HEALTH TIPS

ಪಾರ್ಟ್​ ಟೈಮ್​ ಕೆಲಸ ಹುಡುಕುತ್ತಿದ್ದ ನಟನಿಗೆ 6 ಲಕ್ಷ ರೂ. ವಂಚಿಸಿದ ಸೈಬರ್​ ಕಳ್ಳ!

                ಮುಂಬೈನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.

                  ಇದೀಗ ಪ್ರಕರಣ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಹುಡುಕುತ್ತಿದ್ದ ಚಲನಚಿತ್ರ ಕಲಾವಿದರೊಬ್ಬರು ಸೈಬರ್​ ವಂಚಕನ ಬಲೆಗೆ ಸಿಲುಕಿ 6 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಮುಂಬೈನ ಖಾರ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

                                    ಟೆಲಿಗ್ರಾಂ ಮೂಲಕ ಗಾಳ

              ಈ ಕುರಿತು ಪ್ರತಿಕ್ರಿಯಿಸಿರುವ ಸೈಬರ್​ ಕ್ರೈಂ ಅಧಿಕಾರಿ ಒಬ್ಬರು ಚಲನಚಿತ್ರಗಳಲ್ಲಿ ಕಲಾವಿದರಾಗಿ ಕೆಲಸ ಮಾಡುವ ಗಣೇಶನ್​ ನಾಡಾರ್​ ಅವರ ಟೆಲಿಗ್ರಾಂ ಖಾತೆಗೆ ವಂಚಕ ಅಪ್ಲಿಕೇಶನ್​ ಒಂದರ ಲಿಂಕ್​ಅನ್ನು ಕಳುಹಿಸಿ ಡೌನ್​ಲೋಡ್​ ಮಾಡುವಂತೆ ಸೂಚಿಸಿದ್ದಾನೆ.

                 ಮೊದಲಿಗೆ ಆಯಪ್​ ಡೌನ್​ಲೋಡ್​ ಮಾಡಲು ಹಿಂದೇಟು ಹಾಕಿದ ದೂರುದಾರರು ಬಳಿಕ ಅದರ ಬಗ್ಗೆ ತಿಳಿದು ಆಸಕ್ತಿದಾಯಕ ಎಂದು ತಿಳಿದು ತಮ್ಮ ಮೊಬೈಲ್​ ಫೋನ್​ನಲ್ಲಿ ಇನ್ಸ್ಟಾಲ್​ ಮಾಡಿದ್ದಾರೆ. ಬಳಿಕ ವಂದಕ ಸಂತ್ರಸ್ತರಿಗೆ ಟಾಸ್ಟ್​ ಒಂದನ್ನು ನೀಡಿದ್ದಾನೆ.

                                      ನಂಬಿಕೆ ಗಳಿಸಿ ವಂಚನೆ

               ಟಾಸ್ಕ್​ ಪೂರ್ತಿ ಮಾಡಿದ ನಂತರ ವಂಚಕ ಗಣೇಶನ್​ ಅವರ ಖಾತೆಗೆ 1,000 ಸಾವಿರ ರೂಪಾಯಿಯನ್ನು ಜಮೆ ಮಾಡಿದ್ದಾನೆ. ಬಳಿಕ ಎರಡನೇ ಬಾರಿಗೆ ವಂಚಕ 18,000 ಸಾವಿರ 29 ಹಾಗೂ 37,000 ಸಾವಿರ ರೂಪಾಯಿ ಹಣವನ್ನು ಸಂತ್ರಸ್ತರ ಖಾತೆಗೆ ಜಮೆ ಮಾಡಿ ನಂಬಿಕೆ ಗಳಿಸಿದ್ದಾನೆ.

ಆ ಬಳಿಕ ಕಾರ್ಯಪ್ರವೃತ್ತನಾದ ವಂಚಕ ದೂರುದಾರ ಗಣೇಶನ್​ ಅವರಿಗೆ 6 ಲಕ್ಷ ರೂಪಾಯಿ ಜಮೆ ಮಾಡುವಂತೆ ಹೇಳಿ ಬಳಿಕ ಹಣ ಪಡೆದು ವಂಚಿಸಿದ್ದಾನೆ ಈ ಕುರಿತು ಖಾರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಕ್ರೈಂ ಬ್ರ್ಯಾಂಚ್​ನ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries