ತಿರುವನಂತಪುರಂ: ಯುವ ಮಹಿಳಾ ವೈದ್ಯೆಯೊಬ್ಬರ ಸಾವಿಗೆ ರಾಜ್ಯಾದ್ಯಂತ ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಐಎಂಎ ಮತ್ತು ಕೆಜಿಎಂಒಎ ಕರೆ ನೀಡಿರುವ ಮುಷ್ಕರÀ 24 ಗಂಟೆಗಳ ಕಾಲ ನಡೆಯಲಿದೆ.
ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ನೇತೃತ್ವದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ತುರ್ತು ಸೇವೆ ಹೊರತುಪಡಿಸಿ ಎಲ್ಲ ಸೇವೆಗಳನ್ನು ಬಹಿಷ್ಕರಿಸಿ ಮುಷ್ಕರ ನಡೆಸಲು ವೈದ್ಯರು ನಿರ್ಧರಿಸಿದರು. ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಶವಾಗಾರದ ಮುಂದೆ ಧರಣಿ ಹಲವಾರು ಗಂಟೆಗಳ ಕಾಲ ನಡೆಯಿತು.
ಘಟನೆಯ ವಿರುದ್ಧ ಪಿಜಿ ವೈದ್ಯರು ಕೂಡ ಪ್ರತಿಭಟನೆಗೆ ಮುಂದಾಗಿದ್ದಾರೆ. ದಾಳಿಗಳನ್ನು ತಡೆಯುವ ಅನುಭವದ ಕೊರತೆ ಡಾ.ವಂದನಾ ಅವರದು ಎಂಬ ಆರೋಗ್ಯ ಸಚಿವರ ಮಾತು ಪ್ರತಿಭಟನೆಗೆ ಉತ್ತೇಜನ ನೀಡಿತು. ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣ ಸ್ತಬ್ಧಗೊಳಿಸುವ ಬೃಹತ್ ಪ್ರತಿಭಟನೆಗೆ ಮುಂದಾಗಲು ವೈದ್ಯರು ನಿರ್ಧರಿಸಿದ್ದಾರೆ.


