ಕಾಸರಗೋಡು: ಹದಿಹರೆಯದ ಇಬ್ಬರು ಮಕ್ಕಳನ್ನು ತ್ಯಜಿಸಿ, ಪರ ಪುರುಷನೊಂದಿಗೆ ಪರಾರಿಯಾದ ಮಹಿಳೆ ಹಾಗೂ ಈಕೆ ಪ್ರಿಯತಮನನ್ನು ಚಂದೇರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಚಿಕ್ಕಾಡ್ ಕೊಡಕ್ಕಾಡ್ ನಿವಾಸಿ ಶಾಲಿನಿ(33)ಹಾಗೂ ಈಕೆ ಪ್ರಿಯತಮ ಕೋಯಿಕ್ಕೋಡಿಮ ಬೇಪೂರ್ ಬಂದರು ಸನಿಹದ ನಿವಾಸಿ ಪಿ.ಟಿ ಅನೂಪ್(33)ಬಂಧಿತರು.
ಶಾಲಿನಿ ತನ್ನ 10ಹಾಗೂ 13ರ ಹರೆಯದ ಇಬ್ಬರು ಮಕ್ಕಳನ್ನು ಮನೆಯಲ್ಲಿ ಉಪೇಕ್ಷಿಸಿ ಪತಿಯ ಸ್ನೇಹಿತನಾದ ಅನೂಪ್ ಜತೆ ಪರಾರಿಯಾಗಿದ್ದಳು. ಮನೆಯವರು ನೀಡಿದ ದೂರಿನನ್ವಯ ಪೊಲೀಸರು ನಾಪತ್ತೆ ಪ್ರಕರಣ ದೂರು ದಾಖಲಿಸಿ ಹುಡುಕಾಟ ನಡೆಸುವ ಮಧ್ಯೆ ಇವರಿಬ್ಬರನ್ನೂ ಚೆರ್ವತ್ತೂರಿನ ಮಡಕ್ಕರದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಯಾಪೂರ್ತಿಯಾಗದ ಇಬ್ಬರು ಮಕ್ಕಳನ್ನು ಬಿಟ್ಟು, ಪ್ರಿಯತಮನ ಜತೆ ಪರಾರಿಯಾಗಿರುವ ಬಗ್ಗೆ ಬಾಲಹಕ್ಕು ಕಾನೂನು ಪ್ರಕಾರ ಶಾಲಿನಿ ಹಾಗೂ ಅನೂಪ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಬಂಧಿತರನ್ನು ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

