ಕುಂಬಳೆ: ಮಂಜೇಶ್ವರ ಮಂಡಲದ 35 ಶಾಲೆಗಳಿಗೆ 218 ಲ್ಯಾಪ್‍ಟಾಪ್‍ಗಳನ್ನು ಖರೀದಿಸಲು ಶಾಸಕರ ಮತ್ತು ಎಡಿಎಸ್-ಎಸ್‍ಡಿಎಫ್ ನಿಧಿಯಿಂದ 76.96 ಲಕ್ಷ ರೂ.ಗಳ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಮಾಹಿತಿ ನೀಡಿದರು.
ಮಂಜೂರು ಮಾಡಿದ ಶಾಲೆ ಮತ್ತು ಲ್ಯಾಪ್‍ಟಾಪ್‍ಗಳ ಸಂಖ್ಯೆ ಕ್ರಮವಾಗಿ : ಜಿ.ವಿ.ಎಚ್.ಎಸ್.ಕುಂಜತ್ತೂರು-5, ಜಿ. ಎಚ್‍ಎಸ್‍ಎಸ್ ಬಂಗ್ರಮಂಜೇಶ್ವರ-10, ಜಿಎಚ್‍ಎಸ್‍ಎಸ್ ಉಪ್ಪಳ-12, ಜಿಎಚ್‍ಎಸ್‍ಎಸ್ ಮಂಗಲ್ಪಾಡಿ-12, ಜಿವಿ ಎಚ್‍ಎಸ್‍ಎಸ್ ಹೇರೂರು ಮೀಪಿರಿ-6, ಜಿಎಚ್.ಎಸ್‍ಎಸ್ ಅಂಗಡಿಮೊಗರು-10, ಜಿ. ಎಚ್‍ಎಸ್‍ಎಸ್ ಶಿರಿಯಾ-6, ಜಿಎಚ್‍ಎಸ್‍ಎಸ್ ಬೇಕೂರು-8, ಜಿಎಚ್ ಯುಪಿ ಶಾಲೆ ಕುರ್ಚಿಪಳ್ಳ-3, ಜಿವಿಎಚ್‍ಎಸ್‍ಎಸ್ ಮೊಗ್ರಾಲ್-20, ಜಿ. ಎಸ್.ಬಿ.ಎಸ್.ಕುಂಬಳೆ-7, ಜಿ.ಎಚ್.ಎಸ್. ಕೊಡ್ಯಮೆ-8, ಜಿಎಚ್‍ಎಸ್ ಕಡಂಬಾರ್-6, ಜಿಎಚ್‍ಎಸ್ ಕುಂಬಳೆ-20, ಜಿಎಚ್‍ಎಸ್ ಉದ್ಯಾವರ-6, ಜಿಎಚ್‍ಎಸ್ ಸೂರಂಬೈಲ್-6, ಜಿಎಚ್‍ಎಸ್ ಮೂಡಂಬೈಲ್-5, ಜಿಎಚ್‍ಎಸ್‍ಎಸ್ ಪಡ್ರೆ-6, ಜಿಎಚ್‍ಎಸ್ ಪೈವಳಿಕೆ-6, 20. ಈ.ಎಚ್.ಎಸ್.ಎಸ್ ಪೈವಳಿಕೆ ನಗರ-10, ಎಚ್.ಎಸ್.ಎಸ್.ಎಸ್ ಕಾಟುಕುಕ್ಕ್ಕೆ-4, ಎಚ್.ಎಸ್.ಎಸ್.ಎಸ್ ಶೇಣಿ-7, ಎಂಐಎಎಲ್‍ಪಿಎಸ್ ಚಲ್ಲಂಗಯಿ-2, ಡಾನ್ ಬಾಸ್ಕೋ ಎಯು ಪಿ.ಕಯ್ಯಾರ್-3, ಶ್ರೀರಾಮ ಅನುದಾನಿತ ಶಾಲೆ ಕುಬಣೂರು-3, ಪಾರಕಟ್ಟೆ ಶಾಲೆ -4, ಧರ್ಮತ್ತಡ್ಕ ಶಾಲೆ -3, ಕೊಡ್ಲಮೊಗರು -3, ಎಸ್ ಎ ಟಿ ಮಂಜೇಶ್ವರ - 5, ಮೀಯಪದವು -4, ಆರಿಕ್ಕಾಡಿ -3, ಪೇರಾಲು ಕಣ್ಣೂರು -2, ಏಳ್ಕಾನ - 1, ಎಂಎಯುಪಿಎಸ್ ಮುಂಡ್ಯತ್ತಡ್ಕ -1 ಮತ್ತು ಎಎಲ್ಪಿಎಸ್ ಕಂದಲ್ -1 ಎಂಬಂತೆ ಅನುಮೋದಿಸಲಾಗಿದೆ.
ಸಾರ್ವಜನಿಕ ವಲಯದ ಸಂಸ್ಥೆಯಾದ ಕೆಲ್ಟ್ರಾನ್ ಮೂಲಕ ಇಂಟೆಲ್ ಕೋರ್ ಐ-3 ಏಳನೇ ತಲೆಮಾರಿನ ಲ್ಯಾಪ್‍ಟಾಪ್‍ಗಳನ್ನು ಶಾಲೆಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಎಕೆಎಂ ಅಶ್ರಫ್ ಶಾಸಕರು ಮಾಹಿತಿ ನೀಡಿದರು.




.jpg)
