HEALTH TIPS

ಮುಖದ ಅಂದಕ್ಕಾಗಿ ದಿನದಲ್ಲಿ ಎಷ್ಟು ಬಾರಿ ಮುಖ ತೊಳೆಯಬೇಕು?

 ಪ್ರತಿ ದಿನ ಒಂದೆರಡು ಬಾರಿಯಾದರೂ ಅಥವಾ ಸ್ನಾನ ಮಾಡುವಾಗ ಮಾತ್ರವೇ ಮುಖ ತೊಳೆದುಕೊಳ್ಳುವವರು ಇದ್ದಾರೆ. ದಿನಕ್ಕೆ ಎಷ್ಟು ಬಾರಿ ಮುಖ ತೊಳೆದುಕೊಳ್ಳುತ್ತಿದ್ದೇವೆ ಎನ್ನುವುದು ಕೂಡಾ ಚರ್ಮದ ಆರೋಗ್ಯವನ್ನು ನಿರ್ಧರಿಸುತ್ತೆ ಎನ್ನುತ್ತಾರೆ ವೈದ್ಯರು. ಹಾಗಾದ್ರೆ ದಿನಕ್ಕೆಷ್ಟು ಬಾರಿ ಫೇಸ್‌ವಾಶ್‌ ಮಾಡಬೇಕು,ಇದನ್ನು ಮಾಡುವ ಸರಿಯಾದ ವಿಧಾನ ಹೇಗೆ ಎನ್ನುವ ಮಾಹಿತಿ ಈ ಲೇಖನದಲ್ಲಿದೆ.

ಯಾಕೆ ಮುಖ ತೊಳೆಯುವುದು ಮುಖ್ಯ..?
ಮುಖದ ಚರ್ಮ ಸೂಕ್ಷ್ಮವಾಗಿರುತ್ತೆ. ಪ್ರತಿದಿನ ಓಡಾಟ, ಕೆಲಸ, ವ್ಯಾಯಾಮದ ಜೊತೆಗೆ ಧೂಳು, ಹೊಗೆ, ಬೆವರಿನ ಜೊತೆಗೆ ಮುಖಕ್ಕೆ ಹಚ್ಚಿಕೊಳ್ಳುವ ಮೇಕ್‌ಅಪ್‌ನಿಂದಾಗಿ ಅದು ಕೊಳಕು, ಎಣ್ಣೆ ಇತರ ಸೂಕ್ಷ್ಮವಸ್ತುಗಳನ್ನು ಮುಖದ ಚರ್ಮವು ಸಂಗ್ರಹಿಸುತ್ತೆ.

ಇದನ್ನು ತೊಳೆಯದಿದ್ದರೆ ಕಿರಿಕಿರಿ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರತಿದಿನ ಇಂತಿಷ್ಟು ಬಾರಿ ಮುಖ ತೊಳೆಯದೇ ಹೋದ್ರೆ ಚರ್ಮ ಕೊಳಕು, ಡ್ರೈ ಮತ್ತು ಜಿಡ್ಡಿನಿಂದಾಗಿ ಕಾಂತಿಕಳೆದುಕೊಂಡಂತೆ ಕಾಣಿಸಬಹುದು.ಹಾಗಾಗಿ ಇದನ್ನೆಲ್ಲಾ ನಿವಾರಿಸೋಕೆ ಪ್ರತಿನಿತ್ಯ ಎರಡು ಬಾರಿಯಾದರೂ ಮುಖ ತೊಳೆದುಕೊಳ್ಳಲೇಬೇಕು.

ದಿನಕ್ಕೆಷ್ಟು ಬಾರಿ ಮುಖ ತೊಳೆಯಬೇಕು..?
ಸಾಮಾನ್ಯವಾಗಿ ಸೆನ್ಸಿಟಿವ್‌ ಸ್ಕಿನ್‌ ಹೊಂದಿರುವವರು ದಿನಕ್ಕೆರಡು ಬಾರಿ ತೊಳೆಯಬಹುದೆಂದು ಕೆಲವರು ಸಲಹೆ ನೀಡುತ್ತಾರೆ. ಆದರೆ ಇನ್ನೂ ಕೆಲವು ಚರ್ಮರೋಗ ತಜ್ಞರುಗಳು ದಿನಕ್ಕೊಮ್ಮೆ ಮುಖ ತೊಳೆಯಲು ಹೇಳಬಹುದು. ಅದು ಕೂಡಾ ನಿಮ್ಮ ಚರ್ಮದ ಪ್ರಕಾರವನ್ನು ಅವಲಂಬಿಸಿರುತ್ತೆ.

ಡ್ರೈ ಸ್ಕಿನ್‌ ಇರುವವರು ದಿನದಲ್ಲಿ ಎಷ್ಟು ಬಾರಿ ಮುಖ ತೊಳೆಯಬೇಕು..?
ನೀವು ಶುಷ್ಕ ಅಥವಾ ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ಕೊಳೆಯನ್ನು ತೆಗೆದುಹಾಕಲು ನೀವು ರಾತ್ರಿಯಲ್ಲಿ ಸ್ವಚ್ಛಗೊಳಿಸಬಹುದು. ಜೊತೆಗೆ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ನೀವು ರೋಸೇಸಿಯಾ ಅಥವಾ ಎಕ್ಜಿಮಾ ಹೊಂದಿದ್ದರೆ, ಕಿರಿಕಿರಿಯನ್ನು ಕಡಿಮೆ ಮಾಡಲು ನೀವು ರಾತ್ರಿಯಲ್ಲಿ ಒಮ್ಮೆ , ದಿನಕ್ಕೆ ಒಮ್ಮೆ ಮುಖ ತೊಳೆಯಲು ಆಯ್ಕೆ ಮಾಡಬಹುದು. ನೀವು ಜಿಮ್‌ಗೆ, ಯೋಗ ಅಥವಾ ಹೊರಗೆ ಓಡಾಡಿ ಬಂದರೆ ಮತ್ತು ಹೆಚ್ಚು ಬೆವರುತ್ತಿದ್ದರೆ, ನೀವು ನಿಮ್ಮ ಮುಖವನ್ನು ತೊಳೆಯಬೇಕು.

ಮುಖವನ್ನು ಸರಿಯಾಗಿ ತೊಳೆಯುವ ವಿಧಾನ ಹೀಗೆ
ಮುಖವನ್ನು ತೊಳೆಯುವುದಾದರೆ ನಿಮ್ಮ ಚರ್ಮದ ಪ್ರಕಾರ, ಮೇಕ್‌ಅಪ್‌ ಮತ್ತು ದೈನಂದಿನ ನಿಮ್ಮ ಚಟುವಟಿಕೆಗಳನ್ನು ಆಧರಿಸಿ ನೀವು ಮುಖ ತೊಳೆಯುವ ವಿಧಾನವನ್ನು ಅನುಸರಿಸಬೇಕು. ಉದಾಹರಣೆಗೆ ನೀವು ಮೇಕ್‌ಅಪ್‌ ಧರಿಸಿದ್ದರೆ, ಮುಖ ತೊಳೆಯುವ ಮೊದಲು ಲಿಪ್‌ಸ್ಟಿಕ್‌ ಮತ್ತು ಕಣ್ಣಿನ ಮೇಕ್‌ಅಪ್‌ ಅನ್ನು ಮೇಕ್‌ ಅಪ್‌ ರಿಮೂವರ್‌ನಿಂದ ಮೊದಲು ತೊಳೆಯಬೇಕು. ಅಂದರೆ ಸಾಮಾನ್ಯವಾಗಿ ತೊಳೆದರೂ ಬೇಗನೆ ಹೋಗದ ಮೇಕ್‌ಅಪ್‌ಗಳನ್ನು ಮೇಕ್‌ಅಪ್‌ ರಿಮೂವರ್‌ನಿಂದ ಮೊದಲು ತೆಗೆಯಬೇಕು.ತದನಂತರವೇ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ.

* ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ಒದ್ದೆಮಾಡಿ. ಯಾವುದಾದರೂ ಮೈಲ್ಡ್‌ ಫೇಸ್‌ ಕ್ಲೆನ್ಸರ್‌ ಅನ್ನು ನಿಮ್ಮ ಬೆರಳುಗಳಿಂದ ವೃತ್ತಾಕಾರವಾಗಿ ನಿಮ್ಮ ಹಣೆ ಮತ್ತು ಕೆನ್ನೆಯ ಭಾಗಕ್ಕೆ ಹಚ್ಚಿ.
* ಸಾಧ್ಯವಾದಷ್ಟು 30ಸೆಕೆಂಡುಗಳ ಕಾಲ ನಿಮ್ಮ ಮುಖವನ್ನು ತೊಳೆಯಿರಿ
* ನಂತರ ಸ್ವಚ್ಛವಾದ ಟವಲ್‌ನಿಂದ ಮುಖವನ್ನು ಒರೆಸಿ.

ಮುಖ ತೊಳೆಯುವಾಗ ಈ ಸಂಗತಿಗಳನ್ನು ನೆನಪಿಡಿ
* ಹೆಚ್ಚಿನವರು ಮುಖ ತೊಳೆಯಲೂ ಮೈಗೆ ಬಳಸುವ ಸೋಪ್‌ ಅನ್ನೇ ಬಳಸುತ್ತಾರೆ. ಇದು ನಿಮ್ಮ ಮುಖದ ತೇವಾಂಶವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಇದು ತುರಿಕೆ ಮತ್ತು ಚರ್ಮದ ಕಿರಿಕಿರಿಗೂ ಕಾರಣವಾಗಬಹುದು.
* ಸಾಧ್ಯವಾದರೆ ಮುಖಕ್ಕೆಂದೇ ತಯಾರಿಸಲಾದ ಕ್ಲೆನ್ಸರ್‌ ಬಳಸಿ.
* ನೀವು ಡ್ರೈ ಅಥವಾ ಸೂಕ್ಷ್ಮ ಚರ್ಮ ಹೊಂದಿದ್ದರೆ ಮೃದುವಾದ ಅಥವಾ ಕೆನಯುಕ್ತ ಕ್ಲೆನ್ಸರ್‌ ಬಳಸಿ.
* ನಿಮ್ಮ ಚರ್ಮವು ಮಂದವಾಗಿದ್ದರೆ ಆಲ್ಫಾ ಹೈಡ್ರಾಕ್ಸಿ ಆಸಿಡ್ ಅಥವಾ ಗ್ಲೈಕೋಲಿಕ್-ಆಧಾರಿತ ಕ್ಲೆನ್ಸರ್ ಬಳಸಿ. ಇದು ಚರ್ಮದ ಮೇಲ್ಮೈನ ಸತ್ತಜೀವಕೋಶಗಳನ್ನು ನಿವಾರಿಸಿ, ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
* ನೀವು ಪ್ರಯಾಣಿಸುತ್ತಿದ್ದರೆ ಅಥವಾ ಮುಖ ತೊಳೆಯಲು ವ್ಯವಸ್ಥೆಗಳು ಇಲ್ಲದಿದ್ದಲ್ಲಿ ವೆಟ್‌ ಟವಲ್‌ ಬಳಸಿ. ಆದರೆ ಸುಗಂಧ ಮುಕ್ತ ವೆಟ್‌ ಟವಲ್‌ ಬಳಸಿ.

ದಿನಕ್ಕೆರಡು ಬಾರಿ ಮುಖ ತೊಳೆಯದಿದ್ರೆ ಏನಾಗುತ್ತೆ..?
ನೀವು ಮುಖದಲ್ಲಿ ಮೊಡವೆಗಳನ್ನು ಹೊಂದಿದ್ದರೆ ಮತ್ತು ನಿಮ್ಮ ಮುಖವನ್ನು ನಿಯಮಿತವಾಗಿ ತೊಳೆಯದಿದ್ದರೆ, ನಿಮ್ಮ ಬ್ರೇಕ್ಔಟ್ಗಳು ಆಗಾಗ್ಗೆ ಆಗಬಹುದು ಅಥವಾ ಇನ್ನೂ ಕೆಟ್ಟದಾಗಬಹುದು. ದಿನಕ್ಕೆ ಎರಡು ಬಾರಿ ನಿಮ್ಮ ಚರ್ಮವನ್ನು ತೊಳೆಯುವುದು ಮೊಡವೆಯುಕ್ತ ಚರ್ಮವನ್ನು ಹೊಂದಿರುವವರಿಗೆ ವಿಶೇಷವಾಗಿ ಮುಖ್ಯವಾಗಿದೆ, ಏಕೆಂದರೆ ಮುಖದ ಶುದ್ಧೀಕರಣವು ಚರ್ಮ ಮತ್ತು ರಂಧ್ರಗಳಿಂದ ಕೊಳೆತವನ್ನು ತೆಗೆದುಹಾಕುತ್ತದೆ.

ನೀವು ದಿನಕ್ಕೆ ಎರಡು ಬಾರಿ ಹೆಚ್ಚು ನಿಮ್ಮ ಮುಖವನ್ನು ತೊಳೆದರೆ, ನಿಮ್ಮ ಚರ್ಮದಲ್ಲಿನ ನೈಸರ್ಗಿಕ ತೈಲಗಳನ್ನು ನೀವು ತೆಗೆದುಹಾಕುತ್ತೀರಿ ಮತ್ತು ಪರಿಣಾಮವಾಗಿ ಮುಖದ ಚರ್ಮವು ಇನ್ನಷ್ಟು ಎಣ್ಣೆಯುಕ್ತವಾಗಬಹುದು.ನೀವು ಮೇಕ್ಅಪ್ ಧರಿಸದಿದ್ದರೂ ಅಥವಾ ನಿಮ್ಮ ಮನೆಯಿಂದ ಹೊರಹೋಗದಿದ್ದರೂ ಸಹ, ನೀವು ಪ್ರತಿದಿನ ಮುಖ ತೊಳೆಯದೆ ಮಲಗಬಾರದು. ಎಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತೀರೋ ಅಷ್ಟೇ ಆರೋಗ್ಯವಂತರಾಗಿರುತ್ತೀರಿ ಎನ್ನುವುದನ್ನೂ ಮರೆಯಬೇಡಿ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries