HEALTH TIPS

ಔಷಧ, ಆಹಾರ ಉತ್ಪನ್ನಗಳ ಮೇಲೆ ಕ್ಯೂಆರ್‌ ಕೋಡ್‌?

                ವದೆಹಲಿ (PTI): ಎಲ್ಲ ಸ್ವರೂಪದ ಔಷಧಗಳು ಹಾಗೂ ಆಹಾರ ಉತ್ಪನ್ನಗಳ ಮೇಲೆ ಕ್ಯೂಆರ್‌ ಕೋಡ್‌ಗಳನ್ನು (ಕ್ವಿಕ್ ರೆಸ್ಪಾನ್ಸ್) ಬಳಕೆ ಮಾಡುವ ಕುರಿತು ‌ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

              ಮುಖ್ಯನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರು ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದರು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಔಷಧ ತಾಂತ್ರಿಕ ಸಲಹಾ ಮಂಡಳಿಗೂ ಕೋರ್ಟ್ ನೋಟಿಸ್ ನೀಡಿತು. ಕ‍‍ಪಿಲಾ ಮತ್ತು ನಿರ್ಮಲ್ ಹಿಂಗೋರಾನಿ ಪ್ರತಿಷ್ಠಾನ ಹಾಗೂ ಡಾ. ಸ್ಮೃತಿ ಸಿಂಗ್ ಮತ್ತು ಶೋಭನ್ ಸಿಂಗ್ ಎಂಬವರು ಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಸ್ಮೃತಿ ಹಾಗೂ ಶೋಭನ್ ಅವರು ದೃಷ್ಟಿಹೀನರು.

                 ಸ್ಮಾರ್ಟ್‌ಫೋನ್‌ ಮೂಲಕ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ, ಉತ್ಪನ್ನವೊಂದರ ಅಗತ್ಯ ಮಾಹಿತಿಯನ್ನು ತಕ್ಷಣ ಪಡೆದುಕೊಳ್ಳಬಹುದು. ದೃಷ್ಟಿಹೀನರಿಗೆ ಅನುಕೂಲವಾಗುವಂತೆ ಈ ಮಾಹಿತಿಯನ್ನು ಧ್ವನಿರೂಪದಲ್ಲೂ ಪರಿವರ್ತಿಸಿಕೊಳ್ಳಬಹುದು ಎಂದು ಅರ್ಜಿದಾರರ ಪರ ವಕೀಲ ಅಮನ್ ಹಿಂಗೋರಾನಿ ಅವರು ಹೇಳಿದರು.

              ಕ್ಯೂಆರ್‌ ಕೋಡ್ ಅಳವಡಿಸುವುದು ದೃಷ್ಟಿಹೀನರ ಹಿತದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಲಿದೆ. ಹೀಗೆ ಮಾಡುವುದರಿಂದ, ತಪ್ಪಾದ ಔಷಧಿ ಅಥವಾ ತಪ್ಪಾದ ಪ್ರಮಾಣದ ಔಷಧವನ್ನು ತೆಗೆದುಕೊಳ್ಳುವಂತಹ ವೈದ್ಯಕೀಯ ತೊಂದರೆಗಳಿಂದ ರೋಗಿಗಳನ್ನು ಪಾರುಮಾಡಬಹುದು. ಅಡ್ಡ ಪರಿಣಾಮಗಳು ಉಂಟಾಗದಂತೆ ಹಾಗೂ ನಕಲಿ, ಕಳಪೆ ಗುಣಮಟ್ಟದ ಔಷಧಗಳ ಬಳಕೆಯನ್ನೂ ತಡೆಯಬಹುದು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

               ದೃಷ್ಟಿಹೀನರೂ ಸಹ ಸಮಾನತೆ ಹಾಗೂ ಘನತೆಯಿಂದ ಜೀವಿಸುವ ಶಾಸನಬದ್ಧ ಮೂಲಭೂತ ಹಕ್ಕುಗಳನ್ನು ಹೊಂದಿದ್ದಾರೆ. ಕ್ಯೂಆರ್ ಕೋಡ್ ವ್ಯವಸ್ಥೆಯಿಂದ ಉತ್ಪನ್ನಗಳನ್ನು ಗುರುತಿಸಲು ಹಾಗೂ ಅಗತ್ಯ ಮಾಹಿತಿಯನ್ನು ಪಡೆಯಲು ಅವರಿಗೆ ಸಾಧ್ಯವಾಗಲಿದೆ. ಸ್ಮಾರ್ಟ್‌ಫೋನ್‌ಗಳ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ವಿಫುಲ ಅವಕಾಶಗಳಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

              ಔಷಧ, ಆಹಾರ, ಕಾಸ್ಮೆಟಿಕ್ ಮತ್ತು ಇತರೆ ಗ್ರಾಹಕ ಬಳಕೆಯ ವಸ್ತುಗಳ ಮೇಲೆ ಕ್ಯೂಆರ್ ಕೋಡ್ ಹಾಕುವ ಯಾವುದೇ ಕ್ರಮಗಳು ಹಾಗೂ ಮಾರ್ಗಸೂಚಿಗಳು ದೇಶಗಳಲ್ಲಿ ಜಾರಿಯಲ್ಲಿಲ್ಲ. ಸಂಬಂಧಪಟ್ಟ ಪ್ರಾಧಿಕಾರಗಳು ಸಮಗ್ರ ಕ್ರಮಗಳನ್ನು ಜಾರಿಗೊಳಿಸಲು ಹಾಗೂ ಮಾರ್ಗಸೂಚಿಗಳನ್ನು ನಿಗದಿಪಡಿಸಲು ವಿಫಲವಾಗಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries