HEALTH TIPS

ಎಂಡೋಸಲ್ಫಾನ್ ಪೀಡಿತ ಪಂಚಾಯಿತಿಗಳಲ್ಲಿ ಬಡ್ಸ್ ಶಾಲೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು: ಸಚಿವೆ ಡಾ.ಆರ್.ಬಿಂದು

         ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಪಂಚಾಯಿತಿಗಳಲ್ಲಿ ಬಡ್ಸ್ ಶಾಲೆಗಳ ಕಾರ್ಯನಿರ್ವಹಣೆಯನ್ನು ಚುರುಕುಗೊಳಿಸಬೇಕು ಮತ್ತು ದೈನಂದಿನ ಚಟುವಟಿಕೆಗಳನ್ನು ನಡೆಸಬೇಕು ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವ ಡಾ.ಆರ್.ಬಿಂದು ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಿರ್ಧರಿಸಿತು. ಗ್ರಾಮ ಪಂಚಾಯಿತಿಗಳ ನಿಯಂತ್ರಣದಲ್ಲಿ ಈ ವಿಶೇಷ ಶಾಲೆಗಳಿರಬೇಕು. ಬಡ್ಸ್ ಶಾಲೆಗಳು ಜೂನ್ 1 ರಿಂದ ಎಲ್ಲಾ ಮೂಲ ಸೌಕರ್ಯಗಳೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕು. ಬದಿಯಡ್ಕ, ಎಣ್ಮಕಜೆ, ಪನತ್ತಡಿ ಮತ್ತು ಕಳ್ಳಾರ್ ಪಂಚಾಯತಿ ವ್ಯಾಪ್ತಿಯ ಬಡ್ಸ್ ಶಾಲೆಗಳನ್ನು ಕೇರಳ ಸಾಮಾಜಿಕ ಭದ್ರತಾ ಮಿಷನ್ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಸಚಿವರು ತಿಳಿಸಿದರು. ಪ್ರಸ್ತುತ, ಸಾಮಾಜಿಕ ಭದ್ರತಾ ಮಿಷನ್‍ನಿಂದ ಸ್ವಾಧೀನಪಡಿಸಿಕೊಂಡಿರುವ ಮಾದರಿ ಮಕ್ಕಳ ಪುನರ್ವಸತಿ ಕೇಂದ್ರಗಳಾಗಿರುವ ಬಡ್ಸ್ ಶಾಲೆಗಳ ನೌಕರರ ವೇತನವನ್ನು ಕ್ರೋಢೀಕರಿಸಲಾಗುತ್ತದೆ. ನೌಕರರ ತಾತ್ಕಾಲಿಕ ನೇಮಕಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಸಿಬ್ಬಂದಿ, ಚಿಕಿತ್ಸಕರು ಮತ್ತು ಸಲಕರಣೆಗಳನ್ನು ಸಾಮಾಜಿಕ ಭದ್ರತಾ ಮಿಷನ್ ಸಿದ್ಧಪಡಿಸುತ್ತದೆ. ಬಡ್ಸ್ ಶಾಲೆಗಳ ದೈನಂದಿನ ಚಟುವಟಿಕೆಗಳಿಗೆ ಬೇಕಾಗುವ ಇತರೆ ವೆಚ್ಚಗಳನ್ನು ತ್ರಿಸ್ಥರ ಹಂತ ಪಂಚಾಯತಿಗಳು ಜಂಟಿ ಯೋಜನೆ ಸಿದ್ಧಪಡಿಸಿ ಭರಿಸಬೇಕು ಹಾಗೂ ಎಲ್ಲಾ ಬಡ್ಸ್ ಶಾಲೆಗಳಿಗೆ ಕುಟುಂಬಶ್ರೀ ಮೂಲಕ ವಾಹನಗಳನ್ನು ಒದಗಿಸುವಂತೆ ಸೂಚಿಸಲಾಯಿತು. ಮೇ 23ರಂದು ಮಧ್ಯಾಹ್ನ 2 ಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳ ಅಧ್ಯಕ್ಷರು ಹಾಗೂ ಬ್ಲಾಕ್ ಪಂಚಾಯಿತಿ ಅಧ್ಯಕ್ಷರ ಸಭೆ ನಡೆಯಲಿದೆ. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಭಾಗವಹಿಸಲಿದ್ದಾರೆ. 

          ಜಿಲ್ಲಾಧಿಕಾರಿ ಕಚೇರಿ ಮಿನಿ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶಾಸಕರಾದ ಇ.ಚಂದ್ರಶೇಖರನ್, ಸಿ.ಎಚ್.ಕುಂಞಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಕೆ.ನಾರಾಯಣನ್, ಕೆ.ಪಿ.ವತ್ಸಲನ್, ಎಂ.ಕುಮಾರನ್, ಎಂ.ಶ್ರೀಧರ, ಪಿ.ವಿ.ಮಿನಿ, ಪ್ರಸನ್ನಪ್ರಸಾದ್, ಸಿ.ಕೆ.ಅರವಿಂದಾಕ್ಷನ್, ಜೆ.ಎಸ್.ಸೋಮಶೇಖರ, ಹಮೀದ್ ಪೊಸೋಳಿಗೆ, ಕೆ.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಕೆ.ಇಂಬಶೇಖರ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್, ಎಡಿಎಂ ಕೆ.ನವೀನ್ ಬಾಬು, ಸಾಮಾಜಿಕ ನ್ಯಾಯ ಇಲಾಖೆ ನಿರ್ದೇಶಕ ಚೇತನ್ ಕುಮಾರ್ ಮೀನಾ, ಕೇರಳ ಸಾಮಾಜಿಕ ಭದ್ರತಾ ಮಿಷನ್ ಕಾರ್ಯನಿರ್ವಾಹಕ ನಿರ್ದೇಶಕ ಎ.ಶಿಬು,  ಸಾಮಾಜಿಕ ಭದ್ರತಾ ಮಿಷನ್ ರಾಜ್ಯ ಕಾರ್ಯಕ್ರಮ ಸಂಯೋಜಕ ನಸೀಮ್ ಮೆಡೈಲ್, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಶೀಬಾ ಮುಮ್ತಾಜ್, ಎಂಡೋಸಲ್ಫಾನ್ ನೋಡಲ್ ಅಧಿಕಾರಿ ಡಾ.ಪ್ರಸಾದ್ ಥಾಮಸ್ ಮತ್ತಿತರರು ಭಾಗವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries