HEALTH TIPS

ಇನ್ನು ವನ್ಯಜೀವಿ ದಾಳಿಯ ಭಯ ಬೇಡ: ಆರ್.ಆರ್.ಟಿ. ಕಾರ್ಯಾಚರಣೆ ರಾಜ್ಯಾದ್ಯಂತ ವಿಸ್ತರಣೆ: ಟೋಲ್ ಫ್ರೀ ಸಂಖ್ಯೆ ನೆರವಿಗೆ

             ತಿರುವನಂತಪುರಂ: ವನ್ಯಜೀವಿಗಳ ದಾಳಿ ಅಥವಾ ತೊಂದರೆಗಳಾಗುವಲ್ಲಿ ಜನಸಾಮಾನ್ಯರು ತಕ್ಷಣವೇ ಸಂಪರ್ಕಿಸಲು ಟೋಲ್ ಫ್ರೀ ಸಂಖ್ಯೆಯನ್ನು ರಾಜ್ಯ ಅರಣ್ಯ ಇಲಾಖೆ ಸಿದ್ದಪಡಿಸಿದೆ.

          ಎರುಮೇಲಿ ಮತ್ತು ಕೊಲ್ಲಂನಲ್ಲಿ ಕಾಡೆಮ್ಮೆ ದಾಳಿಯಲ್ಲಿ ಮೂರು ಜೀವಗಳನ್ನು ಬಲಿಪಡೆದ ಘಟನೆ ಹಿನ್ನೆಲೆಯಲ್ಲಿ ಹೊಸ ನಿರ್ಧಾರ ಹೊರಬಿದ್ದಿದೆ. ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‍ಒಪಿ) ಸಿದ್ಧಪಡಿಸಲಾಗುವುದು ಎಂದು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದ್ದಾರೆ. ಮುಖ್ಯ ವನ್ಯಜೀವಿ ವಾರ್ಡನ್ ಮತ್ತು ವನ್ಯಜೀವಿ ವಾರ್ಡನ್ ನೇತೃತ್ವದಲ್ಲಿ ಮೂರು ದಿನಗಳಲ್ಲಿ ಎಸ್‍ಒಪಿ ಸಿದ್ಧಪಡಿಸಲಾಗುವುದು ಎಂದು ತಿಳಿಸಲಾಗಿದೆ. ಇದಲ್ಲದೆ 24 ಗಂಟೆಗಳ ಟೋಲ್ ಫ್ರೀ ಸಂಖ್ಯೆ: 18004254733 ಅಸ್ತಿತ್ವಕ್ಕೆ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.

       ವನ್ಯಜೀವಿ ದಾಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಜನರು ಯಾವುದೇ ಸಮಯದಲ್ಲಿ ಕರೆ ಮಾಡಬಹುದು. ಕೇರಳದಲ್ಲಿ ವನ್ಯಜೀವಿ ಸಂಘರ್ಷದ ಅಪಾಯವಿರುವ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಪಿಡ್ ರೆಸ್ಪಾನ್ಸ್ ಟೀಮ್ (ಆರ್‍ಆರ್‍ಟಿ) ನ್ನು ಇನ್ನು ಎರುಮೇಲಿ ಸೇರಿದಂತೆ ಹೆಚ್ಚಿನ ಹಾಟ್‍ಸ್ಪಾಟ್‍ಗಳಿಗೆ ವಿಸ್ತರಿಸಲಾಗುವುದು ಎಂದು ಅರಣ್ಯ ಇಲಾಖೆ ಸಚಿವರು ಹೇಳಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries