HEALTH TIPS

ಮುನಿಯೂರು ಶ್ರೀ ಮಹಾವಿಷ್ಣು ದೇವರಿಗೆ ನಾಳೆ ಸಹಸ್ರ ಬ್ರಹ್ಮಕಲಶಾಭಿಷೇಕ

ಬದಿಯಡ್ಕ: ಭಗವದ್ಭಕ್ತರ ಶ್ರದ್ಧಾಭಕ್ತಿಯ ಪ್ರಾರ್ಥನೆಯೊಂದಿಗೆ ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರ ನೇತೃತ್ವದಲ್ಲಿ ಶನಿವಾರ ಪೂರ್ವಾಹ್ನ ಗಣಪತಿ ಹೋಮ, ಇಂದ್ರಾದಿ ದಿಕ್ಪಾಲಕರ ಪ್ರತಿಷ್ಠೆ, ಸಪ್ತಮಾತೃಕ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರ ಪೂಜೆ ಸೋಪಾನ ಪೂಜೆ ನಡೆಯಿತು. ಸಂಜೆ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತುಳುನಾಡ ಗಾನಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು. 


ಭಾನುವಾರ ಬೆಳಗ್ಗೆ ಗಣಪತಿ ಹೋಮ,ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ತತ್ವ ಹೋಮ, ತತ್ವಕಲಶಪೂಜೆ, ಕುಂಭೇಶ ಕರ್ಕರಿ ಪೂಜೆ, ಅಂಕುರ ಪೂಜೆ, ಸೋಪಾನ ಪೂಜೆ, ಬ್ರಹ್ಮಕಲಶ ಪೂಜೆ, ಮಧ್ಯಾಹ್ನ ಸೋಪಾನ ಪೂಜೆ, ಮಹಾಪೂಜೆ, ಸಂಜೆ 6ರಿಂದ ಪರಿಕಲಶಪೂಜೆ, ಅವಾಸ ಹೋಮ, ಅವಾಸ ಬಲಿ, ಕಲಶಾವಾಸ, ಸೋಪಾನ ಪೂಜೆ, ಮಹಾಬಲಿ, ಪೀಠಾವಾಸ, ರಾತ್ರಿಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ 5.30 ರಿಂದ ಧಾರ್ಮಿಕ ಸಭೆ ನಡೆಯಿತು. ಉಡುಪಿ ಕಾಣಿಯೂರು ಮಠದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ವಾಸ್ತುಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ, ಕಾರ್ಕಳ ಶಿಲ್ಪಕಲಾಕೇಂದ್ರದ ಗುಣವಂತೇಶ್ವರ ಭಟ್ ದಿವ್ಯ ಉಪಸ್ಥಿತರಿರುವರು. ನಾಡಿನ ಗಣ್ಯರುಗಳಾದ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಎಡಕ್ಕಾನ ಮಹಾಬಲೇಶ್ವರ ಭಟ್, ಕೆ.ಕೆ.ಶೆಟ್ಟಿ ಕುತ್ತಿಕ್ಕಾರು, ಶಿವಶಂಕರ ನೆಕ್ರಾಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ದಿನೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಂಜೆ 7 ರಿಂದ ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶ್ರೀಹರಿದರ್ಶನ ಯಕ್ಷಗಾನ ಬಯಲಾಟ ಡಾ.ಸತೀಶ್ ಪುಣಿಂಚತ್ತಾಯ ಪ್ರಾಯೋಜಕತ್ವದಲ್ಲಿ ನಡೆಯಿತು.  

ಇಂದು (ಫೆ.9) ಸೋಮವಾರ ಬ್ರಹ್ಮಕಲಶಾಭಿಷೇಕ :

ಪೂರ್ವಾಹ್ನ 5 ಗಂಟೆಗೆ ಗಣಪತಿ ಹೋಮ, ಕವಾಟೋದ್ಘಾಟನೆ, ಶಾಂತಿ ಪ್ರಾಯಶ್ಚಿತ್ತ ಮತ್ತು ತತ್ವ ಹೋಮಗಳ ಕಲಶಾಭಿಷೇಕ, 1008 ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲ ಮಂತ್ರಾಕ್ಷತೆ, ಸಂಜೆ 7 ರಿಂದ ಶ್ರೀದೇವರ ಉತ್ಸವ ಬಲಿ, ಬಟ್ಲುಕಾಣಿಕೆ. ಮಧ್ಯಾಹ್ನ 1 ಗಂಟೆಯಿಂದ ಭಕ್ತಿಭಾವ ಗಾನ ಯಾನ ರಾಘವೇಂದ್ರ ಕಿಗ್ಗ ಶೃಂಗೇರಿ ಇವರಿಂದ, 2.30 ರಿಂದ ಶ್ರೀ ಗೋಪಾಲಕೃಷ್ಣ ಕಲಾಸಂಘ ದೇಲಂಪಾಡಿ ಬನಾರಿ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries