HEALTH TIPS

'ದೋಣಿಯನ್ನು ನೋಂದಾಯಿಸಲಾಗಿಲ್ಲ ಎಂದು ಹೇಳಲು ನೀನ್ಯಾರು’?: ಬೋಟ್ ಬಗ್ಗೆ ಎಚ್ಚರಿಕೆ ನೀಡಿದ ವ್ಯಕ್ತಿಯ ಮೇಲೆ ಹರಿದಾಯ್ದ ಸಚಿವರ ಬಗ್ಗೆ ಬಹಿರಂಗಪಡಿಸಿದ ಮಾಮೂಜಿನ್

                 ಮಲಪ್ಪುರಂ: ತಾನೂರಿನ ದೋಣಿ ಅಪಘಾತದ ನಂತರ ಸಚಿವ ಹಾಗೂ ಸ್ಥಳೀಯ ಶಾಸಕ ವಿ. ಅಬ್ದುರ್ ರಹಿಮಾನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

                 ಅಟ್ಲಾಂಟಿಕಾ ಬೋಟ್ ಬಗ್ಗೆ ದೂರು ನೀಡಿದವರನ್ನು ಸಚಿವ ಅಬ್ದುಲ್ ರಹಿಮಾನ್ ನಿಂದಿಸಿದ್ದಾರೆ ಎನ್ನಲಾಗಿದೆ. ತಾನೂರಿನ ಮೀನುಗಾರ ಹಾಗೂ ಆನಂದ್ ಎಂಬ ದೋಣಿ ನಿರ್ವಾಹಕ ಮಾಮೂಜಿನ್ ಸಚಿವರ ವಿರುದ್ಧ ಹರಿಹಾಯ್ದಿರುವರು. ತಾನೂರಿನಲ್ಲಿ ತೇಲುವ ಸೇತುವೆ ಉದ್ಘಾಟನೆಗೆ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಹಾಗೂ ಸಚಿವ ವಿ.ಅಬ್ದುಲ್ ರಹ್ಮಾನ್ ಈ ಹಿಂದೆ ಬಂದಿದ್ದಾಗ ‘ಅಟ್ಲಾಂಟಿಕ್’ ಬೋಟ್ ಕುರಿತು ದೂರು ನೀಡಿದ್ದರು.

              ‘ಅಟ್ಲಾಂಟಿಕಾ’ ಬೋಟ್ ಅಕ್ರಮ ಎಂದು ಅಂದು ಸಚಿವರಿಗೆ ತಿಳಿಸಲಾಗಿತ್ತು. ಬೋಟ್ ನೋಂದಣಿಯಾಗಿಲ್ಲ, ಪರವಾನಗಿ ಇಲ್ಲದ ಬೋಟ್ ಓಡಿಸುತ್ತಿರುವ ಬಗ್ಗೆ ತಿಳಿಸಿದಾಗ ಸಚಿವ ವಿ.ಅಬ್ದುರಹಿಮಾನ್ ಬೈದಿದ್ದು, ಸಚಿವ ಮುಹಮ್ಮದ್ ರಿಯಾಝ್ ತಪ್ಪಿಸಿಕೊಂಡಿದ್ದರು  ಎಂದು ಮುಹಾಜಿದ್ ಹೇಳಿರುವರು. ಬೋಟ್ ನೋಂದಣಿಯಾಗಿಲ್ಲ ಎಂದು ಖಚಿತಪಡಿಸಲು ಸಾಧ್ಯವೇ ಎಂದು ಸಚಿವ ವಿ.ಅಬ್ದುರಹಿಮಾನ್ ಅಡ್ಡಿಪಡಿಸಿದರು. ಸಚಿವ ಮುಹಮ್ಮದ್ ರಿಯಾಜ್ ಅವರಿಗೆ ದೂರು ನೀಡಿದಾಗ ಪಿ.ಎ.ಗೆ ದೂರು ನೀಡುವಂತೆ ತಿಳಿಸಿದ್ದು, ಪಿ.ಎ ದೂರು ಬರೆದಿದ್ದಾರೆ. ಆದರೆ ಮುಂದಿನ ಕ್ರಮ ಆಗಲಿಲ್ಲ. ಕಳೆದ ತಿಂಗಳು 23ರಂದು ತಾನೂರಿನಲ್ಲಿ ತೇಲುವ ಸೇತುವೆ ಉದ್ಘಾಟನೆಯಾಗಿತ್ತು.

             ಇದೇ ವೇಳೆ 22 ಮಂದಿಯನ್ನು ಬಲಿತೆಗೆದುಕೊಂಡಿರುವ ತಾನೂರ್ ದೋಣಿ ದುರಂತದಲ್ಲಿ ಬಂಧಿತನಾಗಿರುವ ಬೋಟ್ ಮಾಲೀಕ ನಾಸರ್ ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತನಿಖೆಯ ಭಾಗವಾಗಿ, ಪೆÇಲೀಸ್ ತಂಡವು ದೋಣಿಯನ್ನು ವಿವರವಾಗಿ ಪರಿಶೀಲಿಸಲಿದೆ. ಬೋಟ್ ಚಾಲಕ ಹಾಗೂ ಆತನ ಸಹಾಯಕನ ವಿರುದ್ಧ ತನಿಖೆ ಆರಂಭಿಸಲಾಗಿದೆ. ದುರಂತ ಸಂಭವಿಸಿದ ಪೂರಪುಳ ಅಳಿವೆಯಲ್ಲಿ ಇಂದು ಶೋಧ ಕಾರ್ಯ ಮುಂದುವರಿದಿದೆ.  ದೋಣಿಯಲ್ಲಿದ್ದವರ ನಿಖರ ಸಂಖ್ಯೆ ಲಭ್ಯವಾಗದ ಕಾರಣ ಶೋಧ ಕಾರ್ಯ ಮುಂದುವರಿದಿದೆ.

                    ಸುದೀರ್ಘ ಹುಡುಕಾಟದ ಬಳಿಕ ಬೋಟ್ ಮಾಲೀಕ ನಾಸರ್ ಸಿಕ್ಕಿಬಿದ್ದಿದ್ದಾನೆ. ನೆಡುಂಬಶ್ಶೇರಿ ಮೂಲಕ ನಾಸರ್ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ. ಪೆÇಲೀಸರು ತನ್ನನ್ನು ಹಿಂಬಾಲಿಸುತ್ತಿದ್ದಾರೆಂದು ಅರಿವಾದಾಗ ಅವರು ಕೋಝಿಕ್ಕೋಡ್‍ಗೆ ಮರಳಿದ. ಬಳಿಕ ಪೊಲೀಸರು ಬಂಧಿಸಿದ್ದಾರೆ. ಪೆÇಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

            ಕೊಚ್ಚಿಯಲ್ಲಿ ಆತನ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪೆÇಲೀಸರ ತಪಾಸಣೆ ವೇಳೆ ನಾಸರ್ ನ ವಾಹನ ಸಿಕ್ಕಿಬಿದ್ದಿದೆ. ವಾಹನದಲ್ಲಿ ನಾಸರ್ ಸಂಬಂಧಿಕರೂ ಇದ್ದರು. ಮೊದಲ ಹಂತದಲ್ಲಿ ನಾಸರ್ ಎರ್ನಾಕುಳಂನ ಯಾವುದೇ ಠಾಣೆಯಲ್ಲಿ ಶರಣಾಗಬಹುದು ಎಂಬ ಸೂಚನೆ ಪೆÇಲೀಸರಿಗೆ ಸಿಕ್ಕಿತ್ತು. ವಾಹನದಲ್ಲಿದ್ದ ನಾಲ್ವರು ಸಂಬಂಧಿಕರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ನಾಸರ್ ವಿರುದ್ಧ ಸ್ಥಳೀಯರು ತೀವ್ರ ಟೀಕೆ ಮಾಡುತ್ತಿದ್ದಾರೆ. ದೋಣಿ ವಿಹಾರಕ್ಕಾಗಿ ಅಳಿವೆಯನ್ನು ಆಳಗೊಳಿಸಿ ಮೀನುಗಾರಿಕಾ ದೋಣಿಯ ಆಕಾರ ಬದಲಿಸಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಎಂದು ವರದಿಯಾಗಿದೆ. ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries