ಕಾಸರಗೋಡು: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಕಾಸರಗೋಡಿನ ಪರವನಡ್ಕದಲ್ಲಿರುವ ಬಾಲಕಿಯರ ಸರ್ಕಾರಿ ಮಾದರಿ ವಸತಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ಲಸ್ ಒನ್ (ವಿಜ್ಞಾನ, ವಾಣಿಜ್ಯ) ವಿಭಾಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ತಲಾ 50 ಸೀಟುಗಳಿದ್ದು ಎಸ್‍ಟಿ, ಎಸ್ ವಿಭಾಗದಲ್ಲಿ ತಲಾ 35 ಸೀಟು, ಎಸ್ಸಿ ವಿಭಾಗದಲ್ಲಿ ತಲಾ 10 ಸೀಟು, ಸಾಮಾನ್ಯ ವಿಭಾಗದಲ್ಲಿ ತಲಾ 5ಸೀಟುಗಳನ್ನು ಹಂಚಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 9 ಕೊನೆಯ ದಿನಾಂಕವಾಗಿದ್ದು, ಅರ್ಜಿದಾರರ ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು. ಮೌಲ್ಯಮಾಪನದ ಆಧಾರದ ಮೇಲೆ ಅರ್ಜಿದಾರರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(7624848969, 9446696011)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.