HEALTH TIPS

ದೆಹಲಿಯಲ್ಲಿ ಬೀದಿ ಕಾಮಣ್ಣರ ಕಾಟ; ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ: ಓರ್ವನ ಬಂಧನ

               ನವದೆಹಲಿ: ದೆಹಲಿಯಲ್ಲಿ ಬೀದಿ ಕಾಮಣ್ಣರ ಅಟ್ಟಹಾಸಕ್ಕೆ ಖ್ಯಾತ ಕ್ರಿಕೆಟಿಗರ ಪತ್ನಿ ಕೂಡ ತೊಂದರೆಗೆ ಒಳಗಾಗಿದ್ದು, ಕೆಕೆಆರ್ (KKR) ತಂಡದ ಕ್ರಿಕೆಟಿಗ ನಿತೀಶ್ ರಾಣಾ (Nitish Rana)ಅವರ ಪತ್ನಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.


                 ನಿತೀಶ್ ರಾಣಾ ಅವರ ಪತ್ನಿ ಸಾಚಿ ಮಾರ್ವಾ (Saachi Marwah) ಅವರು ದೆಹಲಿಯ ಕೀರ್ತಿ ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯಲು ಪ್ರಾರಂಭಿಸಿದ್ದಾರೆ. ಕೃತ್ಯವನ್ನು ಮುರ್ವಾ ಅವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

               ಅಲ್ಲದೆ ಈ ವಿಚಾರವಾಗಿ ಸಾಚಿ ಮಾರ್ವಾ ಸ್ಥಳೀಯ ಪೊಲೀಸರಿಗೆ ಮಾಹಿಚಿ ನೀಡಿದ್ದು, 'ನಾನು ಪೊಲೀಸರಿಗೆ ಫೋನ್ನಲ್ಲಿ ಮಾಹಿತಿ ನೀಡಿದಾಗ, ಸುರಕ್ಷಿತವಾಗಿ ಮನೆ ತಲುಪಿದ್ದೀರಾ?
                ಹೋಗಲಿ ಬಿಡಿ, ಮುಂದಿನ ಬಾರಿ ಇದೇ ರೀತಿ ನಡೆದರೆ ನಂಬರ್ ನೋಟ್ ಮಾಡಿಕೊಳ್ಳುವಂತೆ ಹೇಳಿದರು. ಅದಕ್ಕೆ ಪ್ರತಿಯಾಗಿ ಮಾರ್ವಾ ಅವರು ಮುಂದಿನ ಬಾರಿ ಅವರ ಫೋನ್ ನಂಬರ್ಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಆಕ್ರೋಶದಿಂದ ಬರೆದುಕೊಂಡಿದ್ದಾರೆ.
                        ಮಾರ್ವಾ ಅವರು ಆರ್ಕಿಟೆಕ್ಚರಲ್ ಡಿಸೈನರ್ ಆಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಕ್ರಿಕೆಟಿಗ ನಿತೀಶ್ ರಾಣಾ ಅವರ ಪತ್ನಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries