HEALTH TIPS

ನಾರಿ ಚಿನ್ನಾರಿಯಿಂದ ಸುಪ್ತ ಪ್ರತಿಭೆ ಬೆಳಕಿಗೆ : ವಿದುಷಿ ಉಷಾ ಈಶ್ವರ ಭಟ್

           ಬದಿಯಡ್ಕ: ಸಾಮಾಜಿಕ - ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿಯ ನಾರಿ ಚಿನ್ನಾರಿ ಸಂಸ್ಥೆ ವೇದಿಕೆಯನ್ನು ಕಲ್ಪಿಸುವ ಮೂಲಕ ಮಕ್ಕಳು ಮತ್ತು ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಬೆಳಕಿಗೆ ತರಲು ಸಹಕಾರಿಯಾಗಿದೆ. ನಾರಿಚಿನ್ನಾರಿ ಕಲೆ, ಸಾಹಿತ್ಯ, ಸಂಸ್ಕøತಿಗೆ ಪೂರಕವಾಗಿ ಕೆಲಸ ಮಾಡುತಿರುವುದು ಅಭಿನಂದನಾರ್ಹ ಎಂದು ಖ್ಯಾತ ಸಂಗೀತ ವಿದುಷಿ ಉಷಾ ಈಶ್ವರ ಭಟ್ ಹೇಳಿದರು. 

            ಸಾಮಾಜಿಕ - ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿ ಆಯೋಜಿಸಿದ ವೈಶಾಖ ಲಹರಿ ಕಾರ್ಯಕ್ರಮವನ್ನು ಎಡನೀರು ಮಠದ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.  

             ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ನಾರಿ ಚಿನ್ನಾರಿ ಗೌರವಾಧ್ಯಕ್ಷೆ ಖ್ಯಾತ ಲೆಕ್ಕ ಪರಿಶೋಧಕಿ ತಾರಾ ಜಗದೀಶ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಶಾಸ್ತೀಯ ನೃತ್ಯ ಕಲಾವಿದೆ, ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಭಾಗವಹಿದರು. ನಾರಿ ಚಿನ್ನಾರಿ ಅಧ್ಯಕ್ಷೆ ಸವಿತಾ ಟೀಚರ್ ಗೌರವ ಉಪಸ್ಥಿತರಿದ್ದರು. ಸಮಾಜ ಸೇವಕಿ ಶಾಂತ ಟೀಚರ್ ಶುಭಾಶಂಸನೆಗೈದರು.

          ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ವಿದುಷಿ ರಾಧಾ ಮುರಳೀಧರ್ ಅವರನ್ನು ಗೌರವಿಸಲಾಯಿತು. ಶ್ರದ್ಧಾ ಹೊಳ್ಳ ಮುಳಿಯಾರು ಅವರ ಮಾತು-ಮೌನ ಹನಿಗವನ ಸಂಕಲನ ಬಿಡುಗಡೆಗೊಳಿಸಲಾಯಿತು.  

             ಕಾರ್ಯಕ್ರಮದಲ್ಲಿ ಪ್ರಸನ್ನ ಲಕ್ಷ್ಮಿ ಕೂಡ್ಲು(ಸಂಸ್ಕøತ ಸುಭಾಷಿತ ಅರ್ಥ ಕಥನ), ಅದಿತಿ ಲಕ್ಷ್ಮಿ(ಭರತನಾಟ್ಯ), ನೇಹಾ ರಮೇಶ್(ಮೋಹಿನಿಯಾಟ್ಟಂ), ಪ್ರಣತಿ ಎನ್(ಹರಿಕಥೆ), ಅಸಾವರಿ(ಶಾಸ್ತ್ರೀಯ ನೃತ್ಯ), ವೈಷ್ಣವಿ ಎಡನೀರು(ಕಾವ್ಯಾಲಾಪನೆ), ಹಿಮಜಾ(ಜಾನಪದ ನೃತ್ಯ), ಸಹನಾ ಎಡನೀರು(ಭಾವಗೀತೆ), ವನಜಾಕ್ಷಿ ಚಂಬ್ರಕಾನ(ತುಳು ಕವನ ವಾಚನ), ಪ್ರಭಾವತಿ ಕೆದಿಲಾಯ(ಏಕ ಪಾತ್ರಾಭಿನಯ) ಮೊದಲಾದವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.  

         ಪೂಜಾ ಕೆ. ಪ್ರಾರ್ಥನೆ ಹಾಡಿದರು. ಸ್ನೇಹಲತಾ ದಿವಾಕರ್ ಸ್ವಾಗತಿಸಿ, ದಿವ್ಯ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮೀ ಶ್ಯಾನುಭೋಗ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries