HEALTH TIPS

ಸೀಟ್ ಬೆಲ್ಟ್ ಅಲಾರಾಂ ಸ್ಟಾಪರ್ ಕ್ಲಿಪ್ ಗಳನ್ನು ಮಾರಾಟ ಮಾಡದಂತೆ ಇ-ಕಾಮರ್ಸ್ ಕಂಪೆನಿಗಳಿಗೆ ಕೇಂದ್ರ ಆದೇಶ

                  ವದೆಹಲಿ:ಕಾರ್ ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್ ಗಳನ್ನು ಮಾರಾಟ ಮಾಡದಂತೆ ಐದು ಬೃಹತ್ ಇ-ಕಾಮರ್ಸ್ ಕಂಪೆನಿಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಆದೇಶ ಜಾರಿ ಮಾಡಿದೆ. ಇಂತಹ ಕ್ಲಿಪ್ ಗಳನ್ನು ಹಲವು ಇ-ಕಾಮರ್ಸ್ ಕಂಪೆನಿಗಳು ನಿರ್ಲಜ್ಜವಾಗಿ ಮಾರಾಟ ಮಾಡುತ್ತಿರುವುದನ್ನು ಪ್ರಾಧಿಕಾರ ಗಮನಿಸಿದೆ.

             ಸೀಟ್ ಬೆಲ್ಟ್ ಧರಿಸದೇ ಇದ್ದಾಗ ಉಂಟಾಗುವ ಬೀಪ್ ಅಲಾರ್ಮ್ ಅನ್ನು ನಿಲ್ಲಿಸುವ ಮೂಲಕ ಈ ಕ್ಲಿಪ್ ಗ್ರಾಹಕರ ಜೀವ ಹಾಗೂ ಸುರಕ್ಷೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ. ಇಂತಹ ವಸ್ತುಗಳ ಮಾರಾಟ ಗ್ರಾಹಕರ ರಕ್ಷಣಾ ಕಾಯ್ದೆ-2019ರ ಉಲ್ಲಂಘನೆ ಎಂದು ಆದೇಶ ಹೇಳಿದೆ.

               ಅಮೆಝಾನ್, ಫ್ಲಿಪ್ಕಾರ್ಟ್, ಸ್ನಾಪ್ಡೀಲ್, ಶಾಪ್ಕ್ಲೂಸ್ ಹಾಗೂ ಮೀಶೋ ಮೊದಲಾದ ಈ ಕಾಮರ್ಸ್ ಕಂಪೆನಿಗಳಿಗೆ ಈ ಆದೇಶ ನೀಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ವಾಹನ ಉತ್ಪಾದಕರು ಸೀಟ್ ಬೆಲ್ಟ್ ಅಲಾರ್ಮ್ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ಸರಕಾರ ಯೋಜಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries