ನವದೆಹಲಿ: ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳನ್ನು ಕೈಗೊಂಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಡ್ರೋನ್ ಮೂಲಕ ರಕ್ತ ರವಾನೆ ಮಾಡುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ.
0
samarasasudhi
ಮೇ 11, 2023
ನವದೆಹಲಿ: ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳನ್ನು ಕೈಗೊಂಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಡ್ರೋನ್ ಮೂಲಕ ರಕ್ತ ರವಾನೆ ಮಾಡುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ.
ಗುರುವಾರ 'ಐ-ಡ್ರೋನ್' ಮೂಲಕ ರಕ್ತ ರವಾನೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.
'10 ಯುನಿಟ್ ರಕ್ತದ ಮಾದರಿಯನ್ನು ಹೊತ್ತ ಐ-ಡ್ರೋನ್ ನೋಯ್ಡಾದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ನವದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ರಕ್ತವನ್ನು ರವಾನಿಸಿದೆ. ಡ್ರೋನ್ ಮೂಲಕ ರಕ್ತ ರವಾನೆ ಮಾಡಿರುವ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಸಂತಸವಾಗಿದೆ. ರಕ್ತವನ್ನು ಕಡಿಮೆ ತಾಪಮಾನದಲ್ಲೇ ನಿರ್ದಿಷ್ಟ ಸ್ಥಳಕ್ಕೆ ರವಾನಿಸುವುದು ಸಾಧ್ಯವಾಗಿದೆ. ಆಂಬುಲೆನ್ಸ್ ಮೂಲಕವೂ ಅದೇ ಸ್ಥಳಕ್ಕೆ ರಕ್ತ ರವಾನಿಸಲಾಗುತ್ತದೆ. ಡ್ರೋನ್ ಮೂಲಕ ರವಾನೆಯಾದ ರಕ್ತದ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಸಾಬೀತಾದರೆ ದೇಶದಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು' ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ.ರಾಜೀವ್ ಬಾಹ್ಲ್ ತಿಳಿಸಿದರು.
ಹಲವಾರು ದೇಶಗಳಲ್ಲಿ ಈಗಾಗಲೇ ಡ್ರೋನ್ ಮೂಲಕ ರಕ್ತ ರವಾನಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ.