 ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ರೈಲ್ವೆ ಇಲಾಖೆ ಈ ಮಾಹಿತಿ ನೀಡಿದೆ. 'ಏಪ್ರಿಲ್‌ 1, 2022 ರಿಂದ ಮಾರ್ಚ್ 31, 2023ರ ಹಣಕಾಸು ವರ್ಷದಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣದರದಲ್ಲಿ ರಿಯಾಯಿತಿ ನೀಡಿಲ್ಲ. ಈ ಅವಧಿಯಲ್ಲಿ ಹಿರಿಯ ನಾಗರಿಕರಾದ 4.6 ಕೋಟಿ ಪುರುಷರು, 3.3 ಕೋಟಿ ಮಹಿಳೆಯರು, 18 ಸಾವಿರ ಲೈಂಗಿಕ ಅಲ್ಪಸಂಖ್ಯಾತರು ಪ್ರಯಾಣಿಸಿದ್ದರು' ಎಂದು ತಿಳಿಸಿದೆ.

                      ಈ ಅವಧಿಯಲ್ಲಿ ಪ್ರಯಾಣಿಸಿದ ಹಿರಿಯ ನಾಗರಿಕರಿಂದ ಒಟ್ಟು ₹ 5,062 ಕೋಟಿ ಆದಾಯ ಬಂದಿದೆ. ಇದರಲ್ಲಿ ಪ್ರಯಾಣದರ ರಿಯಾಯಿತಿ ರದ್ದುಪಡಿಸಿದ್ದರಿಂದ ಗಳಿಸಿದ ₹ 2,242 ಕೋಟಿಯೂ ಸೇರಿದೆ ಎಂದು ಎಂದು ಉತ್ತರದಲ್ಲಿ ರೈಲ್ವೆ ಇಲಾಖೆಯು ವಿವರಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries