HEALTH TIPS

ಮಂಜೇಶ್ವರ ಸೇ.ಸ.ಬ್ಯಾಂಕಿಗೆ ಪಿ.ಎ.ಸಿ.ಎಸ್ ಎಕ್ಸ್ ಲೆನ್ಸ್ ಪುರಸ್ಕಾರ

           ಮಂಜೇಶ್ವರ: 2021-2022 ನೇ ವರ್ಷದ ಉತ್ತಮ ಕಾರ್ಯವಿಧಾನ  ಸಾಧನೆಗಾಗಿ ರಾಜ್ಯದ ಸಹಕಾರಿ ಸರ್ವಿಸ್ ಸಂಘಗಳಿಗೆ ಕೇರಳ ಬ್ಯಾಂಕ್ ಏರ್ಪಡಿಸಿದ ಪಿ.ಎ.ಸಿ.ಎಸ್ ಎಕ್ಸ್ ಲೆನ್ಸ್ ಎಂಬ ಪುರಸ್ಕಾರಕ್ಕೆ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿಗೆ ಪ್ರಶಸ್ತಿ ಫಲಕ ಹಾಗೂ ರೂ. ಇಪ್ಪತೈದು ಸಾವಿರದ ನಗದು ಬಹುಮಾನವನ್ನು ಇತ್ತೀಚೆಗೆ ತಿರುವನಂತಪುರದಲ್ಲಿ ಜರಗಿದ ಸಮಾರಂಭದಲ್ಲಿ ಸಹಕಾರಿ ಸಚಿವ ವಿ.ಎನ್ ವಾಸವನ್ ಬ್ಯಾಂಕ್ ಅಧಿಕೃತರಿಗೆ ಹಸ್ತಾಂತರಿಸಿದರು.

         1940 ರಲ್ಲಿ ಪುಟ್ಟ ಸೊಸೈಟಿ ಬ್ಯಾಂಕ್ ಆಗಿ ಪ್ರವರ್ತನೆ ಆರಂಭಿಸಿ. ಆ ಬಳಿಕ ಸರ್ವೀಸ್ ಕೋ-ಓಪರೇಟಿವ್ ಬ್ಯಾಂಕ್ ಆಗುವುದರೊಂದಿಗೆ  ಹಂತ ಹಂತವಾಗಿ ಬಡ್ತಿ ಹೊಂದಿ ಜಿಲ್ಲೆಯಲ್ಲೇ 1 ಕ್ಲಾಸ್ ಒನ್ ಸೂಪರ್ ಗ್ರೇಟ್ ಬ್ಯಾಂಕ್ ಗಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಬ್ಯಾಂಕ್ ಮಂಜೇಶ್ವರ ಸರ್ವೀಸ್ ಕೋ- ಓಪರೇಟಿವ್ ಬ್ಯಾಂಕ್ ಹೆಸರುಪಡೆದಿದೆ.

          ಸಾರ್ವಜನಿಕ ವಲಯದಲ್ಲಿ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಂದ ಪೈಪೆÇೀಟಿಯನ್ನು ಎದುರಿಸಿಯೂ ಬ್ಯಾಂಕ್ ಈ ಮುನ್ನಡೆಯನ್ನು ಸಾಧಿಸಿದೆ. ಬ್ಯಾಂಕ್ ಷೇರುದಾರರಿಗೆ 11.50 ಶೇಕಡಾ ಡಿವಿಡೆಂಟ್ ನೀಡುತ್ತಿದೆ.ಹೊಸಂಗಡಿಯಲ್ಲಿ ಮಿತವಾದ ದರದಲ್ಲಿ ಮದ್ದುಗಳ ಮಾರಾಟಕ್ಕೆ ನೀತಿ ಮೆಡಿಕಲ್ ಸ್ಟೋರನ್ನು ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರ ವಿತರಣೆಗೆ ಜವಾಬ್ದಾರಿ ನೀಡಿದ ಸಾಮಾಜಿಕ ಕ್ಷೇಮ ಪಿಂಚಣಿ ಅತ್ಯಂತ ವೇಗವಾಗಿ ಪಿಂಚಣಿದಾರರ ಕೈಗೆ ತಲುಪಿಸುತ್ತಿರುವ ಕೆಲಸವನ್ನು ಬ್ಯಾಂಕ್ ನಿರ್ವಹಿಸುತ್ತಿದೆ. 

         ವಿವಿಧ ಹಬ್ಬ ಹರಿದಿನ ಕಾಲಗಳಲ್ಲಿ  ಸಬ್ಸಿಡಿ ದರದಲ್ಲಿ  ಅಗತ್ಯ ವಸ್ತುಗಳನ್ನು ಸಂತೆಗಳನ್ನು  ಏರ್ಪಡಿಸಿ ವಿತರಣೆ ಮಾಡುತ್ತಿದೆ. ಕೇರಳ ಸಹಕಾರಿ ಇಲಾಖೆ ಜಾರಿಗೊಳಿಸಿದ ರಿಸ್ಕ್ ಫಂಡ್( ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸುತ್ತಾ ಬಂದು ಆಕಸ್ಮಿಕ ಮರಣ ಹೊಂದುವ ಸಾಲಗಾರನ ಸಾಲಕ್ಕೆ ದೊಡ್ಡ ಮೊತ್ತವನ್ನು ನೀಡಿ ಸಾಲದ ಹೊರೆಯನ್ನು ಕಡಿಮೆಗೊಳಿಸುವ ಯೋಜನೆ) ಬ್ಯಾಂಕ್ ಯಶಸ್ವಿಯಾಗಿ ನಡೆಸುತ್ತಿದೆ.

           ಶಾಲಾರಂಭದ ಸಂದರ್ಭ ಪ್ರತಿವರ್ಷ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯೋಪಕರಣಗಳನ್ನು ವಿತರಿಸುತ್ತಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕ್ ಸದಸ್ಯರಿಗೆ ಇನ್ನಷ್ಟು ಸೌಕರ್ಯಗಳನ್ನು, ಅನುಕೂಲತೆಯನ್ನು ನೀಡಲು ಶ್ರಮಿಸುವುದಾಗಿ ಬ್ಯಾಂಕ್ ಅಧ್ಯಕ್ಷ ಬಿ ವಿ ರಾಜನ್ ತಿಳಿಸಿದ್ದಾರೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries